ಕೇಮಾರಿನಲ್ಲಿ ಅನೈತಿಕ ಚಟುವಟಿಕೆಯ ತಾಣ

Picture of RB NEWS

RB NEWS

Bureau Report

ಮೂಡುಬಿದಿರೆ : ಪುತ್ತಿಗೆ ಹಾಗೂ ಪಾಲಡ್ಕ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೇಮಾರು ಪಲ್ಲದಮೇಲು ಸಮೀಪದ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗವು‌ ಹಾಡುಹಗಲು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಜುಗಾರಿ ದಂಧೆ, ಮಧ್ಯಪಾನ, ಡ್ರಗ್ಸ್ ಸೇವಿಸುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಈ ಸೂಕ್ತ ಕ್ರಮ ಕೈಗೊಳ್ಳುವಂತೆ ಯುವ ಉತ್ಸಾಹಿ ಬಳಗ ವತಿಯಿಂದ ಮೂಡುಬಿದಿರೆ ಪೋಲಿಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಅವರಿಗೆ ಮನವಿ ಸಲ್ಲಿಸಲಾಯಿತು.

ಕೇಮಾರು ಭಾಗದ ಶಾಲಾ-ಕಾಲೇಜುಗಳ ವಿಧ್ಯಾರ್ಥಿಗಳು ಕೊಡ್ಯಡ್ಕದವರೆಗೆ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ಇದೇ ರಸ್ತೆಯಲ್ಲೆ ಭಯಭೀತರಾಗಿ ನಡೆದಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.

ಅರಣ್ಯ ಇಲಾಖೆ ಸಂಭಂಧಪಟ್ಟ ಎಕರೆಗಟ್ಟಲೆ ಜಾಗವಿದ್ದು ಈ ಜಾಗದಲ್ಲಿ ಮಧ್ಯಪಾನ ಮಾಡಿ ಬಾಟಲ್ ಹಾಗೂ ವಸತಿಗೃಹಗಳ ಕಸದ ರಾಶಿಯಿಂದ ಪ್ರಕೃತಿ ಸೌಂದರ್ಯ ಹದಗೆಟ್ಟಿದೆ. ಈ ಬಗ್ಗೆ ಹಲವು ಬಾರಿ ಗ್ರಾಮಸ್ಥರು ಪುತ್ತಿಗೆ ಪಂಚಾಯತ್ ದೂರು ನೀಡಿದ್ದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಈ ಸಂದರ್ಭದಲ್ಲಿ ಇಂತಹ ಸನ್ನಿವೇಶದಲ್ಲಿ ನಮ್ಮ ಇಲಾಖೆಯ ಗಮನಕ್ಕೆ ತರುವಂತೆ ಸಂದೇಶ್ ಅವರು ತಿಳಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top