ಮಾಲತಿ ಪ್ರಭು ಅವರಿಗೆ ಪಿಎಚ್‌ಡಿ ಪದವಿ

Picture of RB NEWS

RB NEWS

Bureau Report

ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನ ಹಿಂದಿ ಉಪನ್ಯಾಸಕಿ ಮಾಲತಿ ಪ್ರಭು (ಮಾಲತಿ ಜಿ.ಪೈ) ಅವರು ಮಂಡಿಸಿದ “ಹಿಂದಿ ಕೇ ಲೋಕ್ ಗೀತೋಂ ಮೇ ಗ್ರಾಮೀಣ್ ಜೀವನ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಉತ್ತರ ಪ್ರದೇಶದ ಮಹಾಮಾಯ ಪ್ರಾವಿಧಿಕ ವಿಶ್ವವಿದ್ಯಾಲಯ (ನೋಯ್ದ)ದ ಭಾಷಾ ಅಧ್ಯಯನ ವಿಭಾಗವು ಪಿಎಚ್‌ಡಿ ಪದವಿಯನ್ನು ನೀಡಿದೆ.

ಅವರು ಉತ್ತರ ಪ್ರದೇಶದ ಮಹಾಮಾಯ ಪ್ರಾವಿಧಿಕ ವಿಶ್ವವಿದ್ಯಾಲಯ(ನೋಯ್ದ)ದ ಭಾಷಾ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ರಾಮನ್ ಶರ್ಮ ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧವನ್ನು ಮಂಡಿಸಿದ್ದರು.

ಮಾಲತಿ ಪ್ರಭು ಈ ಹಿಂದೆ 2009ರಲ್ಲಿ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ ತಿರುಪತಿಯಿಂದ ಡಾ.ಜಿ. ಭಾಸ್ಕರ ಮಯ್ಯ ಮಾರ್ಗದರ್ಶನದಲ್ಲಿ “ವೋಲ್ಟಾ ಸೆ ಗಂಗಾ ತಕ್ – ಏಕ್ ಸಾಂಸ್ಕೃತಿಕ್ ಅಧ್ಯಯನ್” ಎಂಬ ವಿಷಯದಲ್ಲಿ ಎಂಫಿಲ್ ಪದವಿಯನ್ನೂ ಪಡೆದಿರುತ್ತಾರೆ.

ಗೋವಾ ಮತ್ತು ಗೋಕರ್ಣದ ಪೃಥ್ವಿ ಏರ್ ಕಂಡಿಷನರ್ಸ್ ನ ಮಾಲಕ ಆರ್. ಗಣೇಶ್ ಪೈ ಅವರ ಧರ್ಮಪತ್ನಿಯಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top