2ಹೊಸ ಬಸ್ಸು ಸಂಚಾರಕ್ಕೆ ಒದಗಿಸಿದ ಪದ್ಮಾಂಬಿಕಾ ಮೋಟಾರ್ಸ್

Picture of RB NEWS

RB NEWS

Bureau Report

ಕಾರ್ಕಳ: ಕಳೆದ 35 ವರ್ಷಗಳಿಂದ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿರುವ ಪದ್ಮಾಂಬಿಕ ಮೋಟಾರ್ಸ್ ಸಂಸ್ಥೆ ಕಳೆದ ಒಂದು ವಾರದ ಅವಧಿಯಲ್ಲಿ ಸುಸಜ್ಜಿತವಾದ ಎರಡು ಹೊಸ ಬಸ್ಸುಗಳನ್ನು ರಸ್ತೆಗಿಳಿಸಿದೆ.

م

ಮಂಗಳೂರು-ಪಡುಬಿದ್ರೆ-ಕಾರ್ಕಳ ಮಾರ್ಗ ಸೇರಿದಂತೆ ಕಾರ್ಕಳ ಪರಿಸರದಲ್ಲಿ 15ಕ್ಕೂ ಹೆಚ್ಚು ಪದ್ಮಾಂಬಿಕ ಬಸ್ಸುಗಳನ್ನು ಸಂಚಾರ ನಡೆಸುತ್ತಿವೆ. ಸಂಸ್ಥೆಯ ಸೇವೆಯ ಬಗ್ಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಸ ಬಸ್ಸುಗಳಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಪ್ರಯಾಣಿಕರಿಗೆ ಇನ್ನಷ್ಟು ಆರಾಮದಾಯಕ ಪ್ರಯಾಣವನ್ನು ಒದಗಿಸಲಿವೆ.

ಕಾರ್ಕಳ – ಪಡುಬಿದ್ರೆ-ಮಂಗಳೂರು ಮಾರ್ಗವಾಗಿ ಸಂಚರಿಸುತ್ತಿರುವ ಪದ್ಮಾಂಬಿಕ ಖಾಸಗಿ ಸಾರಿಗೆ ಸಂಸ್ಥೆಯು ಎರಡು ಹೊಸ ಬಸ್ಸುಗಳನ್ನು ರಸ್ತೆಗಳಿಸಿವೆ. ಇನ್ನಷ್ಟು ರೂಟ್ ಗಳಿಗೆ ಹೊಸ ಬಸ್ಸುಗಳನ್ನು ಒದಗಿಸುವ ಯೋಜನೆ ಸಂಸ್ಥೆಗೆ ಇದೆ ಎಂದು ಸಂಸ್ಥೆಯ ಮಾಲೀಕ ಕೆ.ಜೆ .ಅಧಿಕಾರಿ ಅವರು “ಆರ್.ಬಿ.ನ್ಯೂಸ್” ಗೆ ಮಾಹಿತಿ ನೀಡಿದ್ದಾರೆ.


ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top