ಭಾರತೀಯ ಸೇನೆಗೆ ಆಯ್ಕೆಯಾದ ಸಾಗರ್ ಆಚಾರ್ಯ ಅವರಿಗೆ ಶಾಸಕರಿಂದ ಅಭಿನಂದನೆ.

Picture of RB NEWS

RB NEWS

Bureau Report

ಕಾರ್ಕಳ : ಭಾರತೀಯ ಸೇನೆಗೆ ನಮ್ಮ ಕಾರ್ಕಳದ ಬೈಲೂರಿನ ಯುವಕ, ಕೌಡೂರು ಗ್ರಾಮದ ಸುಧಾಕರ ಆಚಾರ್ಯ ಮತ್ತು ವೀಣಾ ದಂಪತಿಗಳ ಪುತ್ರ ಸಾಗರ್‌ ಆಚಾರ್ಯ ಇವರು ಅಗ್ನಿಪಥ್‌ ಯೋಜನೆಯಲ್ಲಿ ಆಯ್ಕೆಯಾಗಿ ಬೆಂಗಳೂರಿನ ಸೆಂಟರ್‌ನಲ್ಲಿ ತರಬೇತಿ ಪಡೆದು ಇದೀಗ ಅರುಣಾಚಲ ಪ್ರದೇಶದಲ್ಲಿ ಕರ್ತವ್ಯ ನಿಭಾಯಿಸಲು ತೆರಳಲಿದ್ದಾರೆ.
ಅದೇ ಸಂದರ್ಭದಲ್ಲಿ ಇವರಿಗೆ ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ರವರು ಅವರ ವಿಕಾಸ ಜನಸೇವಾ ಕಚೇರಿಯಲ್ಲಿ ಅಭಿನಂದಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಕ್ಷೇತ್ರ ಅಧ್ಯಕ್ಷ ನವೀನ್ ನಾಯಕ್, ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ಜಯರಾಮ್ ಸಾಲ್ಯಾನ್, ರಾಕೇಶ್ ಶೆಟ್ಟಿ, ಸುಮಿತ್ ಶೆಟ್ಟಿ ಬೈಲೂರು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top