ಕೆಚ್ಚೆದೆಯ ವೀರ ಗಂಡುಗಲಿ
ಚಿತ್ರದುರ್ಗದ ಕಲ್ಲಿನ ಭದ್ರ ಕೋಟೆ/
ಮಿಂಚುಸಿಡಲಿಗೆ ಬೆಚ್ಚದ ಉಕ್ಕಿನ ಕೋಟೆ/
ಏಳು ಸುತ್ತಿನ ಮದಕರಿ ರಾಜಾಹುಲಿ ಕೋಟೆ/
ನಾಡ ದೊರೆ ನಾಯಕರಾಳಿದ ಕೋಟೆ//{೦೧}//
ಪುಣ್ಯ ಭೂಮಿಯು ಕನ್ನಡ ಬೀಡು/
ನಾಯಕ ಶಿರೋಮಣಿ ಹರಸಿದ ಸಿರಿ ನಾಡು/
ವೀರ ಮದಕರಿ ಜನಸಾಮಾನ್ಯರ ನಾಯಕ/
ರಾಜ ಭೋಪಾಲರು ನಾಡನ್ನು ಆಳುವ ಕಾಯಕ///{೦೨}//
ಸಪ್ತ ಮಂದಿರ ಮಾತೆಗಳ ಸೇವಕ ಸಂಸ್ಥಾಪಕ /
ಅಷ್ಟ ಮಠಗಳ ನೀತಿಯ ಸ್ಪೂರ್ತಿದಾಯಕ/
ಕಾಮಗೇತಿ ರಾಜ್ಯವಂಶಸ್ಥರ ಧರ್ಮವು/
ತುಂಬಿ ತುಳುಕಲಿ ಸಿರಿನಾಡು ಪ್ರೇಮವು //{೦೩}//
ಏಳಿಗೆಯಲ್ಲಿ ಜಾಗೃತವಾಗಿ ಎಲ್ಲರನ್ನು ನೋಡಿದರಿತ್ತ/
ಧೈರ್ಯ,ನಿಷ್ಠೆ, ಕರುಣೆಯ ಹೊತ್ತು/
ಕರುನಾಡು ಜನತೆ ಪ್ರೀತಿ ಮಮತೆಯ ಆಗರ/
ರಾಜ ಆಸ್ಥಾನದಲ್ಲಿ ಬೆಳಗಲಿ ನಿನ್ನೊಳು ನೇಸರ//{೦೪}//
ಪೇಶ್ವ ಹೈದರಾಲಿಯ ಮಾತಿನ ಬಡಿವಾರ/
ಸರದಾರ ಧ್ವನಿಯಾಗಿರಲಿ ಬಳಲಿ ನೊಂದವರ/
ನಾಡಿನ ಪಾಳೇಗಾರ ಸತ್ಯ ಶಾಂತಿಗಾಗಿ ಹೋರಾಡು/
ಗಂಡುಗಲಿ ವೀರ ನ್ಯಾಯ ಸಿಗುವವರೆಗೆ ಕಾದಾಡು//{೦೫}//
✍️ ಶ್ರೀ ಚನ್ನಬಸಪ್ಪ ಬಳಗಾರ
(ಮಾಜಿ ಸೈನಿಕ) ಪೊಲೀಸ ಇಲಾಖೆ
ಉಡುಪಿ ಜಿಲ್ಲೆ ಸಶಸ್ತ್ರ ಮೀಸಲು ಪಡೆ
ಹವ್ಯಾಸಿ ಬರಹಗಾರ, ಕಾರ್ಗಿಲ್ ಯೋಧ, ರಾಜ್ಯ ಪ್ರಶಸ್ತಿ ಪುರಸ್ಕೃತ,





































