ಸಾಧನೆಗೆ ಪ್ರತಿಫಲ : ಗೌರವಾರ್ಪಣೆ ಸ್ವೀಕರ

Picture of RB NEWS

RB NEWS

Bureau Report


ಶಿರ್ತಾಡಿ(ಮೂಡುಬಿದಿರೆ) : ” ಸಾಧನೆಗೆ ಶ್ರಮವೇ ಮೂಲ” ಸಾಧನೆಯ ರಥದಲ್ಲಿ ಸಾಗುವ ಯಾತ್ರಿಕ,ಸಹಾಯ ಮಾಡಿದ ಸಜ್ಜನರ ಮರೆಯದೆ ಸಾಗಿದರೆ ಸಾಧಿಸಿದ ಸಾಧನೆಗೆ ಸೂಕ್ತ ಬೆಲೆ ಇರುವುದು, ಎಂಬಂತೆ 2024/25 ನೇ ಸಾಲಿನಲ್ಲಿ ಶೇ. 100 ಫಲಿತಾಂಶವನ್ನು ಶಿರ್ತಾಡಿ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ ಪಡೆದಿದೆ. ಇಲ್ಲಿನ ವಿದ್ಯಾರ್ಥಿನಿ ತನ್ವಿ ನಾರಾಯಣ ಪೂಜಾರಿ (621ಅಂಕ 99.36%) ಅತ್ಯಧಿಕ ಅಂಕಗಳಿಸಿದ್ದಾಳೆ.

ಮಂಗಳೂರು ರೋಜರ್ ಕಲ್ಚರಲ್ ಸಭಾಭವನದಲ್ಲಿ ನಡೆದ ಶೈಕ್ಷಣಿಕ ಸಮ್ಮೇಳನದಲ್ಲಿ ದಕ್ಷಿಣ ಕನ್ನಡ ಡಿಡಿಪಿಐ ಗೋವಿಂದ ಮಡಿವಾಳ ಇವರಿಂದ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯಿನಿ ಬಿಂದು ಮ್ಯಾಕ್ಸಿo ಡಿಸೋಜಾರವರು ಗೌರವಾರ್ಪಣೆಯನ್ನು ಸ್ವೀಕರಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top