ಮೂಡುಬಿದಿರೆ ಮಹಾವೀರ ಕಾಲೇಜು ವಾಣಿಜ್ಯ ಸಮಾರಂಭ- ಅಶ್ವಮೇಧ 2024
ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ : ಸ್ಥಳೀಯ ಮಹಾವೀರ ಕಾಲೇಜಿನ ವಾಣಿಜ್ಯ ವಿಭಾಗದ ಸಮಾರಂಭ-ಅಶ್ವಮೇಧ 2024 ಕಾಲೇಜು ಆವರಣದಲ್ಲಿ ನಡೆಯಿತು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಗಿಲ್ರಾಯ್ ರೆಬೆಲ್ಲೋ ಬಹುಮಾನ ವಿತರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸುವುದರಿಂದ ನಾಯಕತ್ವದ ಗುಣ ಹೆಚ್ಚಳ ಸಾಧ್ಯವಾಗುತ್ತದೆ ಎಂದು ಶುಭ ಹಾರೈಸಿದರು.



ಜಿಲ್ಲಾ ಮಟ್ಟದ ಚಾಂಪಿಯನ್ ಶಿಪ್ ಬೆಳ್ತಂಗಡಿಯ ವಾಣಿ ಪಿಯು ಕಾಲೇಜಿನವರು ಬಾಚಿಕೊಂಡರು. ಮಾಡೆಲಿಂಗ್ ಕ್ಷೇತ್ರದಲ್ಲಿ ಪ್ರಥಮ ವಾಣಿ ಪಿಯು ಕಾಲೇಜು, ರೀಲ್ಸ ಮೇಕಿಂಗ್ ನಲ್ಲಿ ಪ್ರಥಮ ವಾಣಿ ಪಿಯು ಕಾಲೇಜು, ಕಂಪನಿಯ ಬ್ರಾಂಡ್ ರಂಗೋಲಿಯಲ್ಲಿ ಪ್ರಥಮ ಸಿದ್ಧಕಟ್ಟೆ ಗುಣಶ್ರೀ ಪಿಯು ಕಾಲೇಜು, ವಾಣಿಜ್ಯ ಕ್ವಿಜ್ ನಲ್ಲಿ ಪ್ರಥಮ ಜೈನ್ ಜೂನಿಯರ್ ಕಾಲೇಜು, ಮೋಕ್ ಪ್ರೆಸ್ ನಲ್ಲಿ ಪ್ರಥಮ ವಾಣಿ ಪಿಯು ಕಾಲೇಜು, ವಾಣಿಜ್ಯ ಪ್ರಚಾರದಲ್ಲಿ ಪ್ರಥಮ ಗುಣಶ್ರೀ ಪಿಯು ಕಾಲೇಜು, ವಿಶೇಷ ಪ್ರದರ್ಶನದಲ್ಲಿ ಪ್ರಥಮ ಆಳ್ವಾಸ್ ಪಿಯು ಕಾಲೇಜು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ವೇದಿಕೆಯಲ್ಲಿ ವೇಣೂರಿನ ಯಶಲತಾ ಅಮ್ಮಾಜಿ ಪೂಜಾರಿ, ಕಾಲೇಜು ಪ್ರಾಂಶುಪಾಲ ಬಾಲಕೃಷ್ಣ, ವಾಣಿಜ್ಯ ವಿಭಾಗದ ಪ್ರೊ ಹರೀಶ್ ಹಾಜರಿದ್ದರು.





































