ಎಳೆಯ ಮಕ್ಕಳನ್ನು ದುಡಿಸುವುದು ಅಪರಾಧ

Picture of RB NEWS

RB NEWS

Bureau Report

ಕಾರ್ಕಳ : ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ.), ಕಾರ್ಕಳ ಮತ್ತು ಶ್ರೀಮದ್ ಭುವನೇಂದ್ರ ಪ್ರೌಢಶಾಲೆ, ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಬಾಲ ಕಾರ್ಮಿಕ ನಿಷೇಧ ದಿನಾಚರಣೆ ಅಂಗವಾಗಿ ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮ ಶ್ರೀಮದ್ ಭುವನೇಂದ್ರ ಹೈಸ್ಕೂಲಿನಲ್ಲಿ ಜರಗಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ಮತ್ತು ಎ.ಸಿ.ಜೆ.ಎಂ. ನ್ಯಾಯಾಧೀಶರು, ಕಾರ್ಕಳ ಹಾಗೂ ಕಾರ್ಕಳ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಶರ್ಮಿಳಾ ಸಿ.ಎಸ್. ಮಾತನಾಡಿ, 6 ವರ್ಷದಿಂದ 14 ವರ್ಷದೊಳಗಿನ ಮಕ್ಕಳು ಶಾಲೆ ಬಿಟ್ಟು ಸಂಬಳಕ್ಕೆ ದುಡಿಯಲು ಹೋದರೆ ಅದು ಬಾಲ ಕಾರ್ಮಿಕರ ಪದ್ಧತಿಯಾಗುತ್ತದೆ. ಆದರೆ ಶಿಕ್ಷಣ ಪಡೆಯುತ್ತಾ ಹಿರಿಯರಿಗೆ ಕೆಲಸಕ್ಕೆ ಸಹಾಯ ಮಾಡಿದರೆ ಅದು ಬಾಲ ಕಾರ್ಮಿಕ ಪದ್ಧತಿಯಾಗುವುದಿಲ್ಲವೆಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಅರುಣ್ ಕುಮಾರ್ ಶೆಟ್ಟಿ ಮಾತನಾಡಿ, 2002 ಇಸವಿ ಜೂನ್ 12ನ್ನು ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯು ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯು ಅಂತರಾಷ್ಟ್ರೀಯ ಬಾಲ ಕಾರ್ಮಿಕ ನಿಷೇಧ ದಿನಾಚರಣೆ ಎಂದು ಘೋಷಿಸಿತು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಎಂ. ಶ್ವೇತ ವಿಪುಲ್ ತೇಜ್‌, ಮಕ್ಕಳು ಕಾರ್ಮಿಕ ಕೆಲಸವನ್ನು ಮಾಡುತ್ತಿದ್ದಾರೆ ಏನು ಮಾಡಬೇಕು, ಹಿರಿಯರು ವಿದ್ಯಾಭ್ಯಾಸಕ್ಕೆ ಮಕ್ಕಳನ್ನು ಕಳುಹಿಸಬೇಕೆ ಹೊರತು ಸಂಬಳಕ್ಕಾಗಿ ದುಡಿಯಲು ಅಲ್ಲ. ಸಂವಿಧಾನದಲ್ಲಿ ಮಕ್ಕಳಿಗೆ 14 ವರ್ಷ ತನಕ ಉಚಿತ ವಿದ್ಯಾಭ್ಯಾಸವನ್ನು ನೀಡಬೇಕೆಂದಿದೆ. ಮಕ್ಕಳು ಸಂವಿಧಾನವನ್ನು ಸಹ ಕಲಿಯಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ನಾರಾಯಣ ಶೆಣೈ ಆರ್., ಬಾಲಕಾರ್ಮಿಕ ನಿಷೇಧದಲ್ಲಿ ತುಂಬಾ ಬೆಳವಣಿಗೆಯಾಗಿದೆ. ಇನ್ನೂ ಹೆಚ್ಚಿನದು ಆಗಲಿಕೆ ಬಾಕಿ ಇದೆ ಎಂದು ಬಾಲ ಕಾರ್ಮಿಕರ ನಿರ್ಮೂಲನೆ ಮಾಡೋಣ ಎಂಬುದು ಈ ವರ್ಷದ ಧೈಯ ವಾಕ್ಯವಾಗಿದೆ ಎಂದರು.

ಧಾರಿಣಿ. ಉಪಾಧ್ಯಾಯ ಪ್ರಾರ್ಥನೆ ಮಾಡಿದರು. ಅಭೀಶ್ ಶೆಟ್ಟಿ ಸ್ವಾಗತಿಸಿ, ವಂದಿತಾ ಶೆಣೈ ಧನ್ಯವಾದಗೈದರು. ಮನಸ್ವಿ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top