ನೀಟ್ ಪರೀಕ್ಷಾರ್ಥಿಗೆ ವಂಚನೆ ದೂರು ದಾಖಲು

Picture of RB NEWS

RB NEWS

Bureau Report

ಉಡುಪಿ : ನೀಟ್ ಪರೀಕ್ಷಾರ್ಥಿಯೊಬ್ಬನಿಗೆ ಸಾಮಾಜಿಕ ಜಾಲ ಮೂಲಕ ವಂಚನೆ ನಡೆಸಿದ್ದು, ಈ ಕುರಿತು ಉಡುಪಿ ಜಿಲ್ಲಾ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಉಡುಪಿ ಬ್ರಹ್ಮಗಿರಿ ನಾಯರಕೆರೆ ರಸ್ತೆಯ ಶಿಪಾಲ್ ಗ್ರಾಸ್ ಲ್ಯಾಂಡ್ ಪ್ಲಾಟ್ ನಲ್ಲಿ ವಾಸವಾಗಿರುವ ರೋಷನ್ ಶೆಟ್ಟಿ ಪ್ರಕರಣದ ದೂರುದಾರರು. 

ಪಿರ್ಯಾದಿದಾರ ರೋಷನ್ ಶೆಟ್ಟಿ ಅವರ ಮಗ ರೊನಾಕ್ ಆರ್ ಶೆಟ್ಟಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು,  NTA ದಿಂದ  ಇತ್ತಿಚೆಗೆ ನಡೆದ ನೀಟ್  ಪರೀಕ್ಷೆಯನ್ನ ಬರೆದಿರುತ್ತಾರೆ.

 ಪಿರ್ಯಾದಿದಾರರ ಮಗ   ರೊನಾಕ್ ಆರ್ ಶೆಟ್ಟಿ ನೀಟ್  ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ Editing Master (@EDITINGMASTER-d6r) ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ how to digitally alter and fake exam results for national-level exams such as NEET, JEE, and CBSE ಎಂಬ ವಿಡಿಯೋಗಳು ಇದ್ದು, ಸದ್ರಿ ಯೂಟ್ಯೂಬ್ ಚಾನೆಲ್ ನಲ್ಲಿ 9518421109 8954785161 ಎಂಬ ಎರಡು ಮೊಬೈಲ್ ನಂಬ್ರ ನೀಡಲಾಗಿತ್ತು.  

ಪಿರ್ಯಾದಿದಾರರ ಮಗ   ರೊನಾಕ್ ಆರ್ ಶೆಟ್ಟಿ ವಾಟ್ಯಾಪ್ ಮೂಲಕ ಅವರನ್ನು ಸಂಪರ್ಕಿಸಿದ್ದರು. 

  ಯೂಟ್ಯೂಬ್ ಚಾನೆಲ್ ನವರು ತಮ್ಮನ್ನ ವಿಷ್ಣು ಕುಮಾರ್ ತಂದೆ: ಸಂಜೀವ್ ಕುಮಾರ್ ಎಂದು ಪರಿಚಯಿಸಿಕೊಂಡಿರುತ್ತಾರೆ. 

ನಂತರದಲ್ಲಿ ಪಿರ್ಯಾದಿದಾರರ ಮಗನಿಗೆ  ನೀಟ್ ಅಂಕ ಪಟ್ಟಿ ಹಾಗೂ ಓಎಂಆರ್ ನೀಡುವುದಾಗಿ ತಿಳಿಸಿ ಒಟ್ಟು 17,000 ರೂ ಗಳನ್ನು ವರ್ಗಾಯಿಸಿಕೊಂಡು ಡಿಜಿಟಲ್ ಆಗಿ ನೀಟ್ ಪರೀಕ್ಷೆಯ ನಕಲಿ ಅಂಕ ಪಟ್ಟಿ ಹಾಗೂ ಓಎಂಆರ್ ಶೀಟ್ ವಾಟ್ಯಾಪ್ ಮೂಲಕ ಕಳುಹಿಸಿಕೊಟ್ಟಿರುತ್ತಾರೆ. 

ನಕಲೀ ದಾಖಲೆಗಳನ್ನು ಸೃಷ್ಟಿಸಿ ಪಿರ್ಯಾದಿದಾರರ ಮಗನಿಗೆ ವಂಚಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿರುವ    ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ದೂರು ನೀಡಿರುವುದಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top