

ವಾರ ಭವಿಷ್ಯ ದಿನಾಂಕ 02.02.2025 ರಿಂದ 08.02.2025 ರ ವರೆಗೆ
ವಿಶೇಷ ದಿನಗಳು :04.02.2025…….ರಥ ಸಪ್ತಮೀ
06.02.2025…….ಮಧ್ವ ನವಮೀ
08.02.2025……..ಸರ್ವೈಕಾದಶೀ
ಮೇಷ : ಸಪ್ತಮಾಧಿಪತಿ ಶುಕ್ರ ರಾಹುವಿನೊಂದಿಗೆ ವ್ಯಯದಲ್ಲಿ ಇದ್ದಾನೆ. ಸಂಗಾತಿಯೊಂದಿಗೆ ವೈಮನಸ್ಸು, ನಿಮ್ಮ ಮೇಲೆ ತಂತ್ರ ಮಂತ್ರ ಪ್ರಯೋಗಾದಿಗಳು ನಡೆಯುವ ಸಮಯ ಇದಾಗಿರುತ್ತದೆ. ತುಂಬಾ ದಿನಗಳಿಂದ ಉಳಿದಿದ್ದ ಉದ್ಯೋಗ-ಮನೆ ,ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರವಾಗಲಿದೆ. ಶುಭ ಸಮಾರಂಭದಲ್ಲಿ ಓಡಾಟ ಮಾಡುವಿರಿ. ಹಣದ ಹರಿವು ಉತ್ತಮವಾಗಿ ನಡೆಯಲಿದೆ ಪೋಷಕರೊಂದಿಗೆ ವೈಮನಸ್ಸುಬರಲಿದೆ. ಗುರುವಿನ ಅನುಗ್ರಹ ನಿಮಗಿದ್ದರೂ ಅನಗತ್ಯವಾಗಿ ಬರುವ ಕೋಪವನ್ನು ನಿಯಂತ್ರಿಸಿಕೊಳ್ಳಿರಿ. ಕಿವಿ .ಎದೆ ,ಹೃದಯಭಾಗದ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಕುಟುಂಬದಲ್ಲಿ ಸಾಮರಸ್ಯವಿರಲಿ. ದುರ್ಗಾ ಪಾರಾಯಾಣದಿಂದ ಹೆಚ್ಚಿನ ಸಮಸ್ಯೆಗಳು ಪರಿಹಾರವಾಗಲಿದೆ.
ವೃಷಭ : ಪಾದರಸದಂತೆ ಓಡಾಟ ಮಾಡುವಿರಿ .ನಿಮ್ಮ ಕೀರ್ತಿ ಪ್ರತಿಷ್ಠೆಗಳು ಆಕಾಶದೇತ್ತರಕ್ಕೆ ಏರಲಿದೆ. ವ್ಯವಹಾರ –ಉದ್ಯೋಗದ ನಿಮಿತ್ತ ನಿಮ್ಮ ವಯಕ್ತಿಕ ಜೀವನಕ್ಕೆ ಸಮಯ ಸಾಕಾಗುವುದಿಲ್ಲ.ವಿವಾಹ ಅಪೇಕ್ಷಿಗಳಿಗೆ ಸಕಾಲವಾಗಿದೆ. ಆರ್ಥಿಕ ಬೆಳವಣಿಗೆಗೆ ಸಕಾಲವಾಗಿದೆ. ಕೆಲವೊಮ್ಮೆ ಕೆಲವೊಂದು ಅವಕಾಶಗಳು ನಿಮ್ಮ ಕೈ ತಪ್ಪಿ ಹೋಗಲಿದೆ. ವಿಘ್ನಗಳು ದೂರವಾಗಿ ಹೊಸ ವಾಹನ ಖರೀಧಿ ಮಾಡುವಿರಿ.ಗೃಹ ನಿರ್ಮಾಣ ಯೋಗವಿದೆ. ಹಣ ನಷ್ಟವಾಗುವ ಸಾಧ್ಯತೆಯೂ ಕಂಡು ಬರುತ್ತಿದೆ. ಲಕ್ಷ್ಮೀ –ನರಸಿಂಹ ದೇವರ ಸ್ತೋತ್ರ ಪಾರಾಯಣದಿಂದ ಅನೇಕ ಸಮಸ್ಯೆಗಳು ದೂರವಾಗಲಿದೆ. ಉದ್ಯೋಗವನ್ನು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಿರಲಿ.
ಮಿಥುನ : ದಿನಾಂಕ 10 ರಂದು ಬುಧ ಭಾಗ್ಯಕ್ಕೆ ಬಂದು ಆರ್ಥಿಕವಾಗಿ ಬಲಾಢ್ಯರಾಗಲಿದ್ದೀರಿ. ಜನರು ನಿಮ್ಮ ಪ್ರತಿಭೆಯನ್ನು ಗುರುತಿಸಲಿದ್ದಾರೆ. ಒಂದೇ ವಿಷಯವನ್ನು ನಿರಂತರ ಯೋಚಿಸುವುದರಿಂದ ಮಾನಸಿಕ ಒತ್ತಡ ಉಂಟಾಗಲಿದೆ. ಅನ್ಯ ವ್ಯಕ್ತಿಗಳ ವಿಷಯದಲ್ಲಿ ಮೂಗು ತೂರಿಸುವುದನ್ನು ಬಿಡುವುದು ಒಳ್ಳೆಯದು. ವಾಹನವನ್ನು ಓಡಿಸುವಾಗ ಎಚ್ಚರವಿರಲಿ. ಸಂಗಾತಿಯ ವಿಷಯದಲ್ಲಿ ಪ್ರೀತಿ ವಿಶ್ವಾಸ ಕುಂದದಿರಲಿ. ಕಲಹಗಳಲ್ಲಿ ಭಾಗವಹಿಸದಿರಿ. ನಿಮ್ಮ ಆರೋಗ್ಯದ ಬಗ್ಗೆ ಎಚ್ಚ್ರವಹಿಸುವುದು ಒಳ್ಳೆಯದು. ಗುರುವಿನ ಅನುಗ್ರಹಕ್ಕಾಗಿ ದತ್ತಾತ್ರೇಯ ಚರಿತ್ರೆ ಓದುವುದನ್ನುರೂಢಿಸಿ ಕೊಳ್ಳಿರಿ. ಯಾರಿಗೂ ಸಾಲ ಕೊಡಬೇಡಿರಿ.
ಕರ್ಕಾಟಕ : ಶನಿ ಅಷ್ಟಮದಲ್ಲಿ ಮಾರ್ಚ್ 29 ರ ವರೆಗೆ ಇರುತ್ತಾನೆ. ಕೆಲಸದ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಭೀರಲಿದೆ .ನರ ಎಲುಬು ನೋವು ಬರುವ ಸಾಧ್ಯತೆ.ಹಣದ ವಿಷಯದಲ್ಲಿ ಎಚ್ಚರವಿರಲಿ. ಹಿರಿಯ ಮೇಲಧಿಕಾರಿಗಳೊಂದಿಗೆ ಹೊಂದಾಣಿಕೆಯ ಪ್ರವೃತ್ತಿ ನಿಮ್ಮಲ್ಲಿರಲಿ. ಎಚ್ಚರಿಕೆಯಿಂದ ವಾಹನ ಚಲಾಯಿಸಿರಿ. ನಿಮ್ಮ ಅಭಿವೃದ್ಧಿಗೆ ಕೆಲವರು ಹಿತ ಶತ್ರುಗಳು ಅಡ್ಡ ಗಾಲು ಹಾಕುವವರಿದ್ದಾರೆ ಎಚ್ಚರವಿರಲಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದರಿಂದ ಶನಿಯ ದೋಷ ನಿವಾರಣೆಯಾಗಿ ನಿಮ್ಮ ಚಿಂತಿತ ಕೆಲಸಗಳು ನೆರವೇರಲಿವೆ. ಆಹಾರ ಸೇವನೆಯ ಬಗ್ಗೆ ಎಚ್ಚರವಿರಲಿ. ಬಂಧು ದ್ವೇಷದಿಂದ ಮನಸ್ಸಿನ ನೆಮ್ಮದಿ ಹಾಳಾಗಬಹುದು.
ಸಿಂಹ : ಶನಿ ಮಾರ್ಚ್ 29 ರಂದು ಮೀನ ರಾಶಿಗೆ ಬಂದು ಅಷ್ಟಮಕ್ಕೆ ಬರಲಿದ್ದಾನೆ. ಪ್ರಸ್ತುತ ಶುಕ್ರ ರಾಹು ಅಷ್ಟಮದಲ್ಲಿ ಸಂಚಾರ ಮಾಡುತ್ತಿದ್ದಾನೆ. ನಿಮ್ಮ ಒಳಸಂಚು ಟುಸ್ ಪಟಾಕಿಯಂತೆ ವ್ಯರ್ಥವಾಗಲಿದೆ. ಸಂಗಾತಿಯ ಮನಸ್ಸನ್ನು ಹಾಳು ಮಾಡಬೇಡಿರಿ. ವಿದ್ಯಾರ್ಥಿಗಳು ಪ್ರೀತಿ ಪ್ರೇಮಕ್ಕೆ ಬಲಿಯಾಗಬೇಡಿರಿ. ವಿಯೋಗಗಳು ಬರುವ ಸಾಧ್ಯತೆ ಇದೆ . ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ನಿಮ್ಮಲ್ಲಿ ಎಚ್ಚರ ಇರಬೇಕು. ಮನಸ್ಸಿನಲ್ಲಿ ಕೆಟ್ಟ ಯೋಚನೆಗಳು ಬರದಂತೆ ಎಚ್ಚರವಹಿಸಿರಿ. ಶೀತ ಕಫ ,ಸಂಬಂಧಿ ಸಮಸ್ಯೆಗಳು ಕಾಡಲಿದೆ. ಅಪರಿಚಿತರ ಜೊತೆಗೆ ವ್ಯವಹಾರ ಬೇಡ. ಕೆಲವರಿಗೆ ಪಾಲುಗಾರಿಕೆ ವ್ಯವಹಾರದಲ್ಲಿ ನಷ್ಟ ಉಂಟಾಗಲಿದೆ. ಸಂಗಾತಿಯೊಂದಿಗೆ ನೀವಾಡುವ ಸಿಟ್ಟಿನ ಮಾತುಗಳು ಅತಿರೇಕಕ್ಕೆ ಹೋಗುವ ಸಾಧ್ಯತೆ ಇದೆ. ಎಚ್ಚರವಿರಲಿ.ನಿಮ್ಮ ಚೌಡಿ ದೇವತೆಯನ್ನು ಪ್ರಾರ್ಥನೆ ಮಾಡಿರಿ.
ಕನ್ಯಾ : ತಂದೆಯೊಂದಿಗೆ ,ಸಂಗಾತಿಯೊಂದಿಗೆ ಮಾತಿನ ಚಕಮಕಿ ನಡೆಯಲಿದೆ.ನಿಶ್ಚಿತ ಗುರಿಯತ್ತ ಸಾಗುವಾಗ ಅಡಚಣೆಗಳು ,ತಾಪತ್ರಯಗಳು ತೋರಿಬರಬಹುದು. ಗುರು ಭಾಗ್ಯದಲ್ಲಿ ಇರುವುದರಿಂದ ತೊಂದರೆಯ ಪ್ರಮಾಣ ಕಡಿಮೆಯಾಗಲಿದೆ. ರಾಜಕೀಯ ಸಾಮಾಜಿಕ ವ್ಯವಹಾರಗಳು ಅಸ್ತವ್ಯಸ್ತ ಆಗಲಿದೆ. ಸಾಂಸಾರಿಕವಾಗಿ, ಶುಕ್ರ ರಾಹು ಸಪ್ತಮದಲ್ಲಿ ಇದ್ದುಕೊಂಡು, ಕಿರಿ ಕಿರಿಯನ್ನು ತರುವವರಾಗಿದ್ದಾರೆ. ಕುಟುಂಬದಲ್ಲಿ ಸದಸ್ಯರೊಬ್ಬರ ಸೇರ್ಪಡೆ ಆಗಲಿದೆ. ಭಾವನಾತ್ಮಕ ತೀರ್ಮಾನ ತೆಗೆದುಕೊಳ್ಳುವುದು ಬೇಡ. ಯಾವುದೇ ವ್ಯವಹಾರದಲ್ಲಿ ಸಹಿ ಹಾಕುವಾಗ ಎಚ್ಚರವಿರಲಿ. ಶನಿ ಮೀನರಾಶಿಗೆ ಬರುವ ಸಮಯ ಮಾರ್ಚ್ 29 ರಂದು ಆಗಿರುತ್ತದೆ. ಈಗದಿಂದಲೇ ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಾಗಿದೆ .
ತುಲಾ : ಗುರು ಅಷ್ಟಮದಲ್ಲಿ ಇರುವುದರಿಂದ ಶುಭ ಕೆಲಸಗಳಿಗೆ ವಿಘ್ನಗಳು ಬರುವ ಸಾಧ್ಯತೆ ಇದೆ. ಯಾವುದೇ ವ್ಯವಹಾರಕ್ಕೆ ಹಣ ತೊಡಗಿಸುವ ಮೊದಲು ಯೋಚಿಸಿ ಮುನ್ನೆಡೆಯಿರಿ. ಹಿತ ಶತ್ರುಗಳ ಕಿರಿಕಿರಿ ಇರುತ್ತದೆ. ಅಧಿಕಾರಿಗಳಿಂದ ಪ್ರಶಂಸೆಯ ಮಾತುಗಳನ್ನು ಕೇಳಲಿದ್ದೀರಿ. ಪಿತ್ತೋಶ್ಣದಿಂದ ಎದೆ ಉರಿ ಕಂಡು ಬರಲಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಎಚ್ಚರವಹಿಸಿರಿ. ಹೊಸ ಮನೆ ಕಟ್ಟಲು ಅಡಿಪಾಯ ಹಾಕಲಿದ್ದೀರಿ. ಉದ್ಯೋಗದಲ್ಲಿ ವರ್ಗಾವಣೆಯ ಸೂಚನೆ ಕಂಡುಬರುತ್ತಿದೆ. ಕುಟುಂಬದ ಹಿರಿಯರ ಬೇಸರವನ್ನು ನೋಡುವ ಸಮಯವಾಗಿದೆ.ಏನಾದರೂ ಸಾಧಿಸಬೇಕು ಎನ್ನುವ ಹಠ ನಿಮ್ಮಲ್ಲಿ ಬರಲಿದೆ. ದುರ್ಗೆ ಮತ್ತು ನಾಗ ದೇವರ ಪ್ರಾರ್ಥನೆ ಅಗತ್ಯವಿದೆ.
ವೃಶ್ಚಿಕ : ಗುರುವಿನ ಅನುಗ್ರಹವಿರುವುದರಿಂದ ವಿವಾಹ ಭಾಗ್ಯ ಕೂಡಿ ಬರಲಿದೆ.ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ. ಸಿಕ್ಕಿದ ಉದ್ಯೋಗಕ್ಕೆ ತೃಪ್ತಿ ನಿಮಗಿರಬೇಕು. ಪ್ರಭಾವೀ ವ್ಯಕ್ತಿಗಳ ಭೇಟಿ ಮಾಡುವಿರಿ.ಪತ್ನಿಯ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಮಕ್ಕಳ ವರ್ತನೆ ನಿಮಗೆ ಬೇಸರವನ್ನು ತರಲಿದೆ.ನಾನಾ ರೀತಿಯಲ್ಲಿ ಧನಾಗಮನವಾಗಲಿದೆ. ಸಂಗಾತಿಯೊಂದಿಗೆ ಕಲಹ ಬರುವ ಸಾಧ್ಯತೆ ಇರುತ್ತದೆ. ಸುಖ ಸ್ಥಾನದ ಶನಿಗೆ ವಿಷ್ಣು ಸಹಸ್ರನಾಮ ಪಾರಾಯಣ, ಪಂಚಮದ ಶುಕ್ರ ಮತ್ತು ರಾಹುವಿಗೆ ದೇವಿ ಮತ್ತು ನಾಗ ದೇವರ ಪ್ರಾರ್ಥನೆ ಅಗತ್ಯವಿದೆ. ಖರ್ಚು,ವೆಚ್ಚಗಳ ಬಗ್ಗೆ ಎಚ್ಚರವಿರಲಿ. ಬರ ಬೇಕಿದ್ದ ಹಳೆಯ ಬಾಕಿ ಕೈ ಸೇರಲಿದೆ . ಮೇ 14 ರ ನಂತರ ಗುರು ಅಷ್ಟಮಕ್ಕೆ ಬರಲಿದ್ದಾನೆ. ಈಗದಿಂದಲೇ ರುದ್ರ ಪಾರಾಯಣ ಆರಂಭಿಸಿರಿ.
ಧನು : ಗುರು 6 ನೇ ಮನೆಯಲ್ಲಿ ಇರುವುದರಿಂದ 6 ನೇ ಶುಕ್ರ 4ನೇ ಮನೆಯಲ್ಲಿ ರಾಹುವಿನೊಂದಿಗೆ ಇರುವುದರಿಂದ ನಿಮ್ಮ ಆರೋಗ್ಯದ ಬಗ್ಗೆ,ತಾಯಿಯವರ ಆರೋಗ್ಯದ ಬಗ್ಗೆ ಎಚ್ಚರವಿರಬೇಕು. ಅಗತ್ಯವಿಲ್ಲದ ವಿಷದ ಬಗ್ಗೆ ಇತರರಲ್ಲಿ ವಾದ –ವಿವಾದ ಮಾಡುವುದು ಬೇಡ. ಯಾವುದೇ ವ್ಯವಹಾರಕ್ಕೆ ತೊಡಗಿಸಿಕೊಳ್ಳುವ ಮೊದಲು ಗೊತ್ತಿರುವ ಮಂದಿಯಲ್ಲಿ ಚರ್ಚಿಸಿ ತೀರ್ಮಾನಿಸಿಕೊಳ್ಳಿರಿ. ಸಾಲ ತೆಗೆದುಕೊಳ್ಳುವುದು ,ಅಥವಾ ಕೊಡುವುದು ಮಾಡುವ ಕಾಲ ಇದಲ್ಲ. ಮಂಗಳ ಕಾರ್ಯಗಳಿಗೆ ಅಡಚಣೆ ಬರುವ ಸಾಧ್ಯತೆ ಇದೆ. ರಾಜಕೀಯದಲ್ಲಿ ಇರುವ ಮಂದಿಗೆ ಶತ್ರು ಭಾಧೆ ಹೆಚ್ಚಾಗಲಿದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯಲಿದೆ. ಆರಂಭದಲ್ಲಿ ಗಣಪತಿ ದೇವರ ಪ್ರಾರ್ಥನೆ ಮಾಡಿಕೊಂಡು ಮುಂದುವರಿಯಿರಿ.
ಮಕರ : ಸಾಡೇ ಸಾತ್ ಶನಿಯ ಬಿಡುಗಡೆಯ ಕಾಲ ಸನ್ನಿಹಿತವಾಗುತ್ತಿದೆ.ವ್ಯಾಪಾರ –ವ್ಯವಹಾರದಲ್ಲಿ ಅಧಿಕ ಶ್ರಮ ಪಡುವ ಅಗತ್ಯವಿದೆ. ವಾದ ವಿವಾದದಿಂದ ಸಾಧ್ಯವಾದಷ್ಟು ದೂರವಿರುವುದು ಒಳ್ಳೆಯದು. ಮನೆಯ ಅಲಂಕಾರಕ್ಕಾಗಿ ಬೆಲೆಬಾಳುವ ವಸ್ತುಗಳನ್ನು ಖರೀಧಿಸುವಿರಿ. ನಿಮ್ಮ ಗುರಿ ಸಾಧಿಸಲು ಗುರುವಿನ ಅನುಗ್ರಹ ನಿಮಗೆ ಸಿಗಲಿದೆ. ಆರೋಗ್ಯದ ಬಗ್ಗೆ ಎಚ್ಚರವರಲಿ. ನಿಮಗೆ ಅಲರ್ಜಿ ಇರುವ ಕಾರಣ ಮುನ್ನೆಚ್ಚರಿಕೆಯ ಅಗತ್ಯವಿದೆ. ಮಾವನವರ ಕಡೆಯಿಂದ ಬರುವ ಸುದ್ಧಿಯೊಂದು ಬೇಸರವನ್ನು ತರಲಿದೆ. ಹೊಸ ಮನೆ,ವಾಹನ ಕೊಳ್ಳುವ ಯೋಗ ಕೆಲವರಿಗೆ ಕೂಡಿ ಬರಲಿದೆ. ಕಣ್ಣಿನ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಬಂದ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿ ಕೊಳ್ಳಿರಿ. ನಿಮ್ಮ ಕೀರ್ತಿ ಪ್ರತಿಷ್ಠೆ ಹೆಚ್ಚಾಗಲಿದೆ.
ಕುಂಭ : ಸಾಡೇ ಸಾತ್ ಶನಿಯ ಕಾರಣದಿಂದ ಕೆಲವೊಂದು ಅಶುಭ ಸುದ್ಧಿಗಳು ಕಿವಿಗೆ ಬೀಳುತ್ತಿರುತ್ತವೆ. ದ್ವಿತೀಯಾದಲ್ಲಿ ಇರುವ ಶುಕ್ರ ಮತ್ತು ರಾಹು ಕೂಡಾ ಇದಕ್ಕೆ ಕಾರಣವಾಗಲಿದೆ. ನೀವು ಮಾಡುವ ದೈನಂದಿನ ಕೆಲಸಗಳ ಮೇಲೆಯೂ ಇದು ಪ್ರಭಾವ ಬೀಳಲಿದೆ. ಮನೆಯೊಳಗಿನ ಸಣ್ಣ ಪುಟ್ಟ ಕಲಹಗಳಿಂದಲೂ ಬೇಸರವಾಗಲಿದೆ.ಮೌನಿನ: ಕಲಹೋ ನಾಸ್ತಿ” ಆದಷ್ಟು ಮೌನವಾಗಿರಿ. ಶನಿ ಮತ್ತು ಕುಜರು ಜಗಳಕ್ಕೆ ಕಲಹಕ್ಕೆ ಪ್ರೇರಕರು. ಮಕ್ಕಳೂ ವಿರುದ್ಧ ಮಾತಾಡುವ ಸಾಧ್ಯತೆ ಇದೆ. ವಿಷ್ಣು ಸಹಸ್ರ ನಾಮ ಪಾರಾಯಣ ಉತ್ತಮವಾದ ಪರಿಹಾರವಾಗಿದೆ. ಆಶ್ಚರ್ಯವೋ ಎಂಬಂತೆ ಕೆಲವೊಂದು ಸಮಸ್ಯೆಗಳು ಪರಿಹಾರವಾಗಲಿದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಲಾಭ ಸಿಗಲಿದೆ.
ಮೀನ : ನಿಮ್ಮ ಹಿರಿಯರ ಬಗ್ಗೆ,ಹಿರಿಯಣ್ಣನ ಬಗ್ಗೆ ಎಚ್ಚ್ಸರ ಇರಲಿ.ರಾಜಕಾರಣಿಗಳಿಗೆ ,ಶಿಕ್ಷಕರಿಗೆ ,ವಕೀಲರಿಗೆ ಉತ್ತಮ ಸಮಯವಾಗಿದೆ.ಸಾಡೇ ಸಾತ್ ಶನಿಗೆ ಪರಿಹಾರವಾಗಿ ವಿಷ್ಣು ಸಹಸ್ರ ನಾಮ 108 ಶ್ಲೋಕಗಳು ಭೀಷ್ಮಾಚಾರ್ಯರು ಪಾಂಡವರಿಗೆ ಹೇಳಿದ ಅತೀ ಪುಣ್ಯಕರ ಮಂತ್ರವನ್ನು ನಿತ್ಯವೂ ಪಾರಾಯಣ ಮಾಡಿರಿ. ತೀರ್ಥ ಕ್ಷೇತ್ರ ದರ್ಶನ ಯೋಗವಿದೆ. ಗಣ್ಯ ವ್ಯಕ್ತಿಗಳ ಭೇಟಿ ಮಾಡುವಿರಿ,. ಸನ್ಮಾನಗೊಳ್ಳುವ ಯೋಗವಿದೆ. ನಿಮ್ಮ ಶತ್ರುಗಳ ಕಾಟ ಹೆಚ್ಚಾಗುತ್ತಿದ್ದಂತೆ ಮಹಾ ಸುದರ್ಶನ ಮಂತ್ರವನ್ನು ಹೆಚ್ಚುಹೆಚ್ಚಾಗಿ ಮಾಡುತ್ತಾ ಬನ್ನಿರಿ. ಸಂಗಾತಿಯೊಂದಿಗೆ ಬಹಳ ಎಚ್ಚರದಿಂದ ವರ್ತಿಸಿರಿ. ಇನ್ನೊಬ್ಬರ ಚಾಡಿ ಮಾತುಗಳಿಗಳಿಗೆ ಮನ್ನಣೆ ಕೊಡ ಬೇಡಿರಿ.
ನಿಮ್ಮ ಪೂರ್ಣ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು.
ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು. ಮದುವೆ ಹೋದಾಣಿಕೆ /ವಾಸ್ತು ಸಲಹೆ ತಿಳಿಸಲಾಗುವುದು .












































