ಸುಹಾಸ್ ಶೆಟ್ಟಿ ಹತ್ಯೆಯ ಸಂಪೂರ್ಣ ವಿವರಗಳು ಎನ್ಐಎ ತನಿಖೆಯಿಂದ ಬಯಲಾಗಲಿದೆ: ಶಾಸಕ ಸುನೀಲ್ ಕುಮಾರ್
ಕಾರ್ಕಳ : ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ತನಿಖೆಗೆ ವಹಿಸಿರುವುದನ್ನು ಶಾಸಕ ವಿ.ಸುನೀಲ್ ಕುಮಾರ್ ಸ್ವಾಗತಿಸಿದ್ದಾರೆ.

ಘಟನೆ ನಡೆದ ದಿನದಿಂದಲೇ ಎನ್ ಐ ಎ ತನಿಖೆ ನಡೆಸುವಂತೆ ಒತ್ತಾಯ ಮಾಡುತ್ತಲೇ ಇದ್ದೆವು. ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರದ ತನಿಖಾ ವಿಧಾನವೂ ಏಕಪಕ್ಷೀಯವಾಗಿತ್ತು. ಹಿಂದು ಕಾರ್ಯಕರ್ತರನ್ನು ವಿನಾ
ಕಾರಣ ಗುರಿಯಾಗಿಸಿ ಎಫ್ ಐಆರ್ ದಾಖಲಿಸುವುದು,
ದ್ವೇಷದ ಗಡಿಪಾರು ಶಿಕ್ಷೆ ಇತ್ಯಾದಿ ಕ್ರಮಗಳನ್ನು ಸರ್ಕಾರ
ಕೈಗೊಂಡಿತ್ತು. ಮಂಗಳೂರಿಗೆ ಭೇಟಿ ನೀಡಿದ ಕಾಂಗ್ರೆಸ್
ನಾಯಕರು ಏಕಪಕ್ಷೀಯವಾಗಿ ಹಿಂದು ಸಂಘಟನೆಯ ಮೇಲೆ ಆರೋಪ ಹೊರಿಸಿದ್ದರು.
ಮುಖ್ಯಮಂತ್ರಿ ಸಿದ್ಧರಾಮಯ್ಯನವರಂತೂ ಸುಹಾಸ್ ಶೆಟ್ಟಿಯ ಮೇಲೆ ಆರೋಪ ಪಟ್ಟಿಯನ್ನೇ ಬಿಡುಗಡೆ ಮಾಡಿದ್ದರು. ಇದರಿಂದ ರಾಜ್ಯ ಸರ್ಕಾರದಬ ತನಿಖೆಯಿಂದ ನ್ಯಾಯ ಸಿಗುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು ಎಂದು ವಿವರಿಸಿದ ಶಾಸಕ ವಿ.ಸುನೀಲ್ ಕುಮಾರ್ ಇದೆಲ್ಲದಕ್ಕೂ ಎನ್ ಐಎ ತನಿಖೆಯಿಂದ ಉತ್ತರ ಲಭಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿ
ಸುಹಾಸ್ ಶೆಟ್ಟಿ ಹಂತಕರಿಗೆ ಶಿಕ್ಷೆಯಾಗಲಿದೆ ಎಂದಿದ್ದಾರೆ.



































