ಗೆಲುವಿನ ಗುಟ್ಟು ಸಕ್ಸಸ್ ಫಾರ್ಮುಲಾ ತಯಾರಿ, ಆತ್ಮವಿಶ್ವಾಸ ಮತ್ತು ಹಿರಿಯರ ಸಹಕಾರ ವಿಜಯಕ್ಕೆ ಮೆಟ್ಟಿಲು… -ಡಾ.ಮಾಲತಿ ಪೈ

Picture of RB NEWS

RB NEWS

Bureau Report

ಗೆಲುವಿನ ಗುಟ್ಟು
ಸಕ್ಸಸ್ ಫಾರ್ಮುಲಾ
ತಯಾರಿ, ಆತ್ಮವಿಶ್ವಾಸ ಮತ್ತು ಹಿರಿಯರ ಸಹಕಾರ
ವಿಜಯಕ್ಕೆ ಮೆಟ್ಟಿಲು…
.ಡಾ.ಮಾಲತಿ ಪೈ

  1. ಪರೀಕ್ಷಾ ಪೂರ್ವದ ಸಿದ್ಧತೆ ಗಟ್ಟಿಯಾಗಿದ್ದರೆ ಪರೀಕ್ಷೆಯ ದಿನ ಆತಂಕವಾಗುವುದಿಲ್ಲ. ವಿದ್ಯಾರ್ಥಿಯು ಪರೀಕ್ಷಾ ದಿನಗಳಲ್ಲಿ ಆರೋಗ್ಯದ ಕಡೆ ಸೂಕ್ತ ಗಮನ ಕೊಡಬೇಕು. ಅನಾವಶ್ಯಕ ಓಡಾಟವನ್ನು ನಿಲ್ಲಿಸಬೇಕು. ಹೊರಗಿನ ತಿಂಡಿ ಪಾನೀಯಗಳನ್ನು ಸೇವಿಸದೆ ಆರೋಗ್ಯಕರ ಆಹಾರವನ್ನು ಬಳಸಬೇಕು. ಚೆನ್ನಾಗಿ ನಿದ್ರೆ ಮಾಡಬೇಕು. ಏಕೆಂದರೆ ನಿದ್ರೆ ಮಾಡುವ ಸಮಯದಲ್ಲಿ ಮೆದುಳು ಅಧ್ಯಯನದ ವಿಚಾರಗಳನ್ನು ನೆನಪಿನ ಕೋಶಗಳಾಗಿ ಪರಿವರ್ತಿಸುತ್ತದೆ. ಆದುದರಿಂದ ನಿದ್ದೆಗೆಟ್ಟು ಓದಬಾರದು. ಅಂತಹ ವಿಚಾರಗಳು ನೆನಪಿನಲ್ಲಿ ಉಳಿಯುವ ಸಾಧ್ಯತೆಗಳು ಕಡಿಮೆ.
  2. ಪರೀಕ್ಷೆಯ ದಿನದಂದು ಲಘು ಆಹಾರ ಸೇವಿಸಬೇಕು ಮತ್ತು ನಿರಾತಂಕವಾಗಿ ಪರೀಕ್ಷಾ ಕೇಂದ್ರ ತಲುಪಬೇಕು. ತನಗೆ ನಿಗದಿಯಾದ ಕೋಣೆ ಮತ್ತು ಸ್ಥಳದಲ್ಲಿ ಕುಳಿತು ಪ್ರವೇಶ ಪತ್ರಿಕೆಯಲ್ಲಿ ನಮೂದಿತವಾದ ಸಂಖ್ಯೆಯೇ ತಾನು ಕುಳಿತ ಆಸನದ ಮೇಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.ತಪ್ಪಾಗಿ ಯಾರದೋ ಸ್ಥಳದಲ್ಲಿ ಕೂರಬಾರದು. ಅಥವಾ ತನ್ನ ರಿಜಿಸ್ಟರ್ ನಂಬರ್ ಅನ್ನು ತಪ್ಪಾಗಿ ಬರೆಯಬಾರದು.
  3. ಪರೀಕ್ಷೆ ಹತ್ತಿರ ಬಂದಾಗ ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಹಾಗೂ ಮಾಧ್ಯಮದ ಮೂಲಕ ಹಲವಾರು ವಿದ್ಯಾರ್ಥಿಗಳ ನೆರವಿನ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ ಇವುಗಳನ್ನು ನೋಡಬೇಕು.ಓದಬೇಕು ಮತ್ತು ಆಲಿಸಿಕೊಳ್ಳಬೇಕು. ಬಹುತೇಕ ಸಂದರ್ಭದಲ್ಲಿ ಇಲ್ಲಿ ಚರ್ಚಿತವಾಗುವ ವಿಷಯಗಳು ಪರೀಕ್ಷಾ ದೃಷ್ಟಿಯಿಂದ ಸಹಾಯಕವಾಗಿರುತ್ತವೆ. ಪರಿಣತ ಅಧ್ಯಾಪಕರು ಮತ್ತು ಪ್ರಶ್ನೆ ಪತ್ರಿಕೆ ರೂಪಿಸುವವರು ಈ ಕಾರ್ಯಕ್ರಮಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ಕೊಡುತ್ತಿರುತ್ತಾರೆ.
  4. ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ದೊರೆತ ಕೂಡಲೇ ತಡ ಬಡಾಯಿಸಿ ಬರೆಯಲು ಆರಂಭಿಸಬಾರದು. ಎಷ್ಟೇ ತಯಾರಿ ಇದ್ದರೂ ಪರೀಕ್ಷೆಯ ವೇಳೆಯಲ್ಲಿ ಕೊಂಚ ಆತಂಕವಿರುತ್ತದೆ ಅದು ಸರ್ವೇ ಸಾಮಾನ್ಯ. ಮೊದಲಿಗೆ ಒಂದೆರಡು ಬಾರಿ ದೀರ್ಘವಾಗಿ ಉಸಿರಾಡಿ ಆತಂಕವನ್ನು ಕಡಿಮೆ ಮಾಡಿಕೊಳ್ಳಬೇಕು.
  5. ಪ್ರಶ್ನೆ ಪತ್ರಿಕೆ ಕೈಗೆ ಬಂದ ಕೂಡಲೇ ಅದನ್ನು ನಿಧಾನವಾಗಿ ಕನಿಷ್ಠ ಮೂರು ಬಾರಿ ಓದಿಕೊಳ್ಳಬೇಕು. ಅದಾದ ಬಳಿಕ ಸುಲಭ ವಾಗಿ ಉತ್ತರಿಸಬಲ್ಲ ಪ್ರಶ್ನೆಗಳನ್ನು ಮೊದಲಿಗೆ ಆಯ್ದುಕೊಂಡು ಉತ್ತರಿಸಬೇಕು.
    ತದನಂತರ ತನಗೆ ಸ್ವಲ್ಪ ಉತ್ತರ ತಿಳಿದಿರುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಅದಾದ ಮೇಲೆ ತನಗೆ ತಿಳಿದಿರುವ ಪ್ರಶ್ನೆಗಳಿದ್ದರೂ, ಪರೀಕ್ಷಾ ಸಮಯ ಮುಗಿಯುವ ಮೊದಲೇ ಎದ್ದು ಹೋಗಬಾರದು. ಮನಸ್ಸಿನಲ್ಲಿ ಕೆದಕಿ ನೆನಪು ಮಾಡಿ ಕಷ್ಟದ ಪ್ರಶ್ನೆಗಳಿಗೆ ತಿಳಿದಷ್ಟನ್ನಾದರೂ ಬರೆಯಬೇಕು.
    ಯಾವುದೇ ಪ್ರಶ್ನೆಯನ್ನು ಬಿಡದಂತೆ ಉತ್ತರಿಸಬೇಕು .ಹೀಗೆ ಅಂಕಗಳಿಸುವ ಯಾವ ಅವಕಾಶವನ್ನು ಬಿಡದಂತೆ ಉತ್ತರಿಸಿ ಆರಾಮವಾಗಿ ಪರೀಕ್ಷಾ ಕೇಂದ್ರದಿಂದ ಹೊರಬಂದು ಮುಂದಿನ ವಿಷಯಕ್ಕೆ ತಯಾರಿ ನಡೆಸಬೇಕು.
  6. ಒಂದು ಪರೀಕ್ಷೆ ಚೆನ್ನಾಗಿ ಬರೆದೆನೆಂದು ಬೀಗುತ್ತಾ ಉಳಿದ ಪರೀಕ್ಷೆಗಳ ಬಗ್ಗೆ ಉಪೇಕ್ಷೆಸಲ್ಲದು. ಹಾಗೆ ಒಂದು ಪರೀಕ್ಷೆ ಚೆನ್ನಾಗಿ ಬರೆಯಲಿಲ್ಲವೆಂದು ದುಃಖದಿಂದ ಉಳಿದ ಪರೀಕ್ಷೆಗಳಿಗೆ ತಯಾರಿಯ ಕೈಬಿಡಬಾರದು. ಸಮಾನವಾಗಿ ಪರಿಗಣಿಸಿ ಪರೀಕ್ಷೆ ಬರೆಯಬೇಕು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top