ಇನ್ಸ್ಟಾಗ್ರಾಮ್ ಸ್ನೇಹಿತನ ಬಲೆಗೆ ಬಿದ್ದ ರೀಲ್ ರಾಣಿ ತನ್ನ ಪತಿಗೆ ಸ್ಲೋ ಪಾಯಿಸನ್ ನೀಡಿ ಆತನ ಅನಾರೋಗ್ಯಕ್ಕೆ ಕಾರಣಳಾಗಿ ಕೊನೆಗೆ ಆತ ನಡೆಯಲಾರದ ಸ್ಥಿತಿಗೆ ತಂದೊಡ್ಡಿ ಮನೆಯಲ್ಲಿ ಮಲಗಿದ್ದ ಪತಿಯನ್ನು ಪ್ರಿಯತಮನೊಂದಿಗೆ ಸೇರಿ ಉಸಿರುಗಟ್ಟಿಸಿ ಕೊಲೆಗೈದ ಅಮಾನುಷ ಕೃತ್ಯ ಕಾರ್ಕಳ ತಾಲೂಕಿನ ಅಜೆಕಾರು ದೆಪ್ಪುತ್ತೆ ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರೀಲ್ ರಾಣೆ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಅವರನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಪೂಜಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮನೆಗೆ ಕರೆತಂದ ರಾತ್ರಿಯೇ ಮೃತಪಟ್ಟ ಪ್ರಕರಣದ ಕುರಿತು ಸಂಬಂಧಿಕರಲ್ಲಿ ಸಾವಿನ ಕುರಿತು ಅನುಮಾನ ವ್ಯಕ್ತವಾಗಿತ್ತು.ಈ ಪ್ರಕರಣದ ತನಿಖೆ ನಡೆಸುವಂತೆ ಯುವಕನ ತಂದೆಯೇ ಅಜೆಕಾರು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಬಾಲಕೃಷ್ಣ ಪೂಜಾರಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸ್ಪೋಟಕ ತಿರುವು ಲಭಿಸಿದ್ದು ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಹತ್ಯೆ ನಡೆಸಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಕೊಲೆಯಾದ ಬಾಲಕೃಷ್ಣ ಪೂಜಾರಿ ಪತ್ನಿ ಪ್ರತಿಮಾ(36) ಹಾಗೂ ಆಕೆಯ ಪ್ರಿಯಕರ ಕಾರ್ಕಳ ಬಾಲಾಜಿ ಇನ್ ಹೊಟೇಲ್ ಉದ್ಯಮಿಯ ಪುತ್ರ ದಿಲೀಪ್ ಹೆಗ್ಡೆ(28) ಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕೃಷ್ಣ ಪೂಜಾರಿ ಸಾವಿನ ಕುರಿತು ಹುಟ್ಟಿಕೊಂಡಿದ್ದ ಅನುಮಾನದ ಕುರಿತು ಕರಾವಳಿ ಅಲೆ ವರದಿ ಪ್ರಕಟಿಸಿದ್ದು, ಇದೀಗ ಬಾಲಕೃಷ್ಣ ಕೊಲೆಯನ್ನು ಆತನ ಪತ್ನಿ ತನ್ನ ಅಣ್ಣನಲ್ಲಿ ಒಪ್ಪಿಕೊಂಡಿದ್ದು ಈ ಮೂಲಕ ಪ್ರಕರಣಕ್ಕೆ ಪ್ರಬಲ ಸಾಕ್ಷ್ಯ ಲಭಿಸಿದಂತಾಗಿದೆ.
ಮೃತ ಬಾಲಕೃಷ್ಣ ಪೂಜಾರಿ ಹಾಗೂ ಅವರ ಪತ್ನಿ ಪ್ರತಿಮಾ ತಮ್ಮ ಇಬ್ಬರು ಮಕ್ಕಳ ಜತೆ ಅನ್ಯೋನವಾಗಿದ್ದರು. ನಿಟ್ಟೆ ವಿದ್ಯಾಸಂಸ್ಥೆಯ ಕ್ಯಾಂಟೀನ್ ನಡೆಸುತ್ತಿ ಬಾಲಕೃಷ್ಣ ಪತ್ನಿ ಮಕ್ಳಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಕಳೆದ ನವೆಂಬರ್ ನಲ್ಲಿ ಹೊಸ ಮನೆಯನ್ನೂ ಕಟ್ಟಿಸಿದ್ದರು. ಬಳಿಕ ಪತ್ನಿ ಪ್ರತಿಮಾಳಿಗೆ ಅಜೆಕಾರಿನಲ್ಲಿ ಬ್ಯೂಟಿ ಪಾರ್ಲರ್ ಹಾಕಿಸಿಕೊಟ್ಟಿದ್ದರು. ತಾನು ಕ್ಯಾಂಟೀನಲ್ಲಿ ದುಡಿಯುತ್ತಿದ್ದರೂ ಪತ್ನಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಇತ್ತ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಆರೋಪಿ ಪ್ರತಿಮಾ ಗಂಡ ಮಕ್ಕಳ ಜತೆ ಸಂಸಾರ ನಡೆಸುವುದನ್ನು ಬಿಟ್ಟು ಫೇಸ್ಬುಕ್ ಹಾಗೂ ಇನ್ಟ್ಟಾಗ್ರಾಮ್ ನಲ್ಲಿ ‘ಪ್ರತಿ ಮೇಕ್’ಓವರ್’ ಎಂಬ ಪೇಜ್ ತೆರೆದು ತನ್ನ ಡಿಫರೆಂಟ್ ರೀಲ್ಸ್’ಗಳನ್ನು ಅಪಲೋಡ್ ಮಾಡಿಕೊಂಡು ಶೋಕಿ ಜೀವನ ನಡೆಸುತ್ತಿದ್ದಳು. ಈ ನಡುವೆ ಪ್ರತಿಮಾಳಿಗೆ ಇನ್ಟ್ಟಾಗ್ರಾಮ್ ಮೂಲಕ ಕಾರ್ಕಳದ ಹೊಟೇಲ್ ಹಾಗೂ ಲಾಡ್ಜಿಂಗ್ ಮಾಲಕನ ಪುತ್ರ ದಿಲೀಪ್ ಹೆಗ್ಡೆ ಎಂಬಾತ ಸ್ನೇಹವಾಗಿದೆ. ಸ್ನೇಹ ಸಲುಗೆಯ ಮಟ್ಟಕ್ಕೆ ಬೆಳೆದು ಇಬ್ಬರ ನಡುವೆ ಅನೈತಿಕ ಸಂಬಂಧಕ್ಕೂ ಕಾರಣವಾಯಿತು. ಪತ್ನಿಯ ಕಳ್ಳಾಟದ ವಿಷಯ ತಿಳಿಯುತ್ತಿದ್ದಂತೆಯೇ ಪತಿ ಬಾಲಕೃಷ್ಣ ಈ ವಿಷಯವನ್ನು ಪತ್ನಿಯ ಅಣ್ಣನ ಗಮನಕ್ಕೆ ತಂದಿದ್ದರು. ಬಳಿಕ ಇವರಿಬ್ಬರ ಲವ್ ಕಹಾನಿ ಅಜೆಕಾರು ಪೊಲೀಸ್ ಠಾಣೆಗೂ ಹೋಗಿತ್ತು. ಬಳಿಕ ಇಬ್ಬರನ್ನು ಕರೆಸಿ ಮುಚ್ಚಳಿಕೆ ಬರೆಯಿಸಿ ಪೊಲೀಸರು ಎನ್ಸಿಆರ್ ದಾಖಲಿಸಿದ್ದರು ಎಂದು ಪ್ರತಿಮಾ ಅಣ್ಣ ಸಂದೀಪ್ ಅವರು ನಡೆದಿದ್ದ ಘಟನೆಯನ್ನು ವಿವರಿಸಿದ್ದಾರೆ.
ಪ್ರಕರಣದ ಆರೋಪಿ ದಿಲೀಪ್ ಹೆಗ್ಡೆ
ಈ ಪ್ರಕರಣದ ಬಳಿಕ ಸೈಲೆಂಟ್ ಆಗಿದ್ದ ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಗಂಡನ ಕಥೆ ಮುಗಿಸಲು ಸ್ಲೋ ಪಾಯಿಸನ್ ಪ್ಲಾನ್ ಸಿದ್ದಪಡಿಸಿದ್ದರು. ಪ್ರಿಯಕರ ದಿಲೀಪ್ ಹೆಗ್ಡೆ ತಂದುಕೊಟ್ಟಿದ್ದ ಸ್ಲೋಪಾಯಿಸನ್ ಅನ್ನು ಪ್ರತಿಮಾ ತನ್ನ ಗಂಡನಿಗೆ ಊಟದಲ್ಲಿ ಬೆರೆಸಿಕೊಟ್ಟಿದ್ದಾಳೆ ಎಂಬುವುದಾಗಿ ಆಕೆಯ ಅಣ್ಣ ಸಂದೀಪ್ ಜತೆ ಹೇಳಿ ತನ್ನ ತಪ್ಪಾಗಿದೆ ಕ್ಷಮಿಸು ಎಂದು ಗೋಗರೆದಿದ್ದಾಳೆ. ಸ್ಲೋ ಪಾಯಿಸನ್ ಪರಿಣಾಮವಾಗಿ ಬಾಲಕೃಷ್ಣ ಪೂಜಾರಿ ಆರೋಗ್ಯ ದಿನೇದಿನೇ ಹದಗೆಟ್ಟ ಹಿನ್ನಲೆಯಲ್ಲಿ ಅವನ ಮನೆಯವರು ಹಾಗೂ ಪತ್ನಿಯ ಅಣ್ಣ ಲಕ್ಷಾಂತರ ರೂ ಖರ್ಚು ಮಾಡಿ ಕೊನೆಗೂ ಗುಣಪಡಿಸಿ ಮನೆಗೆ ಕರೆತಂದಿದ್ದರು. ಇನ್ನು ಆತ ಗುಣಮುಖವಾದರೆ ನಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಅರಿತ ಪ್ರತಿಮಾ ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ತನ್ನ ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಕರೆಸಿ ಇಬ್ಬರು ಸೇರಿ ಅಸಹಾಯಕ ಸ್ಥಿತಿಯಲಿದ್ದ ಗಂಡನನನ್ನು ದಿಂಬಿನಲ್ಲಿ ಉಸಿರುಗಟ್ಟಿಸಿ ಕೊಲೆಗೈದು ಬಳಿಕ ಗಂಡ ಸತ್ತ ಎಂದು ಪ್ರತಿಮಾ ಬೊಬ್ಬೆ ಹಾಕಿ ನಾಟಕವಾಡಿರುವುದು ಅಜೆಕಾರು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ವಿಪರೀತ ರೀಲ್ಸ್ ಹುಚ್ಚಾಟ ಹಾಗೂ ಕ್ಷಣಿಕ ಸುಖಕ್ಕಾಗಿ ಪತಿಯನ್ನೇ ಬಲಿಪಡೆದ ಪ್ರತಿಮಾಳಿಂದ ಆಕೆಯ ಮಕ್ಕಳೂ ಕೂಡ ದೂರಾಗಿದ್ದು, ಬಂಗಾರದಂತಹ ಸಂಸಾರವನ್ನು ಅವಳ ಕೈಯಿಂದ ಹಾಳು ಮಾಡಿಕೊಂಡಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.
ಧಣಿಕರ ಬಲೆ ಬಿದ್ದ ಚೆಂದುಳ್ಳಿಯರು ! ಧನದಾಹಕ್ಕೆ ಬಿದ್ದ ಚೆಂದುಳ್ಳಿಯರು ಧಣಿಕರನ್ನು ತಮ್ಮ ಬಲೆಗೆ ಹಾಕಿಕೊಂಡಿರುವ ಘಟನಾವಳಿ ಕಾರ್ಕಳದ ಮಣ್ಣಿಗೆ ಹೊಸತು ಅಲ್ಲ. ನಾನಾ ರೀತಿಯಲ್ಲಿ ಕೈ ಚಳಕ, ಅತೀ ರಂಜಿತ ಮಾತುಗಾರಿಕೆ ಮಾಯಜಾಲ ಮೂಲಕ ಧಣಿಕನ್ನು ತಮ್ಮ ಬಲೆಗೆ ಹಾಕಿಕೊಂಡು ಭಾರೀ ಮೊತ್ತವನ್ನು ಬೇಡಿಕೆ ಮುಂದಿಡುತ್ರಿರುವುದು ಗುಟ್ಟಾಗಿ ಉಳಿದಿಲ್ಲ. ತಮ್ಮ ಸೌಂದರ್ಯವನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಚೆಂದುಳ್ಳಿಯರು ದಣಿಕರಿಗೆ ದೇಹಸುಖವೂ ನೀಡುವಲ್ಲಿ ಹಿಂದೇಟು ಹಾಕುತ್ತಿಲ್ಲ. ಧಣಿಕರು ತಮ್ಮ ಜೀವನ ಪೂರ್ತಿ ದುಡಿದು ಸಂಪಾದಿಸುವ ಸಂಪಾದನೆಯನ್ನು ಈ ಚೆಂದುಳ್ಳಿಯರು ಕೆಲ ವರ್ಷದೊಳಗಾಗಿ ಮಾಡಿಕೊಳ್ಳುತ್ತಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕೃಷ್ಣ ಅವರನ್ನು ಕಾರ್ಕಳ ಮಣಿಪಾಲ ಮಂಗಳೂರು ಬೆಂಗಳೂರು ಸೇರಿದಂತೆ ಒಟ್ಟು 7 ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು . ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ 1 ವಾರ ಕಾಲ ಚಿಕಿತ್ಸೆ ನೀಡಿದ ಬಳಿಕ ವೈದ್ಯಾಧಿಕಾರಿಯವರು ಬಾಲಕೃಷ್ಣ ಅವರನ್ನು ಉದ್ಯಾವರ ಅಥವಾ ಅಂಕೋಲಾ ಆಯರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ತಿಳಿಸಿದ್ದರು. ಅದರಂತೆ ಅ. 19ರಂದು ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿ ಬಾಲಕೃಷ್ಣ ಅವರು ರಾತ್ರಿ 8 ಗಂಟೆಗೆ ಅಜೆಕಾರು ದೆಪ್ಪುತ್ತೆಯಲ್ಲಿರುವ ತಮ್ಮ ಮನೆಗೆ ಬಂದಿದ್ದರು. ಆದರೆ, ಅ. 20ರಂದು ಮುಂಜಾನೆ ಬಾಲಕೃಷ್ಣ ಮೃತಪಟ್ಟಿದ್ದರು. ಸಾವಿನ ಕುರಿತು ಅನುಮಾನಗೊಂಡ ಹಿನ್ನೆಲೆಯಲ್ಲಿ ಬಾಲಕೃಷ್ಣ ಅವರ ತಂದೆ ,ಹಾಗು ಕೊಲೆ ಅರೋಪಿ ಪ್ರತಿಮಾಳ ಅಣ್ಣ ಸಂದೀಪ್ ಅಜೆಕಾರು ಪೊಲೀಸರಿಗೆ ದೂರು ನೀಡಿದ್ದರು.
ಅ.20 ರ ರಾತ್ರಿ ಆರೋಗ್ಯ ವಾಗಿದ್ದ ಬಾಲಕೃಷ್ಣ ಪೂಜಾರಿ ಎಲ್ಲರೊಂದಿಗೆ ಮಾತನಾಡಿ ಅರೋಗ್ಯದಿಂದ್ದ ಆಹಾರ ಸೇವಿಸಿ,ಎಲ್ಲರೊಂದಿಗೆ ಬೆರೆತು ಮಾತನಾಡುತಿದ್ದರು .ಪತ್ನಿ ಪ್ರತಿಮಾ ಹಾಗು ಪ್ರಿಯಕರ ದಿಲೀಪ್ ಹೆಗ್ಡೆ ದೆಪ್ಪುತ್ತೆಯ ತನ್ನ ಮನೆಯಲ್ಲಿ ಯಾರು ಇಲ್ಲದ ಅ. 20 ರ 2 ಘಂಟೆ ವೇಳೆಯಲ್ಲಿ ತಲೆದಿಂಬಿನಿಂದ ಒತ್ತಿಹಿಡಿದು ಉಸಿರುಗಟ್ಟಿಸಿ ಕೊಲೆಗೈಯಲಾಗಿತ್ತು.
ಸಾಮಾಜೀಕ ಜಾಲತಾಣದಲ್ಲಿ ರೀಲ್ಸ್ ಮಾಡುತಿದ್ದ ಬಾಲಕೃಷ್ಣ ಪ್ರತಿಮ ದಂಪತಿಗಳು: ಅಜೆಕಾರಿನಲ್ಲಿ ಬ್ಯೂಟಿ ಪಾರ್ಲರ್ ನಡೆಸುತಿದ್ದ ಪ್ರತಿಮಾ ಹಾಗೂ ಬಾಲಕೃಷ್ಣ ದಂಪತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರು. ಆದರೆ ಪ್ರತಿಮಾಳಿಗೆ ಸಾಮಾಜಿಕ ಜಾಲತಾಣದಲ್ಲಿ ದಿಲೀಪ್ ಹೆಗ್ಡೆ ಪರಿಚಯವಾಗಿ ಪ್ರೆಮಾಂಕುರವಾಗಿತ್ತು. ಕಳೆದ ಎರಡು ತಿಂಗಳ ಹಿಂದೆ ಕೊಲೆ ಆರೋಪಿ ಗಳಾದ ಪತ್ನಿ ಪ್ರತಿಮಾ ಹಾಗೂ ದಿಲೀಪ್ ಹೆಗ್ಡೆ ಪ್ರೇಮದ ವಿಷಯದಲ್ಲಿ ಪತಿ ಬಾಲಕೃಷ್ಣ ಪೂಜಾರಿ ಅಜೆಕಾರು ಪೋಲೀಸರಿಗೆ ಮಾಹಿತಿ ನೀಡಿದ್ದು ,ಅದರಂತೆಯೆ ದಿಲೀಪ್ ಹೆಗ್ಡೆ ಹಾಗೂ ಪತ್ನಿ ಪ್ರತಿಮಾ ಅವರನ್ನು ಕರೆಸಿ ವಿಚಾರಣೆ ನಡೆಸಿ ಮುಚ್ಚಳಿಕೆ ಬರೆಸಿದ್ದರು.
ವಿಷ ನೀಡಿ ಕೊಲ್ಲಿಸಿದಳು:
ಪತಿ ಬಾಲಕೃಷ್ಣ ಪೂಜಾರಿಗೆ ಪತ್ನಿ ಪ್ರತಿಮಾ ರೋಸಿಯಂ ಎಂಬ ವಿಷ ಪದಾರ್ಥವನ್ನು ಆಹಾರದಲ್ಲಿ ಬೆರೆಸಿ 20 ದಿನಗಳಿಂದ ನೀಡುತಿದ್ದಳು .ಇದರಿಂದಾಗಿ ಬಾಲಕೃಷ್ಣ ಪೂಜಾರಿ ಕಾಮಾಲೆ ಸೇರಿದಂತೆ ಅನೇಕ ಅನಾರೋಗ್ಯಕ್ಕಿಡಾಗಿ 7 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚೇತರಿಸಿಕೊಂಡಿದ್ದ ಬಾಲಕೃಷ್ಣ ಅ.20 ರ ರಾತ್ರಿ ಪ್ರಿಯಕರ ದಿಲೀಪ್ ಹೆಗ್ಡೆ ಹಾಗೂ ಪತ್ನಿ ಸೇರಿ ಕೊಲೆಗೈಯಲಾಗಿತ್ತು.. ಅ.20 ರಂದು ಬಾಲಕೃಷ್ಣ ಮೃತಪಟ್ಟ ಬಳಿಕ ಐದನೆ ದಿನದ ಉತ್ತರಾಧಿವಿಧಿವಿಧಾನಗಳು ನಡೆಯುತಿದ್ದ ವೇಳೆಯಲ್ಲಿ ಪ್ರತಿಮಾ ತನ್ನ ಅಣ್ಣ ಸಂದೀಪ್ ನನ್ನು ಕರೆಸಿ ನಾನೇ ಕೊಲ್ಲಿಸಿದ್ದು ಎಂದು ಒಪ್ಪಿಕೊಂಡಿದ್ದಾಳೆ. ಇದನ್ನು ಮನಗಂಡ ಸಂದೀಪ್ ಕೊಲೆ ಆರೋಪಿ ಪ್ರತಿಮಾ ನನ್ನು ಪೋಲೀಸ್ ಠಾಣೆಗೆ ಕರೆದೊಯ್ದಿದ್ದಾನೆ.
ಗೆಳೆಯನ ಸಾವಿಗೆ ನ್ಯಾಯ ಒದಗಿಸಿದ ಅಣ್ಣ
ಮೃತ ಬಾಲಕೃಷ್ಣ ಹಾಗೂ ಪತ್ನಿ ಪ್ರತಿಮಾಳ ಅಣ್ಣ ಸಂದೀಪ್ ಮುಂಬಯಿಯಲ್ಲಿ ಉದ್ಯೋಗ ಮಾಡುತಿದ್ದು ಆಪ್ತ ಸ್ನೇಹಿತರಾಗಿದ್ದರು.
ಸಂದೀಪ್ ………………………..
ಕೊಲೆ ಎಂದು ಅನುಮಾನಗೊಂಡ ವೇಳೆಯಲ್ಲಿಯು ಪೋಲೀಸ್ ಠಾಣೆಗೆ ತೆರಳಿ ದೂರು ಕೂಡ ನೀಡಿದ್ದರು. ಆದರೆ ಗುರುವಾರ ಮಧ್ಯಾಹ್ನ ತಂಗಿ ಪ್ರತಿಮಾ ತನ್ನ ಪತಿ ಬಾಲಕೃಷ್ಣ ಪೂಜಾರಿ ಯನ್ನು ಕೊಲೆಮಾಡಿದ್ದು ನಾನೆ ಎಂದು ಅಣ್ಣಾ ಕಾಲು ಹಿಡಿದು ಬೇಡಿಕೊಂಡಿದ್ದಾಳೆ. ಆದರೆ ಆತ ತಡಮಾಡದೆ ಅಕೆಯನ್ನು ನೇರವಾಗಿ ಪೋಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದ. ನನ್ನ ಮಿತ್ರ ಬಾಲಕೃಷ್ಣ ನ ಸಾವಿಗೆ ಕಾರಣನಾದ ನನ್ನ ತಂಗಿ ಪ್ರತಿಮಾ ಪೂಜಾರಿ ಹಾಗೂ ದಿಲೀಪ್ ಹೆಗ್ಡೆ ಗೆ ಸೂಕ್ತ ಶಿಕ್ಷೆಯಾಗಬೇಕು. ವಿಷ ನೀಡಿ ಚಿತ್ರಹಿಂಸೆ ರೀತಿಯಲ್ಲಿ ಕೊಲ್ಲುವ ಮನಸ್ಥಿತಿ ನಿಜಕ್ಕೂ ಮಾರಕ. ಶಿಕ್ಷೆಯಾಗಬೇಕು ಎಂದು ತಿಳಿಸಿದ್ದಾರೆ.