[t4b-ticker]

ಶ್ರೀ ಕ್ಷೇತ್ರ ಧರ್ಮಸ್ಥಳದ ಅಧೀನಕ್ಕೊಳ ಪಟ್ಟ ಹಿರಿಯ ಆನೆ ಲತಾ ಸಾವು

Picture of RB NEWS

RB NEWS

Bureau Report

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಅಧೀನಕ್ಕೊಳ ಪಟ್ಟ ಹಿರಿಯ ಆನೆ ಲತಾ ಶುಕ್ರವಾರ ಮೃತಪಟ್ಟಿದೆ.

60 ವರ್ಷ ಪ್ರಾಯದ ಲತಾ ನಾಮಾಂಕಿತದ ಆನೆಯು ಕಳೆದ 50 ವರ್ಷಗಳಿಂದ ದೇವರ ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಿತ್ತು. ಧರ್ಮಸ್ಥಳದ ಜಾತ್ರಾ ಮಹೋತ್ಸವ, ಲಕ್ಷದೀಪ, ದೇವರ ಉತ್ಸವಗಳಲ್ಲಿ ಗಾಭೀರ್ಯದಿಂದ ಹೆಜ್ಜೆಯ ಮೂಲಕ ಭಕ್ತರ ಗಮನ ಸೆಳೆದಿತ್ತು.‌

ಊರ- ಪರವೂರ ಭಕ್ತಾದಿಗಳು ಮಹಾಶಿವರಾತ್ರಿ ಹಬ್ಬದ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಕ್ಷೇತ್ರಕ್ಕೆ ಅಗಮಿಸಿ ದೇವರ ದರುಶನ ಪಡೆಯುತ್ತಿದ್ದಾರೆ.

ಮಹಾಶಿವರಾತ್ರಿಯ ಪವಿತ್ರ ದಿನದಂದು ಲತಾ ಶಿವೈಕ್ಯವಾಗಿರುವ ಮಾಹಿತಿ ಹೊರಬೀಳುತ್ತಿದ್ದಂತೆ ಊರಿಗೆ ಊರೇ ಮೋಡ ಕವಿದ ವಾತಾವರಣ ಎದುರುಗೊಂಡಂತಾಗಿದೆ.

This image has an empty alt attribute; its file name is WhatsApp-Image-2024-03-08-at-8.06.30-PM.jpeg

ಧರ್ಮಸ್ಥಳದಲ್ಲಿರುವ ಮೂರು ಆನೆಗಳ ಪೈಕಿ ಲತಾ ಆನೆ ಹಿರಿಯವಳಾಗಿದ್ದಳು. ಈಕೆಯೇ ಲಕ್ಷ್ಮೀ ಹಾಗೂ ಶಿವಾನಿ ಆನೆಗಳಿಗೆ ಮಾರ್ಗದರ್ಶಕಿಯಾಗಿತ್ತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top