






15 ಗಂಟೆಗಳ ಕಾಲ ಬಾವಿಯ ಸುರಂಗದೊಳಗೆ ಸಿಲುಕಿದ ಯುವಕ !

ಮೂಡುಬಿದಿರೆ: ಪುತ್ತಿಗೆ ಪದವು ಬಂಗ್ಲೆ ಎಂಬಲ್ಲಿ ಸುಮಾರು 30 ಅಡಿ ಅಳದ ತೆರದ ಬಾವಿಯೊಂದಕ್ಕೆ ಯುವಕನೊಬ್ಬ ಆಕಸ್ಮಿಕವಾಗಿ ಬಿದ್ದು ಸುರಂಗದೊಳಗೆ ರಾತ್ರಿಯಿಡಿ ಸಿಲುಕಿಕೊಂಡ ಆತನನ್ನು ಕಾರ್ಕಳ ಅಗ್ನಿ ಶಾಮಕದಳ ಸಿಬ್ಬಂದಿ ಕಾರ್ಯಚರಣೆ ನಡೆಸಿ ಮೇಲಕ್ಕೆ ಎತ್ತಿರುವ ಘಟನೆ ಬೆಳಕಿಗೆ ಬಂದಿದೆ.
ರಾಧಕೃಷ್ಣ (38) ಜೀವಾಪಾಯದಿಂದ ಪಾರಾದ ಯುವಕ. ರಾತ್ರಿ ಸಂದರ್ಭದಲ್ಲಿ ಇದೇ ಪರಿಸರದ ಮೂಲಕ ಹಾದು ಹೋದಾಗ ತೆರೆದ ಬಾವಿ ಇರುವುದು ಗಮನಕ್ಕೆ ಬಾರದೇ ಆಯತಪ್ಪಿ ಬಾವಿಯೊಳಗೆ ಬಿದ್ದಿರುತ್ತಾನೆ. ಬಾವಿಯೊಳಗೆ 5ಅಡಿ ನೀರು ಶೇಖರಣೆಗೊಂಡಿತ್ತು. ಬಾವಿಯ ಒಂದು ಪಾಶ್ವ ೯ದಲ್ಲಿ ಸುರಂಗ ಮಾರ್ಗವು ಇತ್ತು. 20 ಅಡಿ ದೂರದ ವರೆಗೆ ಮುಂದೆ ತೆವಳಿ ಸಾಗಿದ ಯುವಕ ಮತ್ತೊಂದು ನೀರಿನ ಗುಂಡಿಗೆ ಬಿದ್ದಿರುತ್ತಾನೆ. ಸುರಂಗದೊಳಗೆ ಕರಿಕತ್ತಲು ಆವರಿಸಿಕೊಂಡಿತ್ತದೆ. ಆಮ್ಲಜನಕ ಕ್ಷೀಣಿಸಿಕೊಂಡಿರುವುದರಿಂದ ಯುವಕ ಉಸಿರಾಡುವುದಕ್ಕೂ ಕಷ್ಟಕರವಾಗಿತ್ತು.
ಈ ಎಲ್ಲಾ ಬೆಳವಣಿಗೆಯ ನಡುವೆ ಗುರುವಾರ ಮಧ್ಯಾಹ್ನದ ವೇಳೆಗೆ ಇದೇ ಬಾವಿಯೊಳಗಿನಿಂದ ಯುವಕನ ಅರ್ತನಾದ ಕೇಳಿದ ಕಟ್ಟಿಗೆ ಸಂಗ್ರಹಿಸಲೆಂದು ಬಂದಿದ್ದ ಮಹಿಳೆಯರ ಗುಂಪು ಸ್ಥಳೀಯರಿಗೆ ಮಾಹಿತಿ ರವಾಯಿಸಿದರು.







































