14 ವರ್ಷಗಳಿಂದ ತಲೆಮರಿಸಿಕೊಂಡಿರುವ LPC ವಾರಂಟ್ ಆಸಾಮಿಯ ಬಂಧನ

Picture of RB NEWS

RB NEWS

Bureau Report

ಉಡುಪಿ: ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2010 ಜನವರಿ 22 ರಂದು ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಸುಮಾರು 14 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಸಿಕೊಂಡಿದ್ದ ವಾರಂಟು ಆಸಾಮಿ ಮೈಸೂರಿನ ನಿವಾಸಿ ಇಕ್ಬಾಲ್ ಅಹಮದ್ ಅನ್ಸಾರಿ ಎಂಬಾತನನ್ನು ಪಡುಬಿದ್ರಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲವು ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ.

2010 ಜನವರಿ 22ರಂದು ಹಗಲಿನ ವೇಳೆಗೆ ಮುತ್ತಪ್ಪ ಬಳೆಗಾರ ಮತ್ತು ಸುದರ್ಶನ ಬಳೆಗಾರ ಎಂಬವರು ಕಾಪು ತಾಲೂಕು ನಂದಿಕೂರು ಗ್ರಾಮದ ರಾಘವೇಂದ್ರ ಭಟ್ ಎಂಬವರ ಮನೆಯ ಹಿಂಬದಿಯ ಬಾಗಿಲನ್ನು ಮುರಿದು ಒಳ ಪ್ರವೇಶಿಸಿ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಮತ್ತು ಎಲೆಕ್ಟ್ರಾನಿಕ್ ಸ್ವತ್ತುಗಳನ್ನು ಕಳವು ಮಾಡಿಕೊಂಡು ಹೋಗಿ ಅದರಲ್ಲಿ ಚಿನ್ನಾಭರಣಗಳನ್ನು ಮೈಸೂರಿನ ಮಹಮ್ಮದ್ ಇಕ್ಬಾಲ್ ಅನ್ಸಾರಿ ಎಂಬಾತನಲ್ಲಿ ಕೊಟ್ಟು ಮಾರಾಟ ಮಾಡಿರುತ್ತಾರೆ.

ಮುತ್ತಪ್ಪ ಬಳೆಗಾರ ಮತ್ತು ಸುದರ್ಶನ ಬಳೆಗಾರ ಮೈಸೂರಿನ ರಿಯಾಜ್ ಅಹಮದ್ ಎಂಬಾತನೊಂದಿಗೆ ಸೇರಿಕೊಂಡು 2010 ನೇ ಇಸವಿಯಲ್ಲಿ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 70 ವರ್ಷ ಪ್ರಾಯದ ಶಿವರಾಯ ಆಚಾರ್ಯ ಎಂಬವರನ್ನು ಕೊಲೆ ಮಾಡಿ ಅವರ ಮೈ ಮೇಲಿನ ಚಿನ್ನಾಭರಣಗಳನ್ನು ಕಳವು ಮಾಡಿದ್ದು ಹಾಗೂ ಶಿರ್ವ ಠಾಣಾ ವ್ಯಾಪ್ತಿಯಲ್ಲಿ 2 ಹಗಲು ಮನೆ ಕಳ್ಳತನ ಮತ್ತು ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ 1 ಹಗಲು ಮನೆ ಕಳ್ಳತನ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಗಲಿನಲ್ಲಿ ಮನೆ ಕಳ್ಳತನ ಮಾಡಿದ್ದರು.

ಸದರಿ ಪ್ರಕರಣಗಳಲ್ಲಿ ಕಳವು ಮಾಡಿದ ಚಿನ್ನಾಭರಣಗಳನ್ನು ಮೈಸೂರಿನ ಇಕ್ಬಾಲ್ ಅಹಮದ್ ಅನ್ಸಾರಿ ಮೈಸೂರಿನಲ್ಲಿ ಚಿನ್ನದ ಅಂಗಡಿಯಲ್ಲಿ ಮಾರಾಟ ಮಾಡಿರುತ್ತಾನೆ.

ಬಳಿಕ ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನಂತರ ಇಕ್ಬಾಲ್ ಅಹಮದ್ ಅನ್ಸಾರಿ ನ್ಯಾಯಾಲಯದಿಂದ ಜಾಮೀನು ಪಡೆದು ಬಳಿಕ ವಿಚಾರಣೆ ಸಮಯ ಸುಮಾರು 14 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದು ನ್ಯಾಯಾಲಯ ಆರೋಪಿಯ ದಸ್ತಗಿರಿಗೆ LPC ವಾರಂಟ್ ಹೊರಡಿಸಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧಿಕ್ಷಕ ಹರಿರಾಮ್ ಶಂಕರ ರವರ ಆದೇಶದಂತೆ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಸದಾನಂದ ಎಸ್ ನಾಯಕ್ ರವರ ಮಾರ್ಗದರ್ಶನದಂತೆ ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ.ಹರ್ಷ ಪ್ರಿಯಂವಧ ಮತ್ತು ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ರವರ ನೇತೃತ್ವದಲ್ಲಿ ಪಡುಬಿದ್ರಿ ಪೊಲೀಸ್ ಠಾಣಾ ಪೋಲಿಸ್ ಉಪನಿರೀಕ್ಷಕರಾದ ಸಕ್ತಿವೇಲು ಅನಿಲ್ ಕುಮಾರ್ ಸಿಬ್ಬಂದಿಗಳಾದ ಎ ಎಸ್ ಐ ರಾಜೇಶ್ ಪಿ, ಕಾನ್ಸ್ಟೇಬಲ್ ಗಳಾದ ಸಂದೇಶ, ಶರಣ್ ಜೆ ಪುತ್ರನ್ ಇವರು LPC ವಾರಂಟ್ ಹಾಸನ್ ಇಕ್ಬಾಲ್ ಅಹಮದ್ ಅನ್ಸಾರಿ ಎಂಬಾತನ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.

2025 ಆಗಸ್ಟ್ 29ರಂದು ಇಕ್ಬಾಲ್ ಅಹಮದ್ ಅನ್ಸಾರಿ ವಿದೇಶದಿಂದ ಬೆಂಗಳೂರಿಗೆ ಬರುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಈತನ ವಿರುದ್ಧ ಶಿರ್ವ ಪೊಲೀಸ್ ಠಾಣೆ ಮತ್ತು ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ಅರೆಸ್ಟ್ ವಾರಂಟ್ ಇರುತ್ತದೆ.

ಸದರಿ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಮುತ್ತಪ್ಪ ಬಳೆಗಾರ ಮತ್ತು ಮೈಸೂರಿನ ರಿಯಾಜ್ ಅಹಮದ್ ಉಡುಪಿ ಜಿಲ್ಲಾ ಕಾರಾಗೃಹ ದಲ್ಲಿ ನಡೆದ ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಪ್ರಸ್ತುತ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top