ವಿಮಾನ ನಿಲ್ದಾಣ ತೊರೆದು ನಿಮಿಷ ದಾಟಿದವರು
ಗಗನಸಖಿಯರು ಪೈಲೆಟಗಳು ಹೊಟ್ಟೆ ಪಾಡು
ಪ್ರಯಾಣಿಕರ ವಿಮಾನದ ನೆಮ್ಮದಿಯ ಗೂಡು
ಸುಖಕರವಾದ ಪ್ರವಾಸದ ಮೂಟೆಯನ್ನು ಹೊತ್ತು
ದಾರಿಗುಂಟ ಆಸೆ ಆಕಾಂಕ್ಷೆಗಳ ಕನಸನ್ನು ಹೊತ್ತು//{೦೧}//
ಕ್ಷಣಾರ್ಧದಲ್ಲಿ ಕಸಿದುಕೊಂಡ ಹಣೆ ಬರಹದ ಗ್ರಹಚಾರ/
ಆಕಾಶದಲ್ಲಿ ಹಾರಾಟದ ಆರಂಭ ಪ್ರಾರಂಭದ ಶಿಷ್ಟಾಚಾರ/
ದೂರದ ಊರಿಗೆ ಹೊಟ್ಟೆಪಾಡಿಗೆ ನೂರೆಂಟು ಅವತಾರ/
ವಿಮಾನದಲ್ಲಿ ತುಂಬಿ ತುಳುಕುತ್ತಿದ್ದ ಜನ ಸಾಗರ//{೦೨}//
ವೃದ್ದರು ಚಿಕ್ಕ ಪುಟ್ಟ ಮಕ್ಕಳ ಅಲೆಗಳ ಅಬ್ಬರ/
ವೈದ್ಯಕೀಯ ವಿದ್ಯಾರ್ಥಿ ವಿದ್ಯಾರ್ಥಿನಿಯರ ವಸತಿನಿಲಯದ ಮಹಾದ್ವಾರ/
“ವಿಮಾನ ನಿಲ್ದಾಣ ತೊರೆದು ನಿಮಿಷ ದಾಟಿದವರು”/
ಮಾಯಾ ಲೋಕದಲ್ಲಿ ಒಮ್ಮಿಂದೊಮ್ಮೆಲೆ ಮಾಯವಾದರು//{೦೩}//
ಉರಿ ಬೆಂಕಿಯ ಹೊಗೆಯಿಂದ ಮುಟ್ಟಿದ ಜ್ವಾಲೆಗಳು/
ಕ್ಷಣದಲ್ಲಿ ಆಗಮಿಸಿದ ಆಂಬುಲೆನ್ಸ ವಾಹನಗಳು/
ಗೋಡೆಗೆ ಅಪ್ಪಳಿಸಿ ತೈಲತುಂಬಿದ ಟ್ಯಾಂಕ ಒಡೆದ ಗುಡುಗು/
ಹೆಣಗಳು ರಾಶಿ ರಾಶಿ ಸುಟ್ಟು ಕರಕಲಾದ ಕೊರಗು//{೦೪}//
ವಿಮಾನದ ಒಳಗಿರುವರೆಲ್ಲರು ಜೀವನ ಮರಣದ ಹೋರಾಟದಂತೆ/
ನೋಡುಗರ ನೋಟ ಭಾವನಾತ್ಮಕ ದುಃಖದಿಂದ ಕೂಡಿದಂತೆ/
ಬದುಕಿನ ಪಯಣದಲ್ಲಿ ಆಸೆ ಆಕಾಂಕ್ಷೆಗಳಿದು ಸಹಜ/
ದೊಡ್ಡದುರಂತ ಜಗತ್ತಿನಲ್ಲಿ ಇದುವರೆಗೆ ಎರಡನೆಯದು ಮನುಜ//{೦೫}//
ಯಂತ್ರ ಕೈಕೊಟ್ಟಾಗ ಚಾಲಕನಿಗೂ ಕಾಣದ ದಾರಿಕಡೆ/
ಊಹಿಸಲಾಗದ ಆಕಸ್ಮಿಕ ದುರ್ಘಟನೆ ಎಂದು ಮುನ್ನಡೆ/
“ಸದೃಢ ಇದ್ದವರು ಕಾಣದಂತೆ ಮಾಯವಾದರು ಸ್ವರ್ಗದಕಡೆ”/
ತಮ್ಮೆಲ್ಲರ ಆತ್ಮಕ್ಕೆ ಶಾಂತಿ ಸಿಗಲೆಂದು ದೈವದಕಡೆ//{೦೬}//
✍️ ಶ್ರೀ ಚನ್ನಬಸಪ್ಪ ಬಳಗಾರ
(ಮಾಜಿ ಸೈನಿಕ) ಪೊಲೀಸ ಇಲಾಖೆ
ಉಡುಪಿ ಜಿಲ್ಲೆ ಸಶಸ್ತ್ರ ಮೀಸಲು ಪಡೆ
ಹವ್ಯಾಸಿ ಬರಹಗಾರ, ಕಾರ್ಗಿಲ್ ಯೋಧ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ,






































