ಮನುಕುಲದ ವಿಕಾಸವೇ ಶಿಕ್ಷಣ -ಪ್ರಭಾತ್ ಬಲ್ನಾಡ್
ಮೂಡುಬಿದಿರೆ : ಮನುಕುಲದ ವಿಕಾಸವೇ ಶಿಕ್ಷಣ. ಕೌತುಕವನ್ನು ಜೀವಂತವಾಗಿರಿಸಿದರೆ ಕಲಿಕೆಯ ಪಯಣ ಎಂದಿಗೂ ನಿಲ್ಲದು. ವಿದ್ಯಾಭ್ಯಾಸದ ಜೊತೆಗೆ ಆತ್ಮವಿಶ್ವಾಸವೊಂದಿದ್ದರೆ ಗುರಿ ತಲುಪುವುದು ಸುಲಭ. ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳು ಪ್ರೇರೇಪಣೆಯಾಗಬೇಕು ಎಂದು ಪ್ರಭಾತ್ ಬಲ್ನಾಡ್ ಹೇಳಿದರು.
ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂನ್ 14ರಂದು ಆಯೋಜಿಸಲಾಗಿದ್ದ ಪೋಷಕರ-ಶಿಕ್ಷಕರ ಸಂಘದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತಮಾಡಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಬಿಂದು ಡಿಸೋಜಾ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವ್ಯಕ್ತಿತ್ವ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಉಪಯುಕ್ತ ಸಲಹೆ-ಸೂಚನೆಗಳನ್ನು ನೀಡಿದರು.
ಸಹ ಶಿಕ್ಷಕಿ ಶಶಿಕಲಾ ನಿರೂಪಿದರು. ಸಹ ಶಿಕ್ಷಕಿ ರಾಜೇಶ್ವರಿ ಸ್ವಾಗತಿಸಿದರು. ಸಹ ಶಿಕ್ಷಕಿ ಹೇಮಲತಾ 2024–25 ನೇ ಶೈಕ್ಷಣಿಕ ವರ್ಷದ ವರದಿಯನ್ನು ವಾಚಿಸಿದರು. ಸಹ ಶಿಕ್ಷಕಿ ವನಿತಾ ಜೈನ್ ಧನ್ಯವಾದವಿತ್ತರು.





































