ಡಾ. ಪುರುಷೋತ್ತಮ್ ಬಿಳಿಮಲೆಯವರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿಗೆ
ಕಾಸರಗೋಡು : ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತಮ ಬಿಳಿಮಲೆ ಯವರಿಗೆ, ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನದ ಪ್ರತಿಷ್ಠಿತ ಅಂತರ್ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ “ನೀಡಿ ಪುರಸ್ಕರಿಸಲಾಯಿತು.
ಕನ್ನಡ ಭವನದ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ದಂಪತಿಗಳು ಪ್ರಶಸ್ತಿ ಪ್ರದಾನ ಮಾಡಿದರು.
ಕಾಸರಗೋಡಿನ ಏತಡ್ಕ ನಾರಾಯಣ ಅಲೆವೂರಾಯರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ. ಆರ್. ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದರು.
ಪ್ರೊ. ಎ ಶ್ರೀನಾಥ್ ಬಿಳಿಮಲೆಯವರ ವ್ಯಕ್ತಿ ಸಾಧನೆ ಪರಿಚಯ ನೀಡಿದರು. ಮುಖ್ಯ ಅತಿಥಿಯಾಗಿ ಡಾ. ನವೀನ್ ಕುಲಮರ್ವ, ಪತ್ರಕರ್ತ ಪುರುಷೋತ್ತಮ್ ಭಟ್, ಪತ್ರಕರ್ತ ಪುರುಷೋತ್ತಮ ಪೆರ್ಲ ಮಾತನಾಡಿದರು.
ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ ಉಪಾಧ್ಯಕ್ಷ ನರಸಿಂಹ ಭಟ್ ಏತಡ್ಕ ಶಾಲು ಹೊದಿಸಿ, ಪ್ರೊ. ಎ ಶ್ರೀನಾಥ್ ಹಾರ ತೊಡಿಸಿ ಸಂಧ್ಯಾ ರಾಣಿ ಟೀಚರ್ ಸ್ಮರಣಿಕೆ ನೀಡಿ, ವಾಮನ್ ರಾವ್ ಬೇಕಲ್ ಪಯಸ್ವಿನಿ ಪ್ರಶಸ್ತಿ ನೀಡಿ ಗೌರವಿಸಿದರು.
ಕಾಸರಗೋಡು ಪ್ರದೇಶದ ಕನ್ನಡಿಗರ ಅಥಿತ್ಯ, ಗೌರವ ಭಾವಕ್ಕೆ ಶರಣು, ಇಲ್ಲಿಯವರು ತೋರುವ ಪ್ರೀತಿ, ಆದರಗಳು ಆದರಣೀಯ, ಕಾಸರಗೋಡು ಕನ್ನಡಿಗರು ಅನುಭವಿಸುತ್ತಿರುವ ಕನ್ನಡಪರ ಸಂಕಷ್ಟಗಳ ಬಗ್ಗೆ ಪೂರ್ಣ ಅರಿವಿದ್ದ ನಾನು ಪ್ರಾಧಿಕಾರ ದ ಸೀಮಿತ ಪರಿದಿಗೂ ಮೀರಿ ಸಹಾಯ ಸಹಕಾರಗಳನ್ನು ಮಾಡುವ ಭರವಸೆ ನೀಡಿದರು.
ವಾಮನ್ ರಾವ್ ಬೇಕಲ್ ಸ್ವಾಗತಿಸಿದರು. ಪುರುಷೋತ್ತಮ್ ಭಟ್ ನಿರೂಪಿಸಿದರು. ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.





































