ಕಲ್ಲಡ್ಕ ಇಸ್ಮಾಯಿಲ್ ಬೆತ್ತಲೆ ಶವ ನೈಲಾನ್ ಹಗ್ಗದಿಂದ ಸುತ್ತಿತ್ತು!

Picture of RB NEWS

RB NEWS

Bureau Report


ಕಲ್ಲಡ್ಕ ಇಸ್ಮಾಯಿಲ್ ಅವರು ನಾಪತ್ತೆಯಾಗಿ ಮೂರು ದಿನಗಳ ನಂತರ ನೇತ್ರಾವತಿ ನದಿಯ ಮಧ್ಯದಲ್ಲಿ ಮೃತದೇಹವೊಂದು ಕಲ್ಲಿನ ಕೊರಕಲಿನಲ್ಲಿ ಸಿಲಕಿದೆ ಎಂದು ಮಾಹಿತಿಯೊಂದು ಕಲ್ಲಡ್ಕಕ್ಕೆ ಬಂದಿತ್ತು. ಈ ಮಾಹಿತಿಯನ್ವಯ ಮೃತದೇಹವನ್ನು ನೋಡಿ ಗುರುತಿಸಲು ಹೋದವರಲ್ಲಿ ಪ್ರಮುಖರಾಗಿದ್ದವರು ಅಬ್ದುಲ್ ಹಮೀದ್. ಇವರು ಇಸ್ಮಾಯಿಲ್ ಅವರ ತಂಗಿಯ ಗಂಡ. ಇವರ ಹೇಳಿಕೆ ಈ ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅವರ ಹೇಳಿಕೆಯ ಪೂರ್ಣ ಪಾಠ ಹೀಗಿದೆ.


ತಾ. 22ರಂದು ಅವರ ತಂಗಿಯ ಗಂಡ ಅಬ್ದುಲ್ ಹಮೀದ್ ಅವರು ತಮ್ಮ ಹೇಳಿಕೆಯಲ್ಲಿ ಸರಪಾಡಿ ಹತ್ತಿರ ಪೆರ್ಲ ಎಂಬ ಸ್ಥಳದಲ್ಲಿ ಹೊಳೆಯಲ್ಲಿ ಕಲ್ಲೆನೆಡೆಯಲ್ಲಿ ಒಂದು ಹೆಣದ ಕಾಲು ಕಾಣುತ್ತಿದೆಯೆಂದು ಪೆರ್ಲ ಸುಲೇಮಾನ್ ಎಂಬವರು ಕಲ್ಲಡ್ಕಕ್ಕೆ ಬಂದು ತಿಳಿಸಿದ ಮೇರೆಗೆ ತಾನು ಇಬ್ರಾಹಿಂನೊOದಿಗೆ ಸ್ಕೂಟರ್‌ನಲ್ಲಿ ಪೆರ್ಲಕ್ಕೆ ತೆರಳಿ ಅಲ್ಲಿಂದ ಹೊಳೆಯಲ್ಲಿ ಅಬ್ದುಲ್ಲ ಎಂಬವರ ದೋಣಿಯಲ್ಲಿ ಹೆಣವಿದ್ದ ಸ್ಥಳಕ್ಕೆ ಹೋದುದಾಗಿಯೂ, ಅಲ್ಲಿ ಕಲ್ಲಿನ ಮೇಲೆ ಹೆಣವು ಬೆತ್ತಲೆಯಾಗಿ ಕವುಚಿ ಬಿದ್ದುದನ್ನು ತಾನು ನೋಡಿದುದಲ್ಲದೆ ಹೆಣದ ಗಂಟಲಿನ ಸುತ್ತಲೂ ನೈಲಾನ್ ಹಗ್ಗ ಮತ್ತು ಹುರಿ ಹಗ್ಗ ಸುತ್ತಿದ್ದುದನ್ನು ಕಂಡುದಾಗಿಯೂ ತಿಳಿಸಿದರು.
ಅದು ಇಸ್ಮಾಯಿಲ್ ಅವರ ಶವವೆಂದು ಗುರುತು ಸಿಕ್ಕಿದ ಮೇಲೆ ಅವರಿಬ್ಬರೂ ಅದೇ ದೋಣಿಯಲ್ಲಿ ಪುನ: ದಡಕ್ಕೆ ಬಂದು ಕಲ್ಲಡ್ಕಕ್ಕೆ ಮರಳಿ ಮೃತರ ಸಂಬOಧಿಕರಿಗೆ ಈ ವಿಚಾರ ತಿಳಿಸಿದುದಾಗಿ ಹೇಳಿದ ಅಬ್ದುಲ್ ಹಮೀದ್ ಅವರು, ಅನಂತರ ತಾನು ಆ ಸ್ಥಳಕ್ಕೆ ಮರಳಿ ಅದೇ ದೋಣಿಯಲ್ಲಿ ಹೊಳೆಯ ಆಚೆ ದಡಕ್ಕೆ ಹೋದಾಗ ಬಂಟ್ವಾಳ ಸಬ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳು ಕಾಣಸಿಕ್ಕಿದರೆಂದೂ, ಅವರು ಕೂಡಾ ಅದೇ ದೋಣಿಯಲ್ಲಿ ಹೆಣವಿದ್ದಲ್ಲಿಗೆ ಹೋದರೆಂದೂ ವಿವರಿಸಿದರು.


ಆ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳು ಪೆಟ್ರೋಮ್ಯಾಕ್ಸ್ ಇರಿಸಿ ಅಲ್ಲಿ ಕಾದು ಕೂತರೆಂದೂ, ಸಬ್ ಇನ್ಸ್ಪೆಕ್ಟರ್ ಮರಳಿ ಹೋಗಿ ಸ್ವಲ್ಪ ಹೊತ್ತಿನಲ್ಲಿ ಪುತ್ತೂರು ಡಿಎಸ್‌ಪಿ ಪಿ. ಭಾಸ್ಕರ್ ಮತ್ತಿತರರು ಬಂದರೆOದೂ, ಪುತ್ತೂರು ಡಿಎಸ್‌ಪಿಯವರು ಅಲ್ಲಿಂದ ದಡಕ್ಕೆ ಮರಳಿ ಬೆಳಗಿನ ಜಾವ 5.30 ಗಂಟೆಗೆ ಅಲ್ಲಿಗೆ ಬಂದು ಶವದ ಮೇಲೆ ಪರೀಕ್ಷೆ ನಡೆಸಿದರೆಂದೂ, ಆ ಮೇಲೆ ಮರಣೊತ್ತರ ಶಸ್ತ್ರ ಪರಿಕ್ಷೆಯ ನಂತರ ಶವವನ್ನು ತಾ 9-9-76ರಂದು ಪೂರ್ವಾಹ್ನ 11 ಗಂಟೆಗೆ ತಮಗೆ ಬಿಟ್ಟುಕೊಟ್ಟರೆಂದೂ ಅಬ್ದುಲ್ ಹಮೀದ್ ಹೇಳಿದರು.


ಆಮೇಲೆ ಶವವನ್ನು ಪಾಣೆಮಂಗಳೂರಿನವರೆಗೆ ತಂದು, ಅಲ್ಲಿಂದ ಹೆಣದ ಪೆಟ್ಟಿಗೆಯಲ್ಲಿ ಶವವನ್ನು ಇರಿಸಿ ಹೊತ್ತುಕೊಂಡು ಇಸ್ಮಾಯಿಲ್ ಅವರ ಮನೆಗೆ ತಂದರೆOದೂ ತಿಳಿಸಿದ ಅವರು, ಇಸ್ಮಾಯಿಲ್ ಅವರ ಮನೆಯಲ್ಲಿ ಶವದ ಮುಖದ ಬಟ್ಟೆ ತೆಗೆದಾಗ ಇಸ್ಮಾಯಿಲ್ ಅವರ ಮಡದಿ, ತಾಯಿ ಮತ್ತಿತರರು ನೋಡಿ ಇಸ್ಮಾಯಿಲ್ ಅವರ ಹೆಣವೆಂಬುದನ್ನು ಗುರುತಿಸಿದರೆಂದೂ ಅನಂತರ ಶವ ಸಂಸ್ಕಾರ ನಡೆಯಿತೆಂದೂ ಹೇಳಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top