ಕಾರ್ಕಳದಲ್ಲಿ ಜವಳಿ ಪಾರ್ಕ್ : ₹ 29.97 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ -ಮುಖ್ಯಮಂತ್ರಿ ಸಿದ್ದರಾಮಯ್ಯ
ಕಾರ್ಕಳ : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ 2024 ಸಪ್ಪೆಂಬರ್ 5ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯದಂತೆ
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಜವಳಿ ಪಾರ್ಕ್ನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಪಿಪಿಒ ಮಾದರಿಯಲ್ಲಿ ₹ 29.97 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದೆ.

2023 ಮಾಚ್೯ 3ರಂದು ಕಾರ್ಕಳ ನಿಟ್ಟೆ ಗ್ರಾಮದ ಮದನಾಡು ಎಂಬಲ್ಲಿ ಜವಳಿ ಪಾಕ್೯ನ ಗುದ್ದಲಿ ಪೂಜೆಯನ್ನು ಅಂದಿನ ಶಾಸಕ ಹಾಗೂ ಇಂಧನ ಸಚಿವ ವಿ.ಸುನೀಲ್ ಕುಮಾರ್ ಉದ್ಘಾಟಿಸಿದರು.
ಜವಳಿ ಪಾರ್ಕ್ಗಾಗಿ ನಿಟ್ಟೆ ಗ್ರಾಮದ ಮುದನಾಡಿನಲ್ಲಿ 15 ಎಕರೆ ಭೂಪ್ರದೇಶವನ್ನು ಗುರುತಿಸಲಾಗಿದೆ. 20 ಕೋ.ರೂ ವೆಚ್ಚದ ಕಾಮಗಾರಿಯಾಗಿದೆ ಎಂದು ಅಂದಾಜಿಸಲಾಗಿತು.
ನಂತರದ ದಿನಗಳಲ್ಲಿ ಮರೀಚಿಕೆಯಲ್ಲಿ ಇದ್ದ ಯೋಜನೆಗೆ ಪ್ರಸಕ್ತ ಸರಕಾರವು ₹29.97 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದೆ.














