140ನೇ ತಿಂಗಳ ಸಂಕ್ರಮಣ : ಶಬರಿಮಲೆ ಯಾತ್ರೆ!

Picture of RB NEWS

RB NEWS

Bureau Report

* ಆರ್.ಬಿ.ಜಗದೀಶ್

ವರ್ಷಕ್ಕೊಮ್ಮೆ ಶಬರಿಮಲೆ ಯಾತ್ರೆ ಕೈಗೊಳ್ಳುವ ಎನ್ನುವ ನಂಬಿಕೆ ಬಹುತೇಕ ಮಂದಿಯಲ್ಲಿ ಕಾಡುತ್ತಿರುತ್ತದೆ.
-ಆದರೆ ಇಲ್ಲಿಕಳೆದ 140 ತಿಂಗಳ ಸತತವಾಗಿ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದಾರೆ.

ಡಿ.16ರ ಮಧ್ಯಾಹ್ನ 2.20 ವೇಳೆಗೆ ಮಂಗಳೂರು ಸೆಂಟ್ರಲ್ ನಿಂದ ತಿರುವನಂತಪುರಂ ಗೆ ಹೋಗುವ ತಿರುವನಂತಪುರಂ ಎಕ್ಸ್ ಪ್ರೆಸ್ ನಲ್ಲಿ ಶಬರಿಮಲೆ ಯಾತ್ರೆಯನ್ನು ಕೊಕ್ಕರ್ಣೆಯ ಹೊರ್ಲಾಳಿ ನರಸಿಂಹ ಪೂಜಾರಿ ಹಾಗೂ ಹೆಬ್ರಿ ಹುತ್ತುರ್ಕೆಯ ವೆಂಕಟೇಶ್ ಎಸ್. ಕೈಗೊಂಡಿದರು.


ಇವರು ಪ್ರತಿ ತಿಂಗಳ ಸಂಕ್ರಮಣಕ್ಕೆ ಶಬರಿಮಲೆಯಾತ್ರೆ ಕೈಗೊಳ್ಳುತ್ತಾ ಬಂದಿರುವುದು ಗಮನಾರ್ಹವಾಗಿದೆ.

3 ತಿಂಗಳ ಹಿಂದೆ ಟಿಕೇಟ್ ಬುಕ್ಕಿಂಗ್


ಪ್ರತಿ ತಿಂಗಳು ಇವರಿಬ್ಬರು ಶಬರಿಮಲೆ ಯಾತ್ರೆ ಕೈಗೊಂಡು ಬಂದಿದ್ದು, ಇದಕ್ಕಾಗಿ ಪ್ರಯಾಣಿಸುವ ರೈಲಿನ ಟೀಕೆಟ್ ಬುಕ್ಕಿಂಗ್ 3 ತಿಂಗಳ ಹಿಂದೆ ಕಾದಿರಿಸುತ್ತಾರೆ.
ಹೀಗಿದ್ದರೂ ಪ್ರತಿತಿಂಗಳ ಸಂಕ್ರಮಣ ಕಾಲಘಟ್ಟದಲ್ಲಿಯೇ ರೈಲ್ವೇ ಟಿಕೇಟ್ ಬುಕ್ಕಿಂಗ್ ಮಾಡುತ್ತಾ ಬಂದಿದ್ದಾರೆ.


ಕರೋನಾ-19 ಇಡೀ ವಿಶ್ವವನ್ನೇ ಬೆಚ್ಚಿಬೀಳಿಸುವಂತೆ ಮಾಡಿತ್ತು.
ಆ ಸಂದರ್ಭದಲ್ಲಿ ಜನಜೀವನದ ಮೇಲೂ ದುಷ್ಪರಿಣಾಮ ಬೀರಿತ್ತು. ರೈಲ್ವೇ ಸಂಚಾರ ಸ್ಥಗಿತಗೊಂಡಿರುವುದರಿAದ ಇವರು ಕಾದಿರಿಸಿದ ಎರಡು ತಿಂಗಳ ಶಬರಿಮಲೆ ಯಾತ್ರೆ ಮೊಟಕುಗೊಂಡಿತ್ತು. ಆ ವೇಳೆಗೆ ಇವರು ಕಾದಿರಿಸಿದ ಸೀಟಿನ ಮೊತ್ತವನ್ನು ರೈಲ್ವೇ ಇಲಾಖೆ ಹಿಂತಿರುಗಿಸಿದೆ. ಆ ಎರಡು ತಿಂಗಳುಗಳಲ್ಲಿ ಇವರಿಬ್ಬರಿಗೆ ಶಬರಿಮಲೆ ಯಾತ್ರೆ ಕೈಗೊಳ್ಳಲು ಸಾಧ್ಯವಾಗವಾಗಿರಲಿಲ್ಲ.


ಆರು ವರ್ಷದ ಹಿಂದೆ ಕೊಕ್ಕರ್ಣೆಯ  ಹೊರ್ಲಾಳಿ ನರಸಿಂಹ ಪೂಜಾರಿ ಹಾಗೂ ಇತರರು ಮಾಲಾಧಾರಿ ವ್ರತದೊಂದಿಗೆ ಉಡುಪಿ ಜಿಲ್ಲೆಯ ಕೊಕ್ಕರ್ಣೆಯಿಂದ ಶಬರಿಮಲೆ ಪಾದಯಾತ್ರೆ ಕೈಗೊಂಡಿದ್ದರು.
ಪ್ರತಿದಿನ ಸರಾಸರಿ 3೦ ಕಿ.ಮೀ.ಪಾದಯಾತ್ರೆ ಕೈಗೊಳ್ಳುವ ಮೂಲಕ 19 ದಿನಗಳನ್ನು ಕ್ರಮಮಿಸಿ ಶಬರಿಮಲೆ ಸನ್ನಿಧಿಗೆ ತಲುಪಿದ್ದಾರೆ.


 “ಪಡಿ” ಎಂದರೆ ಮೆಟ್ಟಲು ಅದು ಶಬರಿಮಲೆ ದಿವ್ಯ ಸನ್ನಿಧಿಯ ಹದಿನೆಂಟು ಮೆಟ್ಟಲು. ಅಲ್ಲೊಂದು  ಪೂಜೆ ನಡೆಸುವುದಾಗಿ ವೆಂಕಟೇಶ್ ಹರಕೆ ಹೇಳಿಕೊಂಡಿದ್ದರು. ಅದಕ್ಕಾಗಿ ಅವರು ಬರೋಬರಿ 15 ವರ್ಷ ಕಾಯಬೇಕಾಗಿತ್ತು,

 2012ರಲ್ಲಿ “ಪಡಿ” ಪೂಜೆಗಾಗಿ ಅಂದು ಅವರ ರೂ.4೦,೦೦೦. ಮೊತ್ತ ಪಾವತಿಸಿದ್ದರು. ಅವರ ಪಾಲಿಗೆ ದೊಕಿದ ಪುಣ್ಯ ದಿನ 2030 ಫೆಬ್ರವರಿ 13 ಆಗಿತ್ತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top