ವಾರ ಭವಿಷ್ಯ
ದಿನಾಂಕ 11.05.2025 ರಿಂದ 17.05.2025 ರ ವರೆಗೆ
ವಿಶೇಷ ದಿನಗಳು : 11.05.2025 ಶ್ರೀ ನರಸಿಂಹ ಜಯಂತಿ
14.05.2025 ವೃಷಭ ಸಂಕ್ರಮಣ ರವಿ ವೃಷಭ ರಾಶಿಗೆ ಪ್ರವೇಶ
ಮಿಥುನ ರಾಶಿಗೆ ಗುರು ಪ್ರವೇಶ
ಮೇಷ :ವ್ಯಯದಲ್ಲಿ ಶುಕ್ರ ,ರಾಹು,ಶನಿ, ಜನ್ಮ ರಾಶಿಯಲ್ಲಿಬುಧ ,ದ್ವಿತೀಯಾದಲ್ಲಿ ರವಿ ,ತೃತೀಯಾದಲ್ಲಿ ಗುರು ,ಸುಖ ಸ್ಥಾನದಲ್ಲಿ ಕುಜ ಇದ್ದಾನೆ. ಕೇತು ಇನ್ನು ಕೆಲವೇ ದಿನಗಳಲ್ಲಿ ಪಂಚಮಕ್ಕೆ ಬರುತ್ತಿದ್ದಾನೆ. ಒಟ್ಟು ಗೊಂದಲಮಯ ಸನ್ನಿವೇಶ ಕಂಡು ಬರುತ್ತಿದೆ. ನಿಮ್ಮ ಮನಸ್ಸಿನ, ಮನೆಯ ಸ್ಥಿತಿ –ಗತಿಯನ್ನು ತಿಳಿಗೊಳಿಸಲು ಇನ್ನೂ ಕೆಲವು ದಿನಗಳು ಬೇಕಾಗುತ್ತದೆ. ನಿಮ್ಮ ತಾಯಿಯವರ ಆರೋಗ್ಯದ ಬಗ್ಗೆ ನಿಮ್ಮ ಗಮನ ಅಗತ್ಯವಿರುತ್ತದೆ,ಶುಕ್ರ,ಮತ್ತು ಕುಜ ನಿಮ್ಮ ದಾಂಪತ್ಯದ ಜೀವನದಲ್ಲಿ ಹುಳಿ ಹಿಂಡುವವರಾಗಿದ್ದಾರೆ. ಲಲಿತಾ ಸಹಸ್ರನಾಮ ಪಾರಾಯಣ ಮಾಡಲೇ ಬೇಕಾಗಿದೆ. ಆರ್ಥಿಕ ಅಡಚಣೆ ಆಗಾಗ ಬರುತ್ತಲೇ ಇರುತ್ತದೆ. ಸಾಡೇ ಸಾತ್ ಶನಿ ನಿಮ್ಮನ್ನು ನಾನಾ ರೀತಿಯಲ್ಲಿ ಪರೀಕ್ಷೆಗೆ ಒಳಪಡಿಸುತ್ತಿದ್ದಾನೆ. ಹನುಮಾನ್ ಚಾಲೀಸ/ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ.
ವೃಷಭ : ಗುರುವಿನ ಅನುಗ್ರಹ ನಿಮಗೆ ಬಂದೇ ಬಿಟ್ಟಿತು. ರವಿ ಜನ್ಮ ರಾಶಿಗೆ ಬಂದಿದ್ದಾನೆ. ಕುಜ ತೃತೀಯಾದಲ್ಲಿ ಇದ್ದಾನೆ. ಕೇತು ಕೆಲವೇ ದಿನದಲ್ಲಿ ಸುಖ ಸ್ಥಾನ ವನ್ನು ಪ್ರವೇಶ ಮಾಡಲಿದ್ದಾನೆ. ಲಾಭ ಕ್ಷೇತ್ರದಲ್ಲಿ ಶುಕ್ರ ,ರಾಹು ,ಶನಿ ಇದ್ದಾರೆ. ಮನಸ್ಸಿನಲ್ಲಿ ಹೊಸ ಹೊಸ ಆವಿಷ್ಕಾರಗಳ ಚಿಂತನೆ ಮಾಡಲಿದ್ದೀರಿ. ಹಣದ ಒಳ ಹರಿವು ಹೆಚ್ಚಾಗಲಿದ್ದು ಮನಸ್ಸಿನಲ್ಲಿ ಧೈರ್ಯ ಹೆಚ್ಚಾಗಲಿದೆ. ನಿಮ್ಮ ಅಭಿವೃದ್ಧಿಯನ್ನು ಕಂಡು ಮಾತ್ರ್ಯ ಪಡುವವರು ಇದ್ದಾರೆ ಎನ್ನುವುದು ನಿಮಗೆ ತಿಳಿದಿರಲಿ. ಸತ್ಯವನ್ನು ಹೇಳುವ ರೀತಿ ,ಚುಚ್ಚು ಮಾತುಗಳಾಗದಂತೆ ಎಚ್ಚರ ವಹಿಸಿರಿ. ಆಹಾರ ಸೇವನೆಗೆ ಒಂದು ಸಮಯ ನಿಗದಿ ಪಡಿಸಿರಿ. ಸಂಭಾವಿತರೆಂದು ತೋರಿಸಿಕೊಳ್ಳುವ ಹಿತ ಶತ್ರುಗಳಿಂದ ದೂರವಿರುವುದು ಒಳ್ಳೆಯದು.
ಮಿಥುನ : ಗುರು ಜನ್ಮ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಕೇತು ತೃತೀಯಾಕ್ಕೆ ಬರುತ್ತಿದ್ದಾನೆ. ರವಿ ವ್ಯಯಕ್ಕೆ ಬರುತ್ತಿದ್ದಾನೆ. ಕರ್ಮ ಕ್ಷೇತ್ರದಲ್ಲಿ ಶುಕ್ರ ರಾಹು ಶನಿ ಇದ್ದಾರೆ. ಇಷ್ಟು ಸಮಯ ಪಟ್ಟಿರುವ ಅನೇಕ ರೀತಿಯ ಕಷ್ಟಗಳಿಗೆ ಸ್ವಲ್ಪ ವಿರಾಮ ದೊರೆಯಲಿದೆ. ಆದಾಯದಲ್ಲಿ ಚೇತರಿಕೆ ಕಂಡು ಬರಲಿದೆ. ಕಣ್ಣೆದುರೇ ನಡೆಯುವ ಮೋಸ ವಂಚನೆಗಳನ್ನು ನೋಡಲೂ ಸಾಧ್ಯವಿಲ್ಲದೆ, ಹೇಳಲೂ ಸಾಧ್ಯವಿಲ್ಲದೆ ಚಡ ಪಡಿಸುವಿರಿ. ಮಾತು ಮೃಧುವಾಗಿರಲಿ. ವಿದ್ಯಾರ್ಥಿಗಳು ಶ್ರಮ ಪಡುವ ಅಗತ್ಯವಿದೆ. ಉದ್ಯೋಗ ಮಾಡುವವರಿಗೆ ಭಡ್ತಿ ಯೋಗವಿದೆ.ಪ್ರಯಾಣ ಮಾಡುವ ಯೋಗವಿದೆ. ಸ್ವಂತ ವ್ಯಾಪಾರಗಳು ತೂಗುಯ್ಯಾಲೆಯಲ್ಲಿರುತ್ತವೆ. ಆರ್ಥಿಕವಾಗಿ ಖರ್ಚ –ವೆಚ್ಚಗಳಲ್ಲಿ ಹಿಡಿತವಿರಲಿ. ವೈವಾಹಿಕ ಭಾಗ್ಯದ ವಿಚಾರದಲ್ಲಿ ಹೆಚ್ಚಿನ ಪ್ರಯತ್ನ ಬಲ ,ಹೊಂದಾಣಿಕೆಗೆ ಆದ್ಯತೆ ನೀಡಬೇಕಾಗುತ್ತದೆ.
ಕರ್ಕಾಟಕ : ಜನ್ಮ ರಾಶಿಯಲ್ಲಿ ನೀಚ ಕುಜ ,ಅಷ್ಟಮದಲ್ಲಿ ಇನ್ನೂ ಕೆಲವೇ ದಿನದಲ್ಲಿ ಬರಲಿರುವ ರಾಹು,ವ್ಯಯದಲ್ಲಿ ಗುರು, ಬರುವಾಗ ತನ್ನವರು ಯಾರು ಎನ್ನುವ ಗೊಂದಲ ಸೃಷ್ಟಿ ಆಗಲಿದೆ. ನೀವು ಮಾಡುತ್ತಿರುವ ಉದ್ಯೋಗದಲ್ಲಿ ಕಿರಿಕಿರಿ ಇರುತ್ತದೆ. ಮನೋ ವೈದ್ಯರ ಬಳಿ ಅವಶ್ಯಕತೆ ಇದೆ ,ಎಂದು ಕಂಡು ಬಂದರೆ ಹೋಗುವುದು,ಒಳ್ಳೆಯದು. ನಿದ್ದೆಯ ಕೊರತೆ ಕಾಡಲಿದೆ. ಶೀತ ಬಾಧೆ, ಕಫ ಇತ್ಯಾದಿ ಅನಾರೋಗ್ಯದ ಅನುಭವ ತರಲಿವೆ. ವಿದೇಶಿ ವ್ಯವಹಾರಗಳಿಗೆ ಬಾಧಕ ಒದಗೀತು. ಕೋಟ್೯ -ಕಚೇರಿ ಕೆಲಸಗಳು ಹಂತ ಹಂತವಾಗಿ ಮುನ್ನೆಡೆಗೆ ಬರಲಿವೆ. ದೈವಾನುಗ್ರಕ್ಕಾಗಿ ಒಂದೂವರೆ ವರ್ಷಗಳ ಪರ್ಯಂತ ಯಥಾ ಶಕ್ತಿ ನಾಗ ದೇವರ ಸೇವೆ, ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ ಬರಬೇಕು.
ಸಿಂಹ : ವ್ಯಯದಲ್ಲಿ ನೀಚ ಕುಜನಿದ್ದಾನೆ. ಭಾದಕ ರಾಶಿಯಲ್ಲಿ ಬುಧನಿದ್ದಾನೆ. ಅಷ್ಟಮದಲ್ಲಿ ಶನಿ ಶುಕ್ರ ಇದ್ದು ಇನ್ನು ಕೆಲವೇ ದಿನಗಳಲ್ಲಿ ರಾಹು ಸಪ್ತಮಕ್ಕೆ ಬರಲಿದ್ದಾನೆ. ನಿಮ್ಮ ವೈಯಕ್ತಿಕ ವರ್ತನೆಗಳನ್ನು ತಿದ್ದಿಕೊಳ್ಳಬೇಕಾದ ಅವಶ್ಯಕತೆ ಇದೆ. ಅಹಂ ‘ ನಿಂದ ಹೊರಗೆ ಬನ್ನಿರಿ. ಸಹೋದ್ಯೋಗಿ ಹಾಗೂ ಮಿತ್ರರೊಳಗಿನ ಮಾತುಕತೆಗಳಲ್ಲಿ ಎಚ್ಚರವಹಿಸಬೇಕು. ಅನಿರೀಕ್ಷಿತ ರೀತಿಯಲ್ಲಿ ನಿಮ್ಮ ಉದ್ಯೋಗದಲ್ಲಿ ಪ್ರಮೋಷನ್ ಆಗುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿನಲ್ಲಿರುವ ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಿರಿ. ಸತಿ-ಪತಿ ಹೊಂದಾಣಿಕೆ ಅತೀ ಅಗತ್ಯ. ವಿದ್ಯಾರ್ಥಿಗಳು ಪ್ರೀತಿ ಪ್ರೇಮದಲ್ಲಿ ಬೀಳುವ ಸಾದ್ಯತೆ ಖಂಡಿತವಾಗಿಯೂ ಇದೆ. ಬುಧ ದ್ವಿತೀಯಾಧಿಪತಿಯೂ ಆಗಿರುವುದರಿಂದ ವಿದ್ಯೆಯ ಕಡೆಗೆ ಗಮನ ಕೊಟ್ಟು ಒಳ್ಳೆಯ ಸಾಧನೆಯನ್ನು ಮಾಡಿರಿ.ಮಾರ್ಗದ ಬದಿಯಲ್ಲಿ ಮಾರಾಟ ಮಾಡುವ ಮಸಾಲೆ ತಿಂಡಿಗಳನ್ನು ತಿನ್ನಬೇಡಿರಿ.
ಕನ್ಯಾ : ವ್ಯಯಕ್ಕೆ ಕೇತುವಿನ ಪ್ರವೇಶ ಆಗಲಿದೆ. ಗುರು ಭಾಧಕಾಧಿಪತಿಯಾಗಿ ರ್ಮ ಕ್ಷೇತ್ರಕ್ಕೆ ಬರಲಿದ್ದಾನೆ. ಸಪ್ತಮದಲ್ಲಿ ಶನಿ ಶುಕ್ರ ರಾಹು ಇದ್ದಾರೆ. ಬುಧ ಅಷ್ಟಮದಲ್ಲಿ,ರವಿ ಭಾಗ್ಯದಲ್ಲಿ ಇದ್ದಾರೆ. ಕುಜನೊಬ್ಬನೇ ಲಾಭ ಕ್ಷೇತ್ರದಲ್ಲಿ ನೀಚನಾಗಿದ್ದಾನೆ.ಭೂಮಿ ಮಾರಾಟ ಮಾಡುವವರಿಗೆ ಒಳ್ಳೆಯ ಅವಕಾಶ ಒದಗಿ ಬರಲಿದೆ. ಈ ವಾರ ಶುಭ ಮಂಗಳ ಕೆಲಸಗಳು ನಡೆದೇ ಹೋಗಲಿದೆ ಉದ್ಯಮ ವ್ಯವಹಾರಗಳಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಸಪ್ತಮದಲ್ಲಿರುವ ಶನಿ ರಾಹು,ಶುಕ್ರರ ಬಗ್ಗೆ ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರುವುದು ಅವಶ್ಯವಿದೆ. ಅನ್ಯ ಮಹಿಳೆಯರ ಸಂಪರ್ಕ ಇತಿಮಿತಿಯಲ್ಲಿ ಇರಲಿ.ಹಣ ಹೂಡಿಕೆಗೆ ಸರಿಯಾದ ಸಮಯವಲ್ಲ.ಅನಿರೀಕ್ಷಿತವಾಗಿ ಬರುವ ಸಂತೋಷದ ಸುದ್ಧಿಗಳಿಗಳಿಂದ ಸಂತೋಷ ಪಡೆಯಲಿದ್ದೀರಿ.
ತುಲಾ : ಗುರು ಭಾಗ್ಯಕ್ಕೆ ಬರುತ್ತಿದ್ದಾನೆ..ಭಾಧಕಾಧಿಪತಿ ರವಿ ಅಷ್ಟಮಕ್ಕೆ ಬಂದಿರುವುದನ್ನು ಗಮನಿಸಿರಿ. ಗುರು ಬಂದಿರುವುದು ತನ್ನ ವೈರಿಯ ಮನೆಗೆ. ಉದ್ಯೋಗಿಗಳಿಗೆ ತಾವು ಮಾಡುತ್ತಿರುವ ಯಾವುದೇ ವ್ಯವಹಾರ, ಉದ್ಯೋಗದಲ್ಲಿ ಯಶಸ್ಸು ಕಂಡುಬರಲಿದೆ. ಸಾಮಾಜಿಕ ರಂಗದಲ್ಲಿ ನಿಮ್ಮನ್ನು ಗುರುತಿಸುವ ಕೆಲಸ ನಡೆಯಲಿದೆ. ವಯಕ್ತಿಕ ಆರೋಗ್ಯದ ಕಡೆಗೆ ಗಮನ ಅಗತ್ಯ. ಒಂದು ತಿಂಗಳ ಕಾಲ ಮದ್ಯ ಸೇವನೆ ಮಾಡುವವರು ಅದನ್ನು ನಿಲ್ಲಿಸುವುದು ಒಳ್ಳೆಯದು.ಹೃದಯ ಸಂಬಂಧಿ ಸಮಸ್ಯೆಗಳು ಗಮನಕ್ಕೆ ಬಂದಾಗ ತಕ್ಷಣ ಎಚ್ಚರಗೊಳ್ಳಿರಿ. ಬೆಲೆ ಬಾಳುವ ವಸ್ತುಗಳ ಬಗ್ಗೆ ಎಚ್ಚರ ವಹಿಸಿರಿ. ವಿದೇಶಕ್ಕೆ ಪ್ರಯಾಣ ಮಾಡುವ ಯೋಗವಿದೆ. ಸಂಬಂಧಿ ಸಮಸ್ಯೆಗಳು ಬರಲಿವೆ. ಶಿವ ಸಹಸ್ರನಾಮ ಪಾರಾಯಣ ಅಗತ್ಯವಿದೆ.
ವೃಶ್ಚಿಕ : ಗುರು ಅಷ್ಟಮಕ್ಕೆ ಬಂದಿದ್ದಾನೆ. ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಖಡ್ಡಾಯವಾಗಿದೆ. ಸುಖ ಸ್ಥಾನಕ್ಕೆ ರಾಹು ಬರುತ್ತಿರುವುದು ನಾಗ ದೇವರ ಯಥಾ ಶಕ್ತಿ ಸೇವೆಯನ್ನು ಕೇಳುತ್ತಿದೆ. ಪಂಚಮದಲ್ಲಿ ಶುಕ್ರ ರಾಹು ಶನಿ ಇರುವುದರಿಂದ ಮಕ್ಕಳ ಬಗ್ಗೆ ಕೆಲವೊಂದು ವಿಷಯಗಳಲ್ಲಿ ಬೇಸರವನ್ನು ತರಲಿದೆ. ಸ್ವಂತ ಉದ್ಯಮ ,ಕೌಟುಂಬಿಕ ವಿಚಾರಗಳಲ್ಲಿ ಒತ್ತಡಗಳು ಒಂದು ವರ್ಷ ಕಾಲ ಇರಲಿರುವುದರಿಂದ ಎಲ್ಲವನ್ನೂ ಒಂದು ಇತಿಮಿತಿಯೊಳಗೆ ಇಟ್ಟುಕೊಂಡರೆ ಕ್ಷೇಮ. ಹೃದಯ ಸಂಬಂಧಿ ಸಮಸ್ಯೆ ಇರುವವರು ಒಂದೂವರೆ ವರ್ಷ ಕಾಲ ಎಚ್ಚರವಹಿಸಬೇಕು.
ಧನು : ಗುರು ಸಪ್ತಮಕ್ಕೆ ಬರುತ್ತಿದ್ದಾನೆ. ದೈವಾನುಗ್ರಹ ಪ್ರಾಪ್ತಿಯಾಗುತ್ತಿದೆ.. ರಾಹು ತೃತೀಯಕ್ಕೆ ಬರುತ್ತಿದ್ದಾನೆ. ಎಲ್ಲವೂ ಶುಭ ಯೋಗ. ಸುಖ ಸ್ಥಾನದಲ್ಲಿ ಶುಕ್ರ ,ರಾಹು, ಶನಿ ಸಮಸ್ಯೆಗಳನ್ನು ತರುವವರಾಗಿದ್ದಾರೆ. ನರ, ಎಲುಬು, ಸೊಂಟ, ಕಣ್ಣು ನೋವು ತರಿಸುವವರಾಗಿದ್ದಾರೆ. ವಿಷ್ಣು ಸಹಸ್ರ ನಾಮ ಪಾರಾಯಣ ಮಾಡಬೇಕು. ಬುಧ ಪಂಚಮದಲ್ಲಿ, ರವಿ 6ನೇ ಮನೆಯಲ್ಲಿ,ಇದ್ದಾನೆ. ಆರ್ಥಿಕ ಆಮಿಷ,ಲಾಟರಿ,ಕೆಟ್ಟ ಚಟಗಳಿಂದ ದೂರವಿರುವುದು ಒಳ್ಳೆಯದು. ಧನ ಆದಾಯಕ್ಕೆ ಕೊರತೆ ಇರುವುದಿಲ್ಲ. ಆರೋಗ್ಯದ ಕಡೆಗೆ ಗಮನ ಅಗತ್ಯವಿರುತ್ತದೆ. ಉದ್ಯೋಗ,ವ್ಯವಹಾರದಲ್ಲಿ ಸ್ವಯಂ ನಿಷ್ಠೆ ಅಗತ್ಯವಾಗಿದೆ.
ಮಕರ : ಗುರುವಿನ ಅನುಗ್ರಹದಿಂದ ದೂರವಾಗುತ್ತಿದ್ದೀರಿ. .ಶನಿ ರಾಹು ಶುಕ್ರ ತೃತೀಯಾದಲ್ಲಿ ಆರ್ಥಿಕವಾಗಿ ಧನ ಆದಾಯದ ಅನೇಕ ದಾರಿಗಳನ್ನು ತೋರಿಸಲಿದ್ದಾರೆ . ಸಹೋದರ ವರ್ಗದವರಲ್ಲಿ ದ್ವೇಷ ಭಾವನೆ ಮಾಡಿಕೊಳ್ಳುವುದು ಬೇಡ. ಸತಿ ಪತಿಯರಲ್ಲಿ ಕುಜ ಹೊಂದಾಣಿಕೆಯ ಕೊರತೆಯನ್ನು ತೋರಿಸಲಿದ್ದಾನೆ.ರಾಜಕೀಯದವರಿಗೆ ಮುನ್ನೆಡೆಯ ದಿನಗಳಾಗಿವೆ. ಅಲೆದಾಟಗಳು ಅಧಿಕವಾಗಿದ್ದು, ದೇಹಾಯಾಸಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಿರಿ. ಸಾಂಸಾರಿಕವಾಗಿ ಹೊಂದಿಕೊಂಡು ಹೋಗಬೇಕಾಗಿದೆ. ವ್ಯಾಪಾರ ವ್ಯವಹಾರಗಳಲ್ಲಿ ಆದಾಯ ಅಧಿಕ ರೂಪದಲ್ಲಿ ಇದ್ದು ಸಮಾಧಾನ ತರುತ್ತದೆ ರಾಜಕೀಯದಲ್ಲಿ ಶತ್ರು ಪರಾಜಯ ಯೋಗ ಕೂಡಿ ಬರಲಿದೆ.
ಕುಂಭ : ದ್ವಿತೀಯಾದಲ್ಲಿ ಶುಕ್ರ ರಾಹು ಶನಿ ಇದ್ದು ಸಾಡೇ ಸಾತ್ ಶನಿಯ ಕಾಟ ಮುಂದುವರಿದಿದೆ. ದೈವಾನುಗ್ರಹ ಆರಂಭವಾಗಿದ್ದು ನೀವು ಮಾಡುವ ಯಾವುದೇ ವ್ಯವಹಾರಗಳು ಯಶಸ್ವಿಯಾಗಲಿವೆ. ನೀವಾಡುವ ಪ್ರತೀ ಮಾತಿನಲ್ಲಿ ಹಿಡಿತವಿರಲಿ.ಸಾಲ ಮಾಡಲು ಹೋಗಬೇಡಿರಿ. ಮಾತು ಕೊಡಬೇಡಿರಿ.ನಡೆಸಿಕೊಂಡು ಹೋಗಲು ಕಷ್ಟವಾಗಬಹುದು. ವೈವಾಹಿಕ ಚಿಂತನೆಗಳು ಬಲಗೊಂಡು ಕಂಕಣ ಬಲದ ಕನಸನ್ನು ಸಾಕಾರಗೊಳಿಸಲಿವೆ. ಹಿರಿಯರ ಆರೋಗ್ಯದಲ್ಲಿ ಏರು ಪೇರು ಕಾಣಲಿದ್ದು ಅದಕ್ಕಾಗಿ ನಿಮ್ಮ ತಿರುಗಾಟ ಹೆಚ್ಚಾಗಲಿದೆ. ತಂದೆ ತಾಯಿ ಇಬ್ಬರಿಗೂ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರಲಿದೆ. ವಿದ್ಯಾರ್ಥಿಗಳು ಓದುವುದರಲ್ಲಿವಿಮುಖರಾಗಲಿದ್ದಾರೆ.
ಮೀನ : ಜನ್ಮ ರಾಶಿಯಲ್ಲಿ ಶುಕ್ರ ರಾಹು ಶನಿ ಇದ್ದು ಸಾಡೇ ಸಾತ್ ಶನಿಯ ಪ್ರಭಾವ ಎರಡೂವರೆ ವರ್ಷ ಕಾಲ ಮುಂದುವರಿಯಲಿದೆ. ದೈವಾನುಗ್ರಹ ಸ್ವಲ್ಪ ಮಟ್ಟಿಗೆ ಪ್ರಾಪ್ತಿಯಾಗಲಿದೆ.ಮನೆಯಲ್ಲಿ ಕೆಲವೊಮ್ಮೆ ಕಲಹ ಬರಲಿದೆ. ಸಹೋದರಿ ವರ್ಗದವರಲ್ಲಿ ಕಲಹದ ಸೂಚನೆ ಇದ್ದರೂ ಹೊಂದಾಣಿಕೆ ಮುಂದುವರಿಯಲಿದೆ. ಸಹೋದರಿಗೆ ಚಿನ್ನದ ಉಡುಗೊರೆ ನೀಡುವ ಸಾಧ್ಯತೆ ಇದೆ. ಋಣಾತ್ಮಕ ಚಿಂತನೆಗಳನ್ನು ದೂರಕ್ಕೆ ಸರಿಸಿರಿ. ವೃತ್ತಿರಂಗದಲ್ಲಿ ಕೆಲವೊಮ್ಮೆ ಕೈಲಾಗದ ಪರಿಸ್ಥಿತಿ ಅನುಭವಕ್ಕೆ ಬರಲಿದೆ. ನೂತನ ಕರ್ಯಾರಂಭಕ್ಕೆ ಇದು ಸಕಾಲವಾಗಿದೆ. ಸದ್ಯದ ಪರಿಸ್ಟಿತಿಯಲ್ಲಿ ಇದ್ದುದನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗುವುದು ಅಗತ್ಯವಾಗಿದೆ.

ನಿಮ್ಮ ಪರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿ ಕೊಡಲಾಗುವುದು. ಜಾತಕವಿಲ್ಲದವರಿಗೆ ,ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹರ್ತ ವನ್ನು ನಿಶ್ಚಯಿಸಿ ತಿಳಿಸಲಾಗುವುದು. ವಾಸ್ತು ಸಲಹೆ /ವಿವಾಹ ಹೊಂದಾಣಿಕೆಯನ್ನು ಮಾಡಿ ತಿಳಿಸಲಾಗುವುದು,.



































