ಸಿಂಹ,ಕರಡಿಗಳ ಅರ್ಭಟಕ್ಕೆ ಗೇಟ್ ಗಳಿಗೆ ಬೀಗ ಜಡಿದ ಗಡಿನಾಡ ಮಂದಿ!
ಒಂದೇ ದಿನದಲ್ಲಿ 15ಕ್ಕೂ ಮಿಕ್ಕಿ ವೇಷ ತಂಡ : ಸಾಂಪ್ರದಾಯಕವಾಗಿರದ ವೇಷಧಾರಿಗಳು
ತಲಪ್ಪಾಡಿ: ಕೇರಳ -ಕರ್ನಾಟಕ ಗಡಿಭಾಗವಾಗಿರುವ ತಲಪ್ಪಾಡಿ ಪರಿಸರದಲ್ಲಿ ಸಿಂಹ,ಕರಡಿಗಳ ವೇಷಧಾರಿಗಳ ಅರ್ಭಟಕ್ಕೆ ರೋಸಿ ಹೋಗ ಗ್ರಾಮಸ್ಥರು ಬಹುತೇಕ ಮನೆಗಳ ಗೇಟ್ ಗಳಿಗೆ ಬೀಗ ಜಡಿದುಕೊಂಡಿದುಕೊಂಡಿದ್ದಾರೆ.

ನವರಾತ್ರಿಯ ಎರಡನೇಯ ದಿನವಾದ ಶುಕ್ರವಾರ 15ಕ್ಕೂ ಮಿಕ್ಕಿ ವೇಷಧಾರಿಗಳು ಮನೆ, ಮನೆಗಳಿಗೆ ತೆರಳಿ ಕುಣಿದು ಹಣ ಸಂಗ್ರಹಿಸಿದ್ದಾರೆ.
ಸಾಂಪ್ರದಾಯಕವಾಗಿ ವೇಷಧಾರಿಗಳು ಹಣ ಸಂಗ್ರಹಿಸುತ್ತಿದ್ದರೆ ಸ್ಥಳೀಯರು ರೋಸಿ ಹೋಗುತ್ತಿರಲಿಲ್ಲ. ಹೆಚ್ಚಿನ ಹಣದ ಬೇಡಿಕೆ ನಿರೀಕ್ಷೆಯೊಂದಿಗೆ ವೇಷಧಾರಿಗಳು ಮುಂದಾಗಿದ್ದಾರೆ. ಮನೆ ಮಂದಿಯಿಂದ ಹಣ ಪಡೆದ ಬಳಿಕ ಕೈ ಸನ್ನೆ, ಮುಖ ಭಾವನೆಗಳಲ್ಲಿ ನೀಡಿದ ಹಣದ ಬಗ್ಗೆ ತಾತ್ಸಾರವಾಗಿ ಕಾಣುತ್ತಿರುವ ಆರೋಪವೂ ಕೇಳಿಬರುತ್ತಿವೆ.
ಶುಕ್ರವಾರ ಸಂಧ್ಯಾಕಾಲದಲ್ಲಿ ದೀಪ ಪ್ರಜ್ವಲಿಸಿದ ಬಳಿಕ ಮನೆ ಮಂದಿ ಹಣವನ್ನು ಹೊರಗಡೆ ನೀಡುವುದಕ್ಕೆ ಹಿಂಜರಿಯುತ್ತಾರೆ. ಆದರೆ ಆ ವೇಳೆಯ ನಂತರವೂ ಚೆಂಡೆಯೊಂದಿಗೆ ವೇಷಧಾರಿಗಳು ಮನೆ ಮುಂದೆ ಹೆಜ್ಜೆ ಹಾಕಿರುವುದು ಕೆಲ ಮನೆಮಂದಿಯ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
ಗಡಿಭಾಗದಲ್ಲಿ ತಲಪ್ಪಾಡಿಯಲ್ಲಿ ನೆರೆಯ ಕಾಸರಗೋಡು ಹಾಗೂ ಉಳ್ಳಾಲ ಭಾಗದಿಂದಲೂ ವೇಷಧಾರಿಗಳು ಅಗಮಿಸಿದ್ದರು.
ನವರಾತ್ರಿಯ ಮೂರನೇಯ ದಿನ ಬೆಳಿಗ್ಗೆ 3ಕ್ಕೂ ಮಿಕ್ಕಿ ಸಿಂಹ, ಕರಡಿ ತಂಡಗಳು ಚೆಂಡೆ ವಾದಕನದೊಂದಿಗೆ ಅಗಮಿಸಿತ್ತಾದರೂ, ಹೆಚ್ಚಿನ ಮನೆಗಳಿಗೆ ಬೀಗ ಜಡಿದುಕೊಂಡಿರುವುದರಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ನಿರಾಸೆಯೊಂದಿಗೆ ಹಿಂದಕ್ಕೆ ಹೋಗಿರುವ ಬೆಳವಣಿಗೆ ನಡೆದಿದೆ.






































