26 ಯೋಗ ಸಾಧಕರಿಗೆ ‘ರಾಷ್ಟ್ರೀಯ ಯೋಗ ಸಾಧಕ ಪ್ರಶಸ್ತಿ’ ಗರಿ!
RB NEWS
Bureau Report
26 ಯೋಗ ಸಾಧಕರಿಗೆ ‘ರಾಷ್ಟ್ರೀಯ ಯೋಗ ಸಾಧಕ ಪ್ರಶಸ್ತಿ’ ಗರಿ!
ಬೆಂಗಳೂರು: ರೋಟರಿ ಬೆಂಗಳೂರು ಗ್ಲೋಬಲ್ ಯೋಗ ವತಿಯಿಂದ ಬೆಂಗಳೂರಿನ ಜೆ.ಸಿ. ರಸ್ತೆಯ ಸರ್ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಆಯೋಜಿಸಲಾದ ‘ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭ 2025-26’ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ 26 ಮಂದಿ ಪ್ರತಿಭಾವಂತ ಯೋಗ ಸಾಧಕರಿಗೆ ‘ರಾಷ್ಟ್ರೀಯ ಯೋಗ ಸಾಧಕ ಪ್ರಶಸ್ತಿ’ ಲಭಿಸಿದೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಭಾರತದ ಸಮರ್ಪಿತ ಯೋಗ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಸಲುವಾಗಿ ಈ ಬೃಹತ್ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ರೋಟರಿ ಜಿಲ್ಲೆ 3192, ರೋಟರಿ ಬೆಂಗಳೂರು ಗ್ಲೋಬಲ್ ಯೋಗ, ರೋಟರಿ ಕ್ಲಬ್ ಆಫ್ ನೆಲಮಂಗಲ, ರೋಟರಿ ಕ್ಲಬ್ ಆಫ್ ತುರುವೇಕೆರೆ ಹಾಗೂ ರೋಟರಿ ಪ್ರಾಣಿ ಮಿತ್ರ ಇಂಡಿಯಾ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವು ಅಕ್ಟೋಬರ್ 25, 2026ರಂದು ಯಶಸ್ವಿಯಾಗಿ ಜರುಗಿತು. ಯೋಗ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಉಡುಪಿ ಜಿಲ್ಲೆಗೆ ಕೀರ್ತಿ ತಂದಿರುವ 26 ಮಂದಿ ಸಾಧಕರಿಗೆ ಈ ರಾಷ್ಟ್ರೀಯ ಮಟ್ಟದ ಗೌರವ ಸಂದಿರುವುದು ಜಿಲ್ಲೆಯ ಯೋಗ ವಲಯದಲ್ಲಿ ಹರ್ಷ ತಂದಿದೆ. ಪ್ರಶಸ್ತಿ ಪಡೆದ ಎಲ್ಲಾ ಯೋಗ ಸಾಧಕರಿಗೆ ವಿವಿಧ ಗಣ್ಯರು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಉಡುಪಿಯ ಜಿಲ್ಲೆಯವಾರದ ಡಾ. ಮಾಲತಿ ಪೈ ಇವರಿಗೆ ರಾಷ್ಟ್ರೀಯ ಲೈಫ್ ಟೈಮ್ ಯೋಗ ಪ್ರಶಸ್ತಿ ದೊರೆಕಿರುತ್ತದೆ