ರೂ 4,24,90,548.90 ಮೊತ್ತದ ಶೇರ್ ವಂಚನೆ: ಆರೋಪಿ ದಿನೇಶ್ ರಾವ್ ವಿರುದ್ಧ ಪ್ರಕರಣ ದಾಖಲಿಸಿದ ಸೆನ್ ಕ್ರೈಂ ವಿಭಾಗ
ಕಾರ್ಕಳ : ಮೃತ ವ್ಯಕ್ತಿಯೊಬ್ಬರ ಹೆಸರಿನಲ್ಲಿದ್ದ ಕೋಟ್ಯಾಂತರ ಮೊತ್ತದಲ್ಲಿ ಬೆಲೆಬಾಳುವ ಶೇರ್ ಗಳನ್ನು ನಕಲಿ ದಾಖಲೆಗಳನ್ನು ಸೃಷ್ಠಿಸಿ ಅದರ ಮೊತ್ತವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಸೆನ್ ಕ್ರೈಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ 1ನೇ ಆರೋಪಿತ ನಗರದ ಬಸ್ ನಿಲ್ದಾಣ ಬಳಿಯ ಗೋಪಾಲ ಟವರ್ಸ್ ಮುಂಭಾಗದ ನಿವಾಸಿ ದಿನೇಶ್ ಎಂದು ತಿಳಿದುಬಂದಿದೆ.
ನಡೆದಿರುವ ಘಟನೆಯ ವಿವರ….

ಕಾರ್ಕಳ ಅಶೋಕ್ ರಾವ್ ಎಂಬವರು ಕಾರ್ಕಳದ ಗೋಪಾಲ ಟವರ್ಸ್ ಮುಂಭಾಗದ ನಿವಾಸಿಯಾಗಿದ್ದು, ೨೦೨೦ ಜುಲಾಯಿ ೧೩ ರಂದು ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಮೃತಪಟ್ಟಿದ್ದರು.
ಮೃತ ಕಾರ್ಕಳ ಅಶೋಕ್ ರಾವ್ ಅವರ ಪತ್ನಿ ಲಲಿತಾ ರಾವ್ ಮಕ್ಕಳಾದ ಪುನೀತ್ ರಾವ್, ಅಮಿತ್ ರಾವ್ ಆ ಸಂದರ್ಭದಲ್ಲಿ ಅಮೇರಿಕಾದಲ್ಲಿ ನೆಲೆಸಿದ್ದು, ಕೋವಿಡ್ ಲಾಕ್ ಡೌನ್ ಕಾರಣದಿಂದ ಮೃತರ ಅಂತಿಮ ಸಂಸ್ಕಾರಕ್ಕೆ ಅಮೇರಿಕಾದಿಂದ ಕಾರ್ಕಳಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಆ ಸಂದರ್ಭದಲ್ಲಿ ಮೃತ ಕಾರ್ಕಳ ಅಶೋಕ್ ರಾವ್ ಅವರ ಅಂತಿಮ ಸಂಸ್ಕಾರವನ್ನು ಮೃತರ ಸಹೋದರನ ಮಗ ನಡೆಸಿರುತ್ತಾರೆ.
ಕಾರ್ಕಳ ಅಶೋಕ್ ರಾವ್ ರವರ ಅಣ್ಣ ಮೋಹನ ರಾವ್ ರವರ ಮಗ ಈ ಪ್ರಕರಣದಲ್ಲಿ ೧ ನೇ ಆಪಾದಿತನಾದ ದಿನೇಶ್ ೨೦೨೦ ಜುಲಾಯಿ ೧೫ರಿಂದ ೧೮ ರ ಮಧ್ಯಾವಧಿಯಲಿ ಮೃತ ಕಾರ್ಕಳ ಅಶೋಕ್ ರಾವ್ Dr. Reddies Laboratories, Hindalco, Reliance Industries, Comromandal Inernational Ltd



ಕಂಪೆನಿಗಳಿಗೆ ಸೇರಿದ ಒಟ್ಟು ೪,೨೪,೯೦,೫೪೮.೯೦/-( ನಾಲ್ಕು ಕೋಟಿ ಇಪ್ಪತ್ತನಾಲ್ಕು ಲಕ್ಷದ ತೊಂಭತ್ತು ಸಾವಿರದ ಐದುನೂರ ನಲವತ್ತೆಂಟು ರೂಪಾಯಿ ತೋಂಭತ್ತು ಪೈಸೆ) ರೂಪಾಯಿ ಮೌಲ್ಯದ ೧೪,೯೭೦ ಶೇರುಗಳನ್ನು ಮೃತರ ಮೊಬೈಲ್ ನಂಬ್ರ ೭೭೬೦೭೭೫೫೮೦, ಇ-ಮೇಲ್ ಐ.ಡಿ karkalaashok@gmail.com ದುರ್ಬಳಕೆ ಮಾಡಿಕೊಂಡು ಮಾರಾಟ ಮಾಡಿರುತ್ತಾನೆ. ಸದರಿ ಶೇರುಗಳನ್ನು ಮಾರಾಟ ಮಾಡಿದ ಹಣವನ್ನು ಮೃತರ ಉತ್ತರದಾಯಿತ್ವ ಪ್ರಮಾಣಪತ್ರವನ್ನು ಸಂಬ0ಧಿಸಿದ ನ್ಯಾಯಾಲಯದಿಂದ ಪಡೆಯದೇ ನಾಮ ನಿರ್ದೇಶನದ ಸುಳ್ಳು ದಾಖಲಾತಿಯನ್ನು ಸೃಷ್ಟಿಸಿ ಸದರಿ ದಾಖಲಾತಿಯನ್ನು ನೈಜವಾದುದು ಎಂದು ಶೇರು ಬೋಕರ್ ಕಂಪನಿ M/s Asita C Mehta Investment intermediates Ltd ಇವರಿಗೆ ಹಾಗೂ axis ಬ್ಯಾಂಕಿಗೆ ಸಲ್ಲಿಸಿ ಶೇರು ಬೋಕರ್ ಕಂಪನಿ ಮತ್ತು ಬ್ಯಾಂಕಿನ ಉದ್ಯೋಗಿಗಳೊಂದಿಗೆ ಶ್ಯಾಮಿಲಾಗಿ ಮೃತರ axis ಬ್ಯಾಂಕ್ ಮೂಡಬಿದ್ರೆ ಶಾಖೆಯ ಖಾತೆ ನಂಬ್ರ ೯೧೪೦೧೦೦೧೫೭೩೭೮೯೫ ರಿಂದ axis ಬ್ಯಾಂಕಿನಲಿರುವ ೧ ನೇ ಆಪಾದಿತ ದಿನೇಶ್.ಕೆ ಈತನ ಖಾತೆಗೆ ಜಮೆ ಮಾಡಿಕೊಂಡಿದ್ದಾನೆ. Dmat ಖಾತೆಯಿಂದ Dr Dr Reddies Laboratories ಮತ್ತು Comromandal Inernational Ltd ಕಂಪನಿಯ ೪೧೬೦ ಶೇರುಗಳನ್ನು ಮಾರಾಟಮಾಡಿ ಸಂಗ್ರಹವಾದ ಹಣವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ವಂಚಿಸಿರುತ್ತಾನೆ ಎಂಬ ಮಹತ್ವದ ವಿಚಾರ ಬೆಳಕಿಗೆ ಬಂದಿದೆ.
ಈ ಕುರಿತು ಮೃತರ ಹೆಂಡತಿ ಹಾಗೂ ಮಕ್ಕಳಿಂದ ದೂರನ್ನು ದಾಖಲಿಸಲು G P A ಅಧಿಕಾರ ಪತ್ರವನ್ನು ಪಡೆದಿರುವ ಕೆ.ನವೀನ್ ರಾವ್ ಎಂಬವರು ಉಡುಪಿ ಜಿಲ್ಲೆ ಸೆನ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿದ್ದಾರೆ. ಅದರನ್ವಯ ತನಿಖೆ ಶುರುವಾಗಿದೆ.





































