ಬಲಾಡಿಯಲ್ಲಿ ಜನಜಾಗೃತಿ ಸಭೆ

Picture of RB NEWS

RB NEWS

Bureau Report

ಅಂಪಾರು(ಉಡುಪಿ): ಇಲ್ಲಿನ ಬಾಲಾಡಿ ಶಾಂತಿಧಾಮದಲ್ದಿ ಮೇ 18 ರಂದು ದಲಿತ ಹಕ್ಕುಗಳ ಸಮಿತಿ (ಡಿ ಎಚ್ ಎಸ್) ವತಿಯಿಂದ ಜನಜಾಗೃತಿ ಸಭೆ ನಡೆಯಿತು.

ಡಿ. ಎಚ್. ಎಸ್ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು, ತಾಲೂಕು ಸಂಚಾಲಕ ರವಿ, ಸಿಐಟಿಯು ಹಿರಿಯ ಮುಖಂಡ ಬಾಲಕೃಷ್ಣ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ನಾಗರಾಜ್ ಅವರು ವಹಿಸಿದ್ದರು.

ಬಲಾಡಿಯ ಸ್ಥಳೀಯ ಮುಖಂಡ ಮನೋಜ್ ಕುಮಾರ್ ಕೆ.ಸಿ., ಶ್ರೀಮತಿ. ಸುವರ್ಣಾ ಹಾಗೂ ಅರಣ್ಯಾಧಿಕಾರಿ ಗುರುರಾಜ್ ಅವರು ಉಪಸ್ಥಿತರಿದ್ದರು.

ದಲಿತ ಹಕ್ಕುಗಳ ಸಮಿತಿಯ ಧ್ಯೇಯೋದ್ಧೇಶಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ, ಇಂದಿನ ಸಾಮಾಜಿಕ ಸ್ಥಿತಿಯ ಬಗ್ಗೆ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಸರ್ಕಾರಗಳು ಹೇಗೆ ದುರೋಪಯೋಗ ಆಗ್ತಾ ಇದೆ ಮತ್ತು ಖಾಸಗಿಕರಣದಿಂದ ದಲಿತರಿಗೆ ಮೀಸಲಾತಿ ವಂಚಿಸುತ್ತಿದ್ದು ಮುಂದಿನ ದಿನಗಳಲ್ಲಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗಾಗಿ ದಲಿತ ಹಕ್ಕುಗಳ ನೇತ್ರತ್ವದಲ್ಲಿ ಹೋರಾಟ ನಡೆಸಲು ಮುಂದಾಗುವುದು ಅನಿವಾರ್ಯ ಎಂದು ಸಂಜೀವ ಬಳ್ಕೂರು ಅವರು ಸಭೆಯಲ್ಲಿ ಮಾತನಾಡುತ್ತಾ ತಿಳಿಸಿದರು.

ಸ್ಥಳೀಯ ಮುಖಂಡರಾದ ಮನೋಜ್ ಕುಮಾರ್ ಅವರು ಸ್ಥಳೀಯ ಸಮಸ್ಯೆಗಳಾದ ರಸ್ತೆ ರಿಪೇರಿ, ಮಾರ್ಗಗಳಿಗೆ ದಾರಿ ದೀಪ ಅಳವಡಿಸಲು ಹಾಗೂ ದಲಿತರಿಗೆ ಸ್ಮಶಾನ ಭೂಮಿ ಮಂಜೂರಾತಿಯ ತೊಡಕಿನ ಬಗ್ಗೆ ಮಾಹಿತಿ ನೀಡಿದರು.

ಸಭೆಯ ಕೊನೆಯಲ್ಲಿ ಸ್ಥಳೀಯ 18 ಜನರನ್ನೊಳಗೊಂಡ ದಲಿತ ಹಕ್ಕುಗಳ ಸಮಿತಿಯ ಘಟಕವನ್ನು ರಚಿ‌ಲಾಯಿತು. ಸಂಚಾಲಕರಾಗಿ ಗುರುಮೂರ್ತಿ ಕೆ.ಸಿ., ಸಹ ಸಂಚಾಲಕರಾಗಿ ರಾಜೀವ, ನಾಗರಾಜ ಹಾಗೂ ಮನೋಜ್ ಅವರನ್ನು ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರಾಗಿ

  1. ಸುವರ್ಣ
  2. ಗೋಪಾಲ
  3. ಶೇಷು
  4. ನಾರಾಯಣ
  5. ಜಯರಾಮ
  6. ಪದ್ಮ
  7. ಸುಮಿತ್ರಾ
  8. ಮಂಜು
  9. ಅಣ್ಣಪ್ಪ
  10. ಶ್ವೇತಾ
  11. ಜಯಕರ
  12. ರಕ್ಷಿತಾ
  13. ರಂಜಿತಾ
  14. ನಾಗರಾಜ.ಬಿ.

ಇವರನ್ನು ಆಯ್ಕೆ ಮಾಡಲಾಯಿತು.

ಸ್ಥಳೀಯ ಆಡಳಿತಕ್ಕೆ ಸಂಘಟನೆಯ ಮೂಲಕ ಮನವಿ ಕೊಡಲು ನಿರ್ಧರಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top