ಮನಸ್ಸಿದ್ದರೆ ಮಾರ್ಗವಿದೆ: ಸಮಸ್ಸೆಗೆ ಪರಿಹಾರವಿದೆ
ಮಂ.ಮ.ನಗರ.ಪಾಲಿಕೆ ಮೇಯರ್ ಕಾರ್ಯದಕ್ಷತೆಗೆ ವ್ಯಾಪಕ ಪ್ರಶಂಸೆ
ಆರ್.ಬಿ.ನ್ಯೂಸ್ ವರದಿಯ ಫಲಶ್ರುತಿ
*ಆರ್.ಬಿ.ಜಗದೀಶ್
ಮಂಗಳೂರು: ಮನಸ್ಸಿದರೆ ಮಾರ್ಗವಿದೆ. ಸಮಸ್ಸೆಗೆ ಪರಿಹಾರವಿದೆ. ಜವಾಬ್ದಾರಿ ಸ್ಥಾನದಲ್ಲಿ ಇರುವವ ವ್ಯಕ್ತಿಗೆ ಈ ಕರ್ತವ್ಯ ನಿರ್ವಹಿಸಲು ಸಾಧ್ಯ ಎಂಬುವುದನ್ನು ತನ್ನ ಕಾರ್ಯದಕ್ಷತೆಯಿಂದ ತೋರ್ಪಡಿಸಿ ಜನಮನ್ನಣೆಗೆ ಪಾತ್ರರಾದವರು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್À ಸುಧೀರ್ ಶೆಟ್ಟಿ ಕಣ್ಣೂರು.
ಇವರು ಪ್ರತಿನಿಧಿಸಿದ ವಾರ್ಡ್ ವ್ಯಾಪ್ತಿಯ ಮಂಗಳೂರು ಬಿಜೈ ಕಾಪಿಕಾಡ್ ಮೂರನೇ ಅಡ್ಡ ರಸ್ತೆಯಿಂದ ಚಿಲಿಂಬಿ ಕುದ್ಮಲ್ ರಂಗ ರಾವ್ ರಸ್ತೆಯಲ್ಲಿ ಕೆಲ ತಿಂಗಳ ಹಿಂದೆ ಪೈಪ್ ಅಳವಡಿಸಲೆಂದು ತೋಡಲಾಗಿದ್ದ ಭಾರೀ ಗಾತ್ರದ ಹೊಂಡದಿAದಾಗಿ ಮಳೆಗಾಲದಲ್ಲಿ ಈ ಭಾಗದ ರಸ್ತೆ ಸಂಫೂರ್ಣ ಹದಗೆಟ್ಟುತ್ತು. ಪರಿಣಾಮವಾಗಿ ಎರಡು ಪ್ರದೇಶಗಳ ಸಂಚಾರಕ್ಕೆ ಅಡೆತಡೆಯಾಗಿತ್ತು. ಇಳಿಜಾರು ಪ್ರದೇಶವಾಗಿರುವ ಇದೇ ರಸ್ತೆಯಾಗಿ ಹಾದು ಹೋಗುತ್ತಿದ್ದ ವಾಹನಗಳು ಸ್ಕಿಡಾಗಿ ಹಲವು ಮಂದಿ ಗಾಯಗೊಂಡಿದ್ದರು.
ಈ ಎಲ್ಲಾ ದೃಷ್ಟಿಕೋನವನ್ನು ಮುಂದಿಟ್ಟು ಆರ್.ಬಿ.ನ್ಯೂಸ್ ಸಾಮಾಜಿಕ ಜಾಲತಾಣವು ಆಗಸ್ಟ್ ೧೬ರಂದು ಇದು ಅಪಾಯಕಾರಿ ರಸ್ತೆ ! ಎಚ್ಚರ ಕಟ್ಟೆಚ್ಚರ !!
ಮಂಗಳೂರು: ಇದು ಸ್ಮಾರ್ಟ್ ಸಿಟಿ ಮಂಗಳೂರಿನ ಕರ್ಮಕಾಂಡ ಎಂಬ ಶೀರ್ಷಿಕೆಯಡಿಯಲ್ಲಿ ಸಮಗ್ರ ವರದಿಯನ್ನು ಪ್ರಕಟಿಸಿ ಮಹಾನಗರ ಪಾಲಿಕೆಯ ಆಡಳಿತವನ್ನು ಎಚ್ಚರಿಸುವ ಕಾರ್ಯ ನಡೆಸಿತು.

ಅದೇ ಸಂದರ್ಭದಲ್ಲಿ ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಸುಧೀರ್ ಕಣ್ಣೂರು ಅವರನ್ನು ಆರ್. ಬಿ.ನ್ಯೂಸ್ ಸಂಪರ್ಕಿಸಿದ್ದು, ಕಾಪಿಕಾಡ್ ಮೂರನೇ ರಸ್ತೆಯಲ್ಲಿ ಈಗಿರುವ ಸಮಸ್ಸೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಕಾಂಕ್ರೀಟ್ ರಸ್ತೆಯನ್ನಾಗಿ ಮಾರ್ಪಡು ಮಾಡುವ ಹಾಗೂ ಸಮಸ್ಸೆ ಗಂಭೀರತೆಯನ್ನು ಪರಿಗಣಿಸಿ ತುರ್ತು ಕಾಮಗಾರಿ ನಡೆಸುವುದಾಗಿ ಆಶ್ವಾಸನೆ ನೀಡಿದ್ದರು.
ಇದರ ಬೆನ್ನಲ್ಲೇ ಘಟನಾ ಸ್ಥಳಕ್ಕೆ ಅಧಿಕಾರಿಗಳ ತಂಡದೊAದಿಗೆ ತೆರಳಿದ ಮೇಯರ್ ಸುಧೀರ್ ಕಣ್ಣೂರು ಅವರು ಸ್ಥಳೀಯರಲ್ಲಿ ಮಾತುಕತೆ ನಡೆಸಿ ತುರ್ತು ಕಾಮಗಾರಿ ಕೈಗೊಳ್ಳುವುದಾಗಿ ತಿಳಿಸಿದ್ದರು.
ಬರೀ ಆಶ್ವಾಸನೇ ಅಲ್ಲವೇ ಅಲ್ಲ!
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಆರ್.ನ್ಯೂಸ್ ಹಾಗೂ ವಾರ್ಡ್ನ ಜನತೆಗೆ ನೀಡಿರುವುದು ಬರೀ ಅಶ್ವಾಸನೇ ಅಲ್ಲವೇ ಅಲ್ಲ. ನೀಡಿರುವ ಆಶ್ವಾಸನೇ ಕಾರ್ಯಗತ ಗೊಳಿಸಿ ಜನಪ್ರತಿನಿಧಿಯ ಜವಾಬ್ದಾರಿಯ ಮಹತ್ವ ತಿಳಿಸಿಕೊಟ್ಟಿದ್ದಾರೆ.
ಆಗಸ್ಟ್ ೧೯ರಂದು ಪಾಳುಬಿದ್ದ ಈ ರಸ್ತೆಗೆ ತುರ್ತು ಕಾಮಗಾರಿಯಡಿಯಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಯಲಾಗಿದೆ. ೨೫.೦೦ ಮೀಟರ್ ಉದ್ದ ಹಾಗೂ ೩.೦೦ ಮೀಟರ್ ಅಗಲ ರಸ್ತೆ ಸಂಪೂರ್ಣ ಕಾಂಕ್ರೀಟ್ಕರಣ ರಸ್ತೆಯಾಗಿ ಮಾರ್ಪಟ್ಟಿದೆ. ತುರ್ತು ಕಾಮಗಾರಿಯ ಅಂದಾಜು ವೆಚ್ಚ ರೂ. ೨ ಲಕ್ಷ ಆಗಿದೆ ಎಂಬ ಮಾಹಿತಿ ಲಭಿಸಿದೆ.

ಪ್ರಕಟಗೊಂಡಿದ್ದ ಸುದ್ದಿಯಲ್ಲಿ ಏನಿತ್ತು?
ವರದಿ : ಆರ್.ಬಿ.ಜಗದೀಶ್
ಇದು ಅಪಾಯಕಾರಿ ರಸ್ತೆ ! ಎಚ್ಚರ ಕಟ್ಟೆಚ್ಚರ !!
ಮಂಗಳೂರು: ಇದು ಸ್ಮಾರ್ಟ್ ಸಿಟಿ ಮಂಗಳೂರಿನ ಕರ್ಮಕಾಂಡ

ಒAದು ಯೋಜನೆ ಪರಿಪೂರ್ಣವಾಗುವ ಮೊದಲೇ ನೂರಾರು ವಿಘ್ನುಗಳು ಎದುರಾಗುತ್ತಿದೆ. ರಸ್ತೆಯಲ್ಲಿ ಹೋಗಬೇಕಾದರೆ ಜೀವಕ್ಕೂ ಸಂಚಕಾರ ಎದುರಾಗುವುದು ಗ್ಯಾರೆಂಟಿ.
_ಹೌದು ಈ ರಸ್ತೆಯಲ್ಲಿ ಪ್ರತಿದಿನ ಹಲವು ಮಂದಿ ಸ್ಕಿಡಾಗಿ ಬೀಳುತ್ತಾರೆ. ಗಾಯಗೊಳ್ಳುತ್ತಿರುವುದು ಸರ್ವೇ ಸಾಮಾನ್ಯ.
ಮಂಗಳೂರು ಬಿಜೈ ಕಾಪಿಕಾಡು ೩ನೇ ರಸ್ತೆಯಾಗಿ ಲೇಡಿಹಿಲ್ ಅಥವಾ ಚಿಲಿಂಬಿ ಸಂಪರ್ಕಿಸುವ ಕುದ್ಮಲ್ ರಸ್ತೆಯ ಸ್ಥಿತಿ-ಗತಿ ಇದಾಗಿದೆ.
ದಲಿತೋದ್ಧಾರ ಕುದ್ಮಲ್ ರಂಗರಾವ್ ಅವರ ಸ್ಮರಣಾರ್ಥವಾಗಿ ಮಹಾನಗರ ಪಾಲಿಕೆ ಈ ರಸ್ತೆಗೆ ನಾಮಕರಣ ಗೊಳಿಸಿ ವರ್ಷಗಳೇ ಸಂದಿದೆ. ಇದೇ ಪರಿಸರದಲ್ಲಿ ದಲಿತ ಸಮುದಾಯದ ಮನೆಗಳು ಗಣಣೀಯ ಸಂಖ್ಯೆಯಲ್ಲಿ ಇದೆ.
ಕೂಡು ರಸ್ತೆಯಾಗಿರುವುದರಿಂದಾಗಿ ಇದೇ ರಸ್ತೆಯಾಗಿ ಪ್ರತಿದಿನ ದ್ವಿಚಕ್ರ, ಲಘುವಾಹನಗಳ ಓಡಾಟ ನಡೆಯುತ್ತಿದೆ. ಒಂದೆಡೆ ತಿರುವು ಮುರುವು ಮತ್ತೊಂದೆಡೆಯಲ್ಲಿ ಇಳಿಜಾರಿನಿಂದ ಕೂಡಿದ ಕುಡ್ಮಲ್ ರಸ್ತೆಯಲ್ಲಿ ಪೈಪ್ ಅಳವಡಿಸಲು ಹಲವು ತಿಂಗಳ ಹಿಂದೆ ರಸ್ತೆಯನ್ನು ಅಗೆಯಲಾಗಿತ್ತು. ಬೃಹತ್ ಗಾತ್ರದ ಪೈಪ್ ಅಳವಡಿಸಿ ತಿಂಗಳು ಹಲವು ಸಂದಿದೆ. ತೆಗೆಯಲಾಗಿದ್ದ ಹೊಂಡಕ್ಕೆ ಸಮರ್ಪಕವಾಗಿ ಮಣ್ಣು ತುಂಬಿಸದೇ ಹೋದುದರಿಂದ ಮಳೆಗಾಲದಲ್ಲಿ ರಸ್ತೆ ಪೂರ್ತಿ ಹೊಂಡಮಯವಾಗಿದೆ.
ಇಳಿಜಾರು ಪ್ರದೇಶದಲ್ಲಿ ಪ್ರತಿದಿನ ವಾಹನಗಳು ಅಘಘಾತವಾಗಿತ್ತಿದ್ದು, ಅದರ ಪ್ರಯಾಣಿಕರು ಗಾಯಗೊಳ್ಳುತ್ತಿದ್ದಾರೆ. ಗಾಯಾಳುಗಳನ್ನು ಉಪಚರಿಸುವುದೇ ಸ್ಥಳೀಯರ ದಿನಚರಿಯೂ ಆಗಿದೆ.
ಅಶಕ್ತರಿಗೆ ತೀರಾಭಂಗ…
ಪರಿಸರದಲ್ಲಿ ಹಲವು ಮಂದಿ ಅಶಕ್ತರು ವಾಸವಾಗಿದ್ದಾರೆ. ಅವರಲ್ಲಿ ವೃದ್ಧರು, ರೋಗಿಸ್ಥರು ಒಳಗೊಂಡಿದ್ದು, ತುರ್ತು ಸಂದರ್ಭದಲ್ಲಿ ಅವರಿಗೆ ಆಸ್ಪತ್ರೆಗೆ ಅಥವಾ ಸ್ಥಳೀಯವಾಗಿ ಹೋಗಿ ಬರಲು ತ್ರಾಸದಾಯವಾಗಿದೆ.
ಕುದ್ಮಲ್ ರಸ್ತೆಯ ಸಮಸ್ಸೆಯಿಂದಾಗಿ ಹಲವಾರು ಮಂದಿ ಸಂಕಷ್ಟಕ್ಕೊಳಗಾಘಿರುವುದರಿAದ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ವರ್ಗವು ರಸ್ತೆ ದುರಸ್ಥಿಗೆ ಮಂದಾಗಬೇಕಾಗಿದೆ ಎಂದು ಆಗ್ರಹವು ಕೇಳಿಬರುತ್ತಿದೆ.
ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಅದ್ಯತೆ
ಸುಧೀರ್ ಶೆಟ್ಟಿ ಕಣ್ಣೂರು ಮೇಯರ್ ಮಂಗಳೂರು ಮಹಾ ನಗರ ಪಾಲಿಕೆ
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿರುವ ಸುಧೀರ್ ಶೆಟ್ಟಿ ಕಣ್ಣೂರು ಅವರು ಇದೇ ವಾರ್ಡ್ನ್ನು ಪ್ರತಿನಿಧಿಸಿದ್ದಾರೆ. ಅವರನ್ನು ಮಾಧ್ಯಮವು ಸಂಪರ್ಕಿಸಿದ್ದು, ಈ ಕುರಿತು ಅವರು ಹೇಳಿಕೆಯೊಂದನ್ನು ನೀಡಿ, ಕುದ್ಮಲ್ ರಸ್ತೆಯ ಕುರಿತು ಈಗಾಗಲೇ ಹಲವು ದೂರುಗಳು ಬಂದಿರುವುದAತು ನಿಜ. ದೂರಾದೃಷ್ಠಿ ಇಟ್ಟುಕೊಂಡು ಕುದ್ಮಲ್ ರಸ್ತೆಯನ್ನು ಕಾಂಕ್ರೀಟ್ ಕರಣಕ್ಕೆ ಮಾಡುವುದಕ್ಕೆ ಯೋಜನೆ ಹಮ್ಮಿ ಕೊಳ್ಳಲಾಗಿದೆ. ಮಳೆಗಾಲ ಮುಗಿದ ಬಳಿಕ ಕಾಮಗಾರಿ ಶುರುಮಾಡುವುದಾಗಿದೆ ಮಾಹಿತಿ ನೀಡಿದ್ದಾರೆ.































