



ಸಂಖ್ಯಾ ಶಾಸ್ತ್ರ ಅನುಸಾರ ಭವಿಷ್ಯ
ಜನ್ಮ ದಿನಾಂಕ ಮೂಲ ಸಂಖ್ಯೆ ಜನ್ಮ ದಿನಾಂಕ ಮೂಲ ಸಂಖ್ಯೆ
1, 10, 19, 28 1 6, 15, 24 6
2, 11, 20, 29 2 7, 16, 25 7
3, 12 21, 30 3 8, 17, 26 8
4, 13, 22 31 4 9 18 27 9
5, 14, 23 5
ಈ ವರ್ಷದ ಮೂಲ ಸಂಖ್ಯೆ = 9 ಹೇಗೆಂದರೆ 2025=2+0+2+5=9
ಅಂದರೆ ಮೂಲ ಸಂಖ್ಯೆ ಅಧಿಪತಿ ಕುಜ =9 ಆಗುತ್ತಾನೆ. ಪ್ರತಿಯೊಂದು ಗ್ರಹರಿಗೆ ಒಂದೊಂದು ಸಂಖ್ಯೆ ಇರುತ್ತದೆ. ರವಿ =1 ; ಚಂದ್ರ =2; ಗುರು =3 ; ರಾಹು =4 ; ಬುಧ=5 ; ಶುಕ್ರ =6; ಕೇತು=7 ; ಶನಿ =8 ; ಕುಜ= 9
ಸಂಖ್ಯೆ 1; ರವಿಯ ಸಂಖ್ಯೆ ಒಂದು ಆಗಿದ್ದು ದಿನಾಂಕ 1,10,19, 28 ರಂದು ಜನಿಸಿದವರು ಈ ಮೂಲಾಂಕ ದಲ್ಲಿ ಬರುತ್ತಾರೆ ಈ ವರ್ಷದ ಸಂಖ್ಯಾಧಿಪತಿ ಕುಜ ಆಗಿದ್ದು ರವಿಗೆ ಕುಜ ಮಿತ್ರನಾಗಿರುತ್ತಾನೆ. ವಿವಾಹ ಭಾಗ್ಯ ,ಉದ್ಯೋಗ ಪ್ರಗತಿ ,ನೀವು ಮಾಡುವ ಯಾವುದೇ ವ್ಯವಹಾರದಲ್ಲಿ ಯಶಸ್ಸು ,ನೆಮ್ಮದಿ, ಬರಲಿದ್ದು,ರಾಜಕಾರಣಿಗಳಿಗೆ ,ಉತ್ತಮ ಕಾಲವಾಗಿರುತ್ತದೆ. ರವಿ ಮತ್ತು ಕುಜನ ಆರಾಧನೆಯಿಂದ ಇನ್ನೂ ಉತ್ತಮ ಶುಭ ಫಲವನ್ನು ಹೊಂದಬಹುದಾಗಿರುತ್ತದೆ.
ಸಂಖ್ಯೆ 2: ದಿನಾಂಕ 2, 11, 20, 29 ರಂದು ಜನಿಸಿದವರ ಸಂಖ್ಯೆ 2.ಚಂದ್ರನು ಈ ಸಂಖ್ಯೆಯ ಅಧಿಪತಿ ಆಗಿರುತ್ತಾನೆ. ಚಂದ್ರ ಮತ್ತು ಕುಜ ಸಮತ್ವವನ್ನು ಹೊಂದಿರುವವರಾಗಿದ್ದಾರೆ. ನಿಮ್ಮ ಜೀವನ 6 ಕ್ಕೆ ಏರುವುದಿಲ್ಲ, 3 ಕ್ಕೆ ಇಳಿಯುವುದಿಲ್ಲ.ಸ್ಥಿರತೆ ಇರುತ್ತದೆ ವ್ಯಾಪಾರ,ಉದ್ಯೋಗದಲ್ಲಿ ನಿಧಾನಗತಿಯು ಇರುತ್ತದೆ ಕೆಲವರಿಗೆ ಕಂಕಣ ಭಾಗ್ಯ ಕೆಲವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ.ಭೂಮಿ-ವಾಹನದಲ್ಲಿ ಹಣ ಹೂಡಿಕೆ ಮಾಡುವುದು ಉತ್ತಮವಾಗಿರುತ್ತದೆ .ಕುಜ ಮತ್ತು ಚಂದ್ರರ ಆರಾಧನೆಯಿಂದ ಇನ್ನೂ ಉತ್ತಮ ಫಲವನ್ನು ಹೊಂಡಬಹುದಾಗಿರುತ್ತದೆ.
ಸಂಖ್ಯೆ :3 : ದಿನಾಂಕ 3, 12, 21, 30 ರಂದು ಜನಿಸಿದವರ ಸಂಖ್ಯೆ ಇದಾಗಿದೆ. ಇದರ ಅಧಿಪತಿ ಗುರು ಆಗಿರುತ್ತಾನೆ. ಗುರು ಮತ್ತು ಕುಜರು ಮಿತ್ರರಾಗಿರುತ್ತಾರೆ. ಹೀಗಾಗಿ ನೀವು ಅತ್ಯಂತ ಶುಭ ಫಲವನ್ನು ಪಡೆಯುತ್ತೀರಿ.ಉದ್ಯೋಗದಲ್ಲಿ ಬಡ್ತಿ, ಮೇಲಧಿಕಾರಿಗಳಿಂದ ಪ್ರಶಂಸೆ,ಪುಣ್ಯ ಕ್ಷೇತ್ರ ದರ್ಶನ ಮಾಡುವಿರಿ ವಾಹನ-ಭೂಮಿ-ಭೂಮಿ ವ್ಯಾಪಾರಿಗಳಿಗೆ ಉತ್ತಮ ಕಾಲವಾಗಿರುತ್ತದೆ. ಗುರು ಕುಜರ ಉಪಾಸನೆಯಿಂದ ಇನ್ನೂ ಉತ್ತಮ ಫಲವನ್ನು ಪಡೆಯುವಿರಿ.
ಸಂಖ್ಯೆ 4 : ದಿನಾಂಕ 4, 13, 22, 31 ರಂದು ಜನಿಸಿದವರ ಸಂಖ್ಯೆ 4 ಆಗಿರುತ್ತದೆ .ಈ ಸಂಖ್ಯೆಯ ಅಧಿಪತಿ ರಾಹು ಆಗಿರುತ್ತಾನೆ. ಹೊಸ ವರ್ಷದ ಅಧಿಪತಿ ಕುಜ ಮತ್ತು ರಾಹು ಶತ್ರುಗಳಾಗಿರುತ್ತಾರೆ. ಆಗ ಮಾನಸಿಕ ಚಂಚಲತೆ ಅಧಿಕವಾಗಿರುತ್ತದೆ.ಮಾತಿಗೆ ಮಿತಿ ಇಲ್ಲದ ಕಾರಣ ವೈರತ್ವ ಅಧಿಕವಾಗಿರುತ್ತದೆ. ಮಾನಸಿಕ ಚಿಂತೆ ವೈರಾಗ್ಯ ಮನೋಭಾವ ಅಧಿಕವಾಗಿರುತ್ತದೆ. ತಾವು ಮಾಡುವ ಯಾವುದೇ ವ್ಯವಹಾರ,ಉದ್ಯೋಗ ,ವಾಹನ ಸಂಚಾರದಲ್ಲಿ ಎಚ್ಚರವಾಗಿರಬೇಕು.
ಸಂಖ್ಯೆ 5 : ದಿನಾಂಕ 5, 14, 23 ರಂದು ಜನಿಸಿದವರ ಸಂಖ್ಯೆ ಇದಾಗಿರುತ್ತದೆ.ಇದರ ಅಧಿಪತಿ ಬುಧನಾಗಿರುತ್ತಾನೆ. ಕುಜನಿಗೆ ಬುಧ ಶತ್ರುವಾಗಿದ್ದಾನೆ..ಈ ಸಮಯದಲ್ಲಿ ನೀವು ಮಾಡುವ ಯಾವುದೇ ಉದ್ಯೋಗ ವ್ಯವಹಾರದಲ್ಲಿ ಏರಿಳಿತ ,ಕಷ್ಟ,ಅಸಂತುಷ್ಟ,ಭಾವನೆ, ಮೇಲಿಂದ ಮೇಲೆ ತೊಂದರೆಗಳು ಬರಲಿವೆ .ವೈರಾಗ್ಯ ಭಾವನೆ ಹೆಚ್ಕಾಗಲಿದೆ. ಈ ಗ್ರಹರ ಆರಾಧನೆಯನ್ನು ಮಾಡುತ್ತಾ ಬನ್ನಿರಿ.
ಸಂಖ್ಯೆ 6: ದಿನಾಂಕ 6, 15, 24 ರಂದು ಜನಿಸಿದವರ ಸಂಖ್ಯೆ ಇದಾಗಿದೆ.ಇದರ ಅಧಿಪತಿ ಶುಕ್ರನಾಗಿರುತ್ತಾನೆ. ಶುಕ್ರ ಮತ್ತು ಕುಜ ಸಮತ್ವವನ್ನು ಹೊಂದಿರುವವರು ನೀವು ಮಾಡುವ ವ್ಯಾಪಾರ,ವ್ಯವಹಾರದಲ್ಲಿ ನಿಧಾನ ಪ್ರಗತಿ ಇರುತ್ತದೆ . ಕಂಕಣ ಭಾಗ್ಯವನ್ನುಕರುಣಿಸುವ ಗ್ರಹರು ಇವರಾಗಿದ್ದಾರೆ. ಕುಜ ಬಹು ಬೇಗನೇ ಸಿಟ್ಟನ್ನು ತರುವವನು. ಮಾತು ಹಿಡಿತದಲ್ಲಿ ಇರಬೇಕು.
ಸಂಖ್ಯೆ 7 : ದಿನಾಂಕ 7, 16, 25 ರಂದು ಜನಿಸಿದವರ ಸಂಖ್ಯೆ 7 ಆಗಿರುತ್ತದೆ ಇದರ ಅಧಿಪತಿ ಕೇತು. ಕೇತು ಮತ್ತು ಕುಜ ಮಿತ್ರರಾಗಿರುತ್ತಾರೆ.ಈ ಸಮಯದಲ್ಲಿ ನಿಮ್ಮ ಜೀವನ ಸ್ತಿರವಾಗಿರುತ್ತದೆ. ಅಧಿಕ ಶ್ರಮವಿಲ್ಲದೆ ನಿಮ್ಮ ಯೋಜನೆಗಳೆಲ್ಲವೂ ನೆರವೇರಲಿವೆ.ಹೊಸ ತಂತ್ರ ಜ್ನಾನದಿಂದ ಆದಾಯದಲ್ಲಿ ಏರಿಕೆ ಕಂಡು ಬರಲಿದೆ. ಸ್ನೇಹಿತರಿಂದ ಸಹಕಾರ, ಹಿರಿಯ ಅಧಿಕಾರಿಗಳಿಂದ ಪ್ರಶಂಸೆ, ಹೊಸ ವಾಹನ ಖರೀಧಿ ಧಾರ್ಮಿಕ ,ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಒದಗಿ ಬರಲಿದೆ. ಕೇತು ಮತ್ತು ಕುಜ ಗ್ರಹರ ಆರಾಧನೆ ಮಾಡುತ್ತಾ ಬನ್ನಿರಿ.
ಸಂಖ್ಯೆ 8 : ದಿನಾಂಕ 8, 17, 26 ರಂದು ಜನಿಸಿದವರು ಈ ಸಂಖ್ಯೆಗೆ ಒಳ ಪಡುತ್ತಾರೆ. ನಿಮ್ಮ ಸಂಖ್ಯಾಧಿಪತಿ ಶನಿ. ಶನಿ ಮತ್ತು ಕುಜ ಪರಸ್ಪರ ವೈರಿಗಳು. ಕಲಹ ,ಕೋರ್ಟ್ ಕಚೇರಿ ಅಲೆಯುವಿಕೆ,ಆರೋಗ್ಯದಲ್ಲಿ ಸಮಸ್ಯೆ, ಗಂಟು ನೋವು ,ವಾಹನದಲ್ಲಿ ಸಮಸ್ಯೆಗಳು,ಉದ್ವೇಗ ಸಿಟ್ಟು ಬರುತ್ತಿರುತ್ತದೆ. ಆತ್ಮೀಯರು ಕಾರಣವಿಲ್ಲದೆ ಜಗಳ ಮಾಡುತ್ತಿರುತ್ತಾರೆ. ಸಂಸಾರದಲ್ಲಿ ಸತಿಪತಿಯರ ಮಧ್ಯೆ ವಿರಸ ಬರುವ ಸಾಧ್ಯತೆ ಇರುವುದರಿಂದ ಶನಿ ಮತ್ತು ಕುಜರ ಆರಾಧನೆ ಮಾಡುತ್ತಾ ಬರಬೇಕು.
ಸಂಖ್ಯೆ 9 : ದಿನಾಂಕ 9, 18, 27 ರಂದು ಜನಿಸಿದವರು ಈ ಸಂಖ್ಯೆಗೆ ಒಳಪಡುತ್ತಾರೆ. ನಿಮ್ಮ ಸಂಖ್ಯಾಧಿಪತಿ ಕುಜ. ಈ ವರ್ಷದ ಅಧಿಪತಿ ಕುಜನಾಗಿದ್ದು ಇದು ಅದೃಷ್ಟವನ್ನು ಸೂಚಿಸುತ್ತಿದೆ. ಭೂಮಿ ಖರೀಧಿ ಮಾಡುವಿರಿ. ವೈದ್ಯರಿಗೆ ಅನುಕೂಲವಾಗಲಿದೆ,ಪೋಲೀಸು ವೃತ್ತಿಯವರಿಗೆ ,ಸೈನಿಕರಿಗೆ ಉತ್ತಮ ಸಮಯವಾಗಿದೆ. ಧೈರ್ಯ ಅಹಂಕಾರ ನಿಮ್ಮಲ್ಲಿರುತ್ತದೆ. ಕುಜನ ಆರಾಧನೆ ಮಾಡುತ್ತಾ ಬರಬೇಕು.
ನಮ: ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯ ಚ l
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮ: ll ಈ ಶ್ಲೋಕವನ್ನು 108 ಬಾರಿ ಹೇಳುತ್ತಾ ಬರಬೇಕು.
ನವರತ್ನ ಉಂಗುರವನ್ನುಧರಿಸುವುದು ಉತ್ತಮ. ರವಿ =ಮಾಣಿಕ್ಯ ; ಚಂದ್ರ=ಮುತ್ತು ;ಮಂಗಳ =ಹವಳ ;ಬುಧ =ಪಚ್ಚೆ ; ಗುರು=ಪುಷ್ಯರಾಗ ; ಶುಕ್ರ= ವಜ್ರ ; ಶನಿ=ಇಂದ್ರ ನೀಲ ; ರಾಹು=ಗೋ ಮೇಧ ; ಕೇತು =ವೈಢೂರ್ಯಇದು ಗ್ರಹರಿಗೆ ಸಂಬಂಧಿಸಿದ ರತ್ನಗಳಾಗಿವೆ.
ಧಾನ್ಯಗಳಿಗೆ ಸಂಬಂಧಿಸಿದಂತೆ ರವಿ=ಗೋಧಿ ; ಚಂದ್ರ=ಅಕ್ಕಿ ; ಕುಜ=ತೊಗರಿ ; ಬುಧ =ಹೆಸರು ; ಗುರು =ಕಡಲೆ ;ಶುಕ್ರ =ಅವರೆ; ಶನಿ =ಎಳ್ಳು; ರಾಹು=ಉದ್ದು ;ಕೇತು =ಹುರುಳಿ ;
ಪೂಜೆ ಮಾಡ ಬೇಕಾದ ದೇವರಿಗೆ ಸಂಬಧಿಸಿದಂತೆ ..ರವಿ =ಈಶ್ವರ ಚಂದ್ರ =ದುರ್ಗೆ ;ಕುಜ= ಸ್ಕಂದ [ನಾಗ] ಬುಧ =ವಿಷ್ಣು ;ಗುರು=ವಿಷ್ಣು,ರುದ್ರ ; ಶುಕ್ರ=ದುರ್ಗೆ ; ಶನಿ =ತ್ರಿಮೂರ್ತಿ [ಬ್ರಹ್ಮ,ವಿಷ್ಣು,ಮಹೇಶ್ವರ ] ರಾಹು =ಸ್ಕಂದ ;ಕೇತು= ಗಣಪತಿ ;
ಹಣ ಐಶ್ವರ್ಯಾ ಪ್ರಾಪ್ತಿಗೆ :-ಪ್ರತಿನಿತ್ಯ ಶ್ರೀ ಸೂಕ್ತ ಪಾರಾಯಣ ಮಾಡಬೇಕು.
ಉತ್ತಮ ಆರೋಗ್ಯಕ್ಕಾಗಿ :- ಪ್ರತಿನಿತ್ಯ ಮಹಾ ಮೃತ್ಯುಂಜಯ ಮಂತ್ರವನ್ನು ಪಾರಾಯಣ ಮಾಡಬೇಕು .
ವಿದ್ಯೆಯಲ್ಲಿ ಯಶಸ್ಸು ಪಡೆಯಲು :-ಸರಸ್ವತಿ ದೇವಿಯ ಆರಾಧನೆ ಮಾಡಬೇಕು. ಗಣಪತಿ ದೇವರ ಪ್ರಾರ್ಥನೆ ಮಾಡ ಬೇಕು.


























