ಮಾಧ್ಯಮದಿಂದ ಸಮಾಜಕ್ಕೆ ಒಳ್ಳೆಯದನ್ನು ನೀಡುವ ಕೆಲಸವಾಗಬೇಕು- ತಾರನಾಥ ಗಟ್ಟಿ ಕಾಪಿಕಾಡ್
RB NEWS
Bureau Report
ಮಾಧ್ಯಮದಿಂದ ಸಮಾಜಕ್ಕೆ ಒಳ್ಳೆಯದನ್ನು ನೀಡುವ ಕೆಲಸವಾಗಬೇಕು- ತಾರನಾಥ ಗಟ್ಟಿ ಕಾಪಿಕಾಡ್
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಸ್ಥಳೀಯ ಸಮಾಜ ಮಂದಿರ ಸಭಾದ 77ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಮಂಗಳೂರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಫಿ ಕಾರ್ಡ್ ಅವರು ಮುಖ್ಯ ಅತಿಥಿಯಾಗಿ ಉಪನ್ಯಾಸವನ್ನು ನೀಡಿದರು. ಅವರ ತಮ್ಮ ಮಾತಿನಲ್ಲಿ ಸಮಾಜಕ್ಕೆ, ಮಕ್ಕಳಿಗೆ ಒಳ್ಳೆಯದನ್ನು ನೀಡಬೇಕಾಗಿದೆ. ದಾರಿ ತಪ್ಪಿಸುವ ಕೆಲಸ ಮಾಡಬಾರದು. ಎಲ್ಲ ಧರ್ಮೀಯರು ಇನ್ನೊಂದು ಧರ್ಮೀಯರ ಸಂಭ್ರಮದಲ್ಲಿ ಭಾಗವಹಿಸಿ ಸಂಹಾರ್ದತೆಯನ್ನು ಮೆರೆಯುವುದೇ ತುಳುನಾಡಿನ ವಿಶೇಷತೆ ಹಾಗೂ ಅದೇ ಪ್ರಕೃತಿ ನಿಯಮ ಎಂದು ಹಲವಾರು ಉದಾಹರಣೆಗಳ ಮೂಲಕ ಉದಾಹರಣೆಗಳ ಮೂಲಕ ತಿಳಿಯಪಡಿಸಿದರು. ಬದುಕಿಗೆ ವಿದ್ಯೆ ಹಾಗೂ ಉದ್ಯೋಗವೇ ಮುಖ್ಯ ಹೊರತು ಬೇರೇನೂ ಅಲ್ಲ.
ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್, ವೀರ ಮಾರುತಿ ಸೇವಾ ಟ್ರಸ್ಟ್, ಕೃಷಿಕ ನಾಗರಾಜ ಶೆಟ್ಟಿ ಅಂಬೂರಿ ಬೆಳುವಾಯಿ, ಕಾಷ್ಟ ಶಿಲ್ಪಿ ನಾರಾಯಣ ಆಚಾರ್ಯ, ಬಾಬು ಹಂಡೇಲು , ಇವರುಗಳನ್ನು ಸನ್ಮಾನಿಸಲಾಯಿತು. ರೋಟರಿ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ನಾರಾಯಣ ಪಿಎಂ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಮಾಜ ಮಂದಿರ ಸಭಾದ ಅಧ್ಯಕ್ಷ ಅಭಯ ಚಂದ್ರ ಜೈನ್, ಸಂಚಾಲಕ ಗಣಪಯ್ಯ ಭಟ್, ಹಾಜರಿದ್ದರು. ಗಣೇಶ್ ಕಾಮತ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.