2026-27ನೇ ಸಾಲಿನ ಕಂಬಳ ವೇಳಾಪಟ್ಟಿ

ಮೂಡುಬಿದಿರೆ: 2026-27ನೇ ಸಾಲಿನ ಕಂಬಳ ಋತುವಿನ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅಕ್ಟೋಬರ್ನಲ್ಲಿ ಮೈಸೂರು ಕಂಬಳದ ಮೂಲಕ ಋತುವಿಗೆ ಚಾಲನೆ ದೊರೆಯಲಿದೆ. ಬಳಿಕ ನವೆಂಬರ್ನಿಂದ ಏಪ್ರಿಲ್ ವರೆಗೆ ಕರಾವಳಿಯ ವಿವಿಧ ಕಂಬಳ ಕಣಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ನವೆಂಬರ್ 14ರಂದು ಪಣಪಿಲ, ನವೆಂಬರ್ 21ರಂದು ಕೊಡಂಗೆ ಹಾಗೂ ನವೆಂಬರ್ 28ರಂದು ಕಕ್ಕೆಪದವು ಕಂಬಳ ನಡೆಯಲಿದೆ. ಡಿಸೆಂಬರ್ ತಿಂಗಳಲ್ಲಿ ಹೊಕ್ಕಾಡಿ, ಬಳ್ಳಮಂಜ, ಬಾರಾಡಿ, ಮಂಗಳೂರು ಹಾಗೂ ಮೂಲ್ಕಿ ಕಂಬಳಗಳಿಗೆ ದಿನಾಂಕ ನಿಗದಿಪಡಿಸಲಾಗಿದೆ. ಜನವರಿಯಲ್ಲಿ ಮಿಯ್ಯಾರು, ನರಿಂಗಾನ, ಅಡ್ಡೆ. ಮೂಡುಬಿದಿರೆ ಹಾಗೂ ಐಕಳ ಕಂಬಳಗಳು ನಡೆಯಲಿದ್ದು, ಫೆಬ್ರವರಿಯಲ್ಲಿ ಪುತ್ತೂರು, ಜಪ್ಪಿನಮೊಗರು, ವಾಮಂಜೂರ್ ಹಾಗೂ ಎರ್ಮಾಳ್ ಕಂಬಳಗಳು ಆಯೋಜನೆಗೊಳ್ಳಲಿವೆ.
ಮಾರ್ಚ್ ತಿಂಗಳಲ್ಲಿ ಬಂಟ್ವಾಳ, ಬಂಗಾಡಿ, ವೇಣೂರು ಹಾಗೂ ಉಪ್ಪಿನಂಗಡಿ ಕಂಬಳಗಳು ನಡೆಯಲಿದ್ದು, ಏಪ್ರಿಲ್ನಲ್ಲಿ ಗುರುಪುರ, ಬಳ್ಳುಂಜೆ, ಹರೇಕಳ ಹಾಗೂ ಬಡಗಬೆಟ್ಟು ಕಂಬಳಗಳೊಂದಿಗೆ 2026-27ರ ಕಂಬಳ ಋತು ಪೂರ್ಣಗೊಳ್ಳಲಿದೆ.
ಕಂಬಳ ಕ್ಯಾಲೆಂಡರ್ 2026-27
ನವೆಂಬರ್
ನವೆಂಬರ್ 14 – ಪಣಪಿಲ
ನವೆಂಬರ್ 21 – ಕೊಡಂಗೆ
ನವೆಂಬರ್ 28 – ಕಕ್ಕೆಪದವು
ಡಿಸೆಂಬರ್
ಡಿಸೆಂಬರ್ 5 – ಹೊಕ್ಕಾಡಿಗೋಳಿ
ಡಿಸೆಂಬರ್ 6 – ಬಳ್ಳಮಂಜ
ಡಿಸೆಂಬರ್ 12 – ಬಾರಾಡಿಬೀಡು
ಡಿಸೆಂಬರ್ 19 – ಮಂಗಳೂರು
ಡಿಸೆಂಬರ್ 26 – ಮೂಲ್ಕಿ
ಜನವರಿ
ಜನವರಿ 2 – ಮಿಯ್ಯಾರು
ಜನವರಿ 9 – ನರಿಂಗಾನ
ಜನವರಿ 16 – ಅಡ್ಡೆ
ಜನವರಿ 23 – ಮೂಡಬಿದಿರೆ
ಜನವರಿ 30 – ಪುತ್ತೂರು
ಫೆಬ್ರವರಿ
ಫೆಬ್ರವರಿ 6 – ಐಕಳ
ಫೆಬ್ರವರಿ 13 – ಜಪ್ಪಿನಮೊಗರು
ಫೆಬ್ರವರಿ 20 – ವಾಮಂಜೂರು
ಫೆಬ್ರವರಿ 27 – ಎರ್ಮಾಳ್
ಮಾರ್ಚ್
ಮಾರ್ಚ್ 6 – ಬಂಟ್ವಾಳ
ಮಾರ್ಚ್ 13 – ಬಂಗಾಡಿ
ಮಾರ್ಚ್ 20 – ವೇಣೂರು
ಮಾರ್ಚ್ 27 – ಉಪ್ಪಿನಂಗಡಿ
ಏಪ್ರಿಲ್
ಏಪ್ರಿಲ್ 3 – ಗುರುಪುರ
ಏಪ್ರಿಲ್ 10 – ಬಳ್ಳುಂಜೆ
ಏಪ್ರಿಲ್ 17 – ಹರೇಕಳ
ಏಪ್ರಿಲ್ 24 – 80 ಬಡಗಬೆಟ್ಟು



































