ಬದಲಾವಣೆ ಜಗದ ನಿಯಮ…ಸಮಾಜ ಬಾಂಧವರಲ್ಲಿ ತುಂಬಾ ಪರಿವರ್ತನೆಯಾಗಿದೆ:ಆನೆಗುಂದಿ ಶ್ರೀ

Picture of RB NEWS

RB NEWS

Bureau Report

-ಅವರು ಚಾತುರ್ಮಾಸ್ಯ ಪೂರ್ವಭಾವಿ ಕ್ಷೇತ್ರ ಸಂದರ್ಶನದ ಭಾಗವಾಗಿ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನಕ್ಕೆ ಆಗಮಿಸಿ ಶಿಷ್ಯ ವೃಂದದವರಿಗೆ ಆಶೀರ್ವಚನ ನೀಡುತ್ತಿದ್ದರು.

ತಮ್ಮ ದೀಕ್ಷೆ ಕಟಪಾಡಿ ಪರಮ ಗುರುಗಳ ಸನ್ನಿಧಿಯಲ್ಲಿ ನಡೆದಿದ್ದು, ದೀಕ್ಷಾ ಪೂರ್ವ ಮತ್ತು ದೀಕ್ಷಾ ದಿನಗಳಲ್ಲಿ ಸಮಾಜ ಬಾಂಧವರ ಚಿಂತನೆ ನಿಲುವುಗಳನ್ನ ಮೆಲುಕು ಹಾಕಿದ ಅವರು ನಂತರ ದಿನಗಳಲ್ಲಿನ ಸಮಾಜಮುಖಿ ಅಭಿವೃದ್ಧಿ ಕಾರ್ಯಗಳಿಂದ ಇದೀಗ ಆನೆಗುಂದಿ ಮಹಾಸಂಸ್ಥಾನವು ಕರ್ನಾಟಕ, ಕೇರಳ,ತಮಿಳುನಾಡು, ಆಂಧ್ರ ಪ್ರದೇಶದ ಮಹಾರಾಷ್ಟ್ರ ಮತ್ತು ಉತ್ತರ ಭಾರತದಲ್ಲಿ ಪ್ರಸಿದ್ಧಿಯನ್ನು ಪಡೆಯುವಂತಾಗಿದೆ.

ಪ್ರಮುಖವಾಗಿ ಶ್ರೀ ನಾಗದರ್ಮೇಂದ್ರ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆ, ಪಟ್ಟಾಭಿಷೇಕ, ವರ್ಧಂತಿ ಉತ್ಸವ ಚಾತುರ್ಮಾಸ್ಯ ಹಾಗೆ ಆನೆಗುಂದಿ ಪ್ರತಿಷ್ಠಾನ,ಗುರು ಸೇವಾ ಪರಿಷತ್ ಆಸೆಟ್, ಮಾತೃ ಮಂಡಳಿ, ಪೂರ್ವಚಾತ್ರ ಸಂಘದವಿವಿಧ ಚಟುವಟಿಕೆಗಳು ಪೂರಕವಾಗಿ ಸೇರುವೆ ಎಂದು ನುಡಿದರು.

ವೇದ ಪಾಠ ಶಾಲೆಯಲ್ಲಿ ಇದೀಗ ಉತ್ತರ ಕನ್ನಡ, ಸೇರಿದಂತೆ ಇತರ ರಾಜ್ಯಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿನ ಪ್ರದೇಶಗಳ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆಗೈದರೆ ಸ್ಥಳೀಯರಿಗೆ ಹೆಚ್ಚು ಪ್ರಯೋಜನ. ಈ ನಿಟ್ಟಿನಲ್ಲಿ ಸಮಾಜ ಬಂಧುಗಳು ಚಿಂತನೆ ನಡೆಸಬೇಕು ಎಂದು ಅವರು ನುಡಿದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಮುರಹರಿ ಆಚಾರ್ಯ ಉಡುಪಿ ಅಧ್ಯಕ್ಷತೆ ವಹಿಸಿದ್ದರು.

ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪ್ರತಿನಿಧಿಗಳಾಗಿ ಆಗಮಿಸಿದ ಸಮಿತಿಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇಯರ ಹೋಬಳಿ ಚಾತುರ್ಮಾಸ್ಯ ವ್ರತ ಆಚರಣೆಯಲ್ಲಿನ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರು, ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಆನೆಗುಂದಿ ಪಂಚಸಿಂಹಾಸ ಸರಸ್ವತಿ ಪೀಠದ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ ಉಪಸ್ಥಿತರಿದ್ದರು.
ಕ್ಷೇತ್ರದ ಎರಡನೇ ಮೊಕ್ತೇಸರ ಶಿಲ್ಪಿ ಗಣಪತಿ ಆಚಾರ್ಯ ಬಿಳಿಯಾರು ಶಂಕರಪುರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮೂರನೇ ಮೊಕ್ತೇಸರ ಗಂಗಾಧರ ಆಚಾರ್ಯ ದಿಂಡಿಬೆಟ್ಟು ವಂದಿಸಿದರು.

ಕುಲಗುರುಗಳವರು ಕಟಪಾಡಿಯಲ್ಲಿನ ತಮ್ಮ ಪರಮ ಗುರುಗಳಾದ ಜಗದ್ಗುರು ಅನಂತ ಶ್ರೀ ವಿಭೂಷಿತ ನಾಗಧರ್ಮೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಅಧಿಷ್ಠಾನದಲ್ಲಿ ಮಹಾಭಿಷೇಕ ಪೂಜೆಗಳನ್ನು ನೆರವೇರಿಸಿದರು.


ಬಳಿಕ ಕಟಪಾಡಿ ಮಹಾಸಂಸ್ಥಾನದಲ್ಲಿ ಪೂಜಾ ಸೇವೆ ಸಲ್ಲಿಸಿದ ಶ್ರೀಗಳವರು ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಶಾಲಿನಿ ಶಿವರಾಮ ಆಚಾರ್ಯ,ಹರೀಶ್ ಆಚಾರ್ಯ ಕಟಪಾಡಿ,ರೂಪೇಶ್ ಆಚಾರ್ಯ ಮಂಚಕಲ್,ಸುಂದರ ಆಚಾರ್ಯ ಕಟಪಾಡಿ,ಶಿವರಾಮ ಆಚಾರ್ಯ ಬೆಳಪು,ಪ್ರೇಮಾನಂದ ಆಚಾರ್ಯ,ರವಿ
ಆಚಾರ್ಯ ಕಟಪಾಡಿ,ಸುಧಾಕರ ಆಚಾರ್ಯ ಶಂಕರಪುರ,
ವಿಶ್ವಕರ್ಮ ಯುವ ಸಂಘಟನೆ ಕಾಪು ಸೇರಿದಂತೆ ಮಹಿಳಾ ಬಳಗ, ಯುವಕ ಸೇವಾದಳ,ನಾಗಧರ್ಮೇಂದ್ರ ಸ್ವಾಮಿ ಸೇವಾ ಸಮಿತಿ,ಹಿತ ರಕ್ಷಣಾ ಸಮಿತಿ ಇವುಗಳ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.

ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಚಿತೈಸಿದ ಆನೆಗುಂದಿ ಶ್ರೀಗಳವರನ್ನು ಆಡಳಿತ ಮೊಕ್ತೇಸರ ಗಣೇಶ್ ಆಚಾರ್ಯ ಕಾಪು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಆನೆಗುಂದಿ ಶ್ರೀಗಳವರು ಕಾಪು ದೇವಸ್ಥಾನವು ಮಹಾಸಂಸ್ಥಾನಕ್ಕೆ ಅತಿ ಹತ್ತಿರವಿರುವ ಸಮಾಜದ ದೇವಸ್ಥಾನ,ತಮ್ಮ ದೀಕ್ಷಾಪೂರ್ವ ಸಮಯದಿಂದಲೂ ಮೊದಲ ಪಂಕ್ತಿಯಲ್ಲಿದ್ದು ಸೇವೆಯನ್ನು ಸಲ್ಲಿಸುತ್ತಿರುವುದನ್ನು ಕಂಡಿದ್ದೇವೆ. ಕೂಡುವಳಿಕೆ ವ್ಯವಸ್ಥೆ ಇಲ್ಲದಿದ್ದರೂ ದೇವಸ್ಥಾನದ ಎಲ್ಲಾ ವ್ಯವಸ್ಥೆಗಳು ಉತ್ತಮ ಮಟ್ಟದಲ್ಲಿ ನಡೆಯುತ್ತಿರುವುದು ಅತ್ಯಂತ ಸಂತಸ ತಂದಿದೆ. ದೇವಸ್ಥಾನವು ಇನ್ನಷ್ಟು ಅಭಿವೃದ್ಧಿಯನ್ನು ಹೊಂದಲಿ, ಮಹಾಸಂಸ್ಥಾನದೊಂದಿಗೆ ಇನ್ನಷ್ಟು ನಿಕಟವಾಗಿ ಸೇವೆ ಸಲ್ಲಿಸುವ ಅವಕಾಶಗಳು ದೊರೆಯಲಿ ಎಂದು ಆಶಿಸಿದರು.

ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಹಾಗೂ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ಯ ಕಂಬಾರು ಚಾತುರ್ಮಾಸ್ಯದ ವಿವರಣೆಗಳನ್ನು ನೀಡಿದರು.
ಸಭೆಯಲ್ಲಿ ಶ್ರೀಕಾಂತ ಆಚಾರ್ಯ ಕಾಪು, ಗೋವಿಂದ ಆಚಾರ್ಯ ಕಾಪು,ದಿನೇಶ್ ಆಚಾರ್ಯ ಕಾಪು,ರಾಜಗೋಪಾಲ್ ಆಚಾರ್ಯ ಕಾಪು,ಆಶಾ ಸುಧೀಶ್ ಆಚಾರ್ಯ, ರಾಘವೇಂದ್ರ ಆಚಾರ್ಯ,ಗುರುಪ್ರಸಾದ್ ಆಚಾರ್ಯ,ಸುದೀಶ್ ಆಚಾರ್ಯ ರಾಜೇಶ್ ಆಚಾರ್ಯ, ಹರೀಶ್ ಆಚಾರ್ಯ ಕಳತ್ತೂರು ಸೇರಿದಂತೆ ಆಡಳಿತ ಸಮಿತಿ,ಮಹಿಳಾ ಮಂಡಳಿ, ಯುವಕ ಸೇವಾದಳ ಸಮಿತಿಗಳ ಸದಸ್ಯರು ಭಾಗವಹಿಸಿದ್ದರು.

ಜಗದ್ಗುರುಗಳೊಂದಿಗೆ
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪ್ರತಿನಿಧಿಗಳಾದ ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ ಕಾಡಬೆಟ್ಟು ನಾಗರಾಜ ಆಚಾರ್ಯ,ಪ್ರಶಾಂತ ಆಚಾರ್ಯ ಕಟಪಾಡಿ, ಜನಾರ್ದನ ಆಚಾರ್ಯ ಕನ್ಯಾನ,ಜಯಕರ ಆಚಾರ್ಯ ಕರಂಬಳ್ಳಿ, ರತ್ನಾಕರ ಆಚಾರ್ಯ ಉದ್ಯಾವರ, ದೀಪಾ ಸುರೇಶ್ ಆಚಾರ್ಯ ಉಡುಪಿ, ವಾದಿರಾಜ ಆಚಾರ್ಯ ಮಂಗಳೂರು,ವಸಂತ ಆಚಾರ್ಯ ಮಜೂರು,ದಯಾನಂದ ಆಚಾರ್ಯ ಕೆಳಾರ್ಕಳಬೆಟ್ಟು,ಪ್ರಸಾದ್ ಆಚಾರ್ಯ ಕಾಡಬೆಟ್ಟು, ಗಣೇಶ್ ಆಚಾರ್ಯ ಕೋಟ,ವಿಠಲ ಆಚಾರ್ಯ ಎಲ್ಲೂರು,ಯೋಗೀಶ್ ಆಚಾರ್ಯ ಕರಂಬಳ್ಳಿ,ಸುರೇಶ್ ಆಚಾರ್ಯ ಇರಂದಾಡಿ ಭಾಗವಹಿಸಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top