ಕಾರ್ಕಳ : ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಶೇ. ೧೩ ಡಿವಿಡೆಂಡ್ ಷೋಷಣೆ
ಕಾರ್ಕಳ : ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ ೨೦೨೩-೨೦೨೪ ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಶಿಲ್ಪಶ್ರೀ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಬಿ. ಸದಾಶಿವ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಂಘದ ಅಧ್ಯಕ್ಷ ಬಿ ಸದಾಶಿವ ಶೆಟ್ಟಿಯವರು ಪ್ರಾಸ್ತಾವಿಕ ಮಾತಾನಾಡಿ, ಸಂಘವು ಈ ವರ್ಷದಲ್ಲಿ ರೂ ೫೨ ಕೋಟಿ ೭೪ ಲಕ್ಷ ದುಡಿಯುವ ಬಂಡವಾಳ ಹೊಂದಿದ್ದು, ವಾರ್ಷಿಕ ವ್ಯವಹಾರವು ರೂ ೨೩೫ ಕೋಟಿ ೫೧ ಲಕ್ಷ ಆಗಿರುತ್ತದೆ. ಎ ತರಗತಿ ಲೆಕ್ಕ ಪರಿಶೋಧನಾ ವರ್ಗೀಕರಣ ಆಗಿರುತ್ತದೆ.ಸಂಸ್ಥೆಯಲ್ಲಿ ೩೮೭೮ ಸದಸ್ಯರಿದ್ದು ರೂ ೧ ಕೋಟಿ ೬೯ ಲಕ್ಷ ಷೇರು ಬಂಡವಾಳ ಹೊಂದಿರುತ್ತದೆ . ಟ೩೫ ಕೋಟಿ ೫೬ ಲಕ್ಷ ಮೇಲ್ಪಟ್ಟು ಠೇವಣಾತಿ ಹೊಂದಿದ್ದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ೧೩ ಕೋಟಿ ೧೩ ಲಕ್ಷ ಸಾಲವನ್ನು
ಪಡೆದಿರುತ್ತೇವೆ. ಸದಸ್ಯರಿಗೆ ೪೦ ಕೋಟಿ ೬೦ ಲಕ್ಷ ಸಾಲವನ್ನು ನೀಡಿದ್ದು.೧೩ ಕೋಟಿ ೨೪ ಲಕ್ಷ ಧನವಿನಿಯೋಗವನ್ನು ಮಾಡಿರುತ್ತದೆ. ಅಲ್ಲದೇ ೧ ಕೋಟಿ ಆಸ್ತಿಯನ್ನು ಹೊಂದಿದ್ದು ಪ್ರಸಕ್ತ ಸಾಲಿನಲ್ಲಿ ೧ ಕೋಟಿ ೨ ಲಕ್ಷ ಲಾಭದಲ್ಲಿ ಇದ್ದು ಶೇ ೧೩ ಡಿವಿಡೆಂಟ್ ಅನ್ನು ಸದಸ್ಯರಿಗೆ ನೀಡುವುದಕ್ಕಾಗಿ ಮಹಾಸಭೆಯಲ್ಲಿ ಒಪ್ಪಿಗೆ ಪಡೆಯಲಾಯಿತು .
ಸಾಲದ ವಸೂಲಾತಿಯು ಶೇ. ೯೭.೫೫ ಇದ್ದು ಪ್ರಗತಿಯ ಪಥದಲ್ಲಿ ಮುಂದುವರಿಯತ್ತಿದೆ . ಮಹಾಸಭೆಯ ಎಲ್ಲಾ ಅಜೆಂಡಾಗಳಿಗೆ ಸರ್ವ ಸದಸ್ಯರಿಂದ ಒಪ್ಪಿಗೆ ಪಡೆಯಲಾಯಿತು.
ಸಂಘದ ಕಾರ್ಯವ್ಯಾಪ್ತಿಯಲ್ಲಿ ಇರುವ ಉತ್ತಮ ಕೃಷಿ ಸದಸ್ಯರಾದ ಶುಭಶ್ರೀ, ಭೋಜ ಶೆಟ್ಟಿಗಾರ್, ಗುಲಾಬಿ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ಉತ್ತಮ ಗ್ರಾಹಕ ಸದಸ್ಯರಾದ ಗೋಪಾಲಕೃಷ್ಣ .ಬಿ, ವಿಜಯ ಸಾಲ್ಯಾನ್, ರೀಟಾ ಡಿಮೆಲ್ಲೋ ಇವರನ್ನು ಸನ್ಮಾನಿಸಲಾಯಿತು.
ಗ್ರಾಮದ ಸಾಧಕರಾದ ಅಕ್ಷತಾ, ಅನುಶ್ರೀ ಆಚಾರ್ಯ, ರಾಘವೇಂದ್ರ ನಾಯ್ಕ, ವಿಜೇಂದ್ರ ಶೆಣೈ ಇವರನ್ನು ಸನ್ಮಾನಿಸಲಾಯಿತು.
ಸಂಘದ ವ್ಯವಹಾರದ ಪ್ರಗತಿಗೆ ಸಹಕಾರವನ್ನು ನೀಡಿದ ಹಿರಿಯ ಸಿಬ್ಬಂದಿ ದೀಕ್ಷಾ ಶಾಖಾವ್ಯವಸ್ಥಾಪಕಿ ಕಾಂತಾವರ, ರೂಪಾ ಕಿರಿಯ ಗುಮಾಸ್ತೆ ನಿಟ್ಟೆ ಶಾಖೆ ಇವರನ್ನು
ಸನ್ಮಾನಿಸಲಾಯಿತು.
ಕಾರ್ಯಕ್ಷೇತ್ರದ ಸದಸ್ಯರ ಮಕ್ಕಳಿಗಾಗಿ ಪಿ ಯು ಸಿ ಹಾಗೂ ಎಸ್..ಎಸ್ .ಎಲ್.ಸಿ ಶೇಕಡಾ ೯೦ ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ ೩೬ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘವು ಬೋಳ ,ನಿಟ್ಟೆ- ಕಾಂತಾವರ ,ಗುಂಡ್ಯಡ್ಕ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು, ಮೂರು ಗ್ರಾಮಗಳಲ್ಲಿ ಶಾಖೆಯನ್ನು ಹೊಂದಿರುತ್ತದೆ. ಸುಮಾರು ೭೦೦ ಕ್ಕೂ ಮಿಕ್ಕಿ ಕೃಷಿಕ ಸದಸ್ಯರಿಗೆ ಕೃಷಿ ಸಾಲವನ್ನು ನೀಡಲಾಗಿದೆ. ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ಸದಸ್ಯರಿಗೆ ಕೃಷಿಯೇತರ ಸಾಲವನ್ನು ನೀಡಿರುತ್ತದೆ. ತನ್ನ ವ್ಯವಹಾರವನ್ನು ಇನ್ನಷ್ಟು ಅಭಿವೃಧ್ದಿ ಪಡಿಸುವ ನಿಟ್ಟಿನಲ್ಲಿ ಕಾರ್ಯನ್ಮುಖವಾಗಿರುತ್ತದೆ. ಕೃಷಿ ಸಾಲ ಮತ್ತು ಕೃಷಿಯೇತರ ಸಾಲ ವಿತರಣೆ ಅಲ್ಲದೇ ಗೃಹ ಸಾಲ, ವಾಹನ ಸಾಲ, ಗ್ರಾಹಕ ಉಪಕರಣ ಖರೀದಿ ಸಾಲದೊಂದಿಗೆ ವ್ಯಾಪಾರ ವಹಿವಾಟನ್ನು ಕೂಡ ಮಾಡುತ್ತಿದ್ದು ರೈತರ ಅವಶ್ಯಕತೆಗಳನ್ನು ಪೂರೈಸುತ್ತಿದೆ.
ನಿಟ್ಟೆ ಶಾಖೆಯಲ್ಲಿ ೧ ಕೋಟಿ ೭೫ ಲಕ್ಷದ ನಬಾರ್ಡ್ ಯೋಜನೆಯ ಮೂಲಕ ಬಹುಪಯೋಗಿ ಕಟ್ಟಡವನ್ನು ಕಟ್ಟಿ ರೈತರಿಗೆ ಬೇಕಾದಂತಹ ಗೋದಾಮು ಮತ್ತು ಹೊಸ ಯೋಜನೆಗಳ
ಮೂಲಕ ರೈತರ ದೈನಂದಿನ ಅವಶ್ಯಕತೆಗಳ ಪೂರೈಕೆಯ ಕೇಂದ್ರವನ್ನಾಗಿ ಮಾಡುವುದು ಹಾಗೆಯೇ ಬೋಳದಲ್ಲಿ ಹೊಸ ಕಛೇರಿ ಕಟ್ಟಡದ ರಚನೆ , ಕಾಮನ್ ಸರ್ವಿಸ್ ಸೆಂಟರ್ (ಗ್ರಾಮ ಓನ್ ಕೇಂದ್ರ),ಸಂಘದ ಸದಸ್ಯರ ಅವಶ್ಯಕತೆಗೆ ಅನುಗುಣವಾಗಿ (ಸೂಪರ್ ಮಾರ್ಕೆಟ್ ತೆರೆಯುವುದು),ಜನೌಷದ ಕೇಂದ್ರ ತೆರೆಯುವುದು.ಎಂದು ಅಧ್ಯಕ್ಷ ಬಿ ಸದಾಶಿವ
ಶೆಟ್ಟಿ ಹೇಳಿದರು.
ಸಂಘದ ಉಪಾಧ್ಯಕ್ಷ ನವೀನ್ಚಂದ್ರ ಜೈನ ಸ್ವಾಗತಿಸಿದರು.
ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಮುರಳಿಧರ ಶರ್ಮ, ಅವಿನಾಶ್ ಮಲ್ಲಿ, ಕೆ ಗಣಪತಿ ಭಟ್, ಸೂರ್ಯಕಾಂತ್ ಶೆಟ್ಟಿ, ಮೋಹನ್ ದಾಸ್ ಅಡ್ಯಂತಾಯ , ಜಯರಾಮ ಸಾಲ್ಯಾನ್, ನಳಿನಿ ಶೆಟ್ಟಿ, ದಿವ್ಯ ನಾಯಕ್, ಸತೀಶ್ ನಾಯ್ಕ್, ಸುಂದರ ಮತ್ತು ವೃತ್ತಿಪರ ನಿರ್ದೇಶಕರಾದ ದಿನೇಶ್ ಶೆಟ್ಟಿ ,ಪ್ರೇಮ ಮೂಲ್ಯ ಹಾಗೂ ಪ್ರಭಾರ
ಮುಖ್ಯಕಾರ್ಯನಿರ್ವಹಣಾದಿಕಾರಿ ದೀಪಾ ಶೆಟ್ಟಿ ಉಪಸ್ಥಿತರಿದ್ದರು.




































