ಕಾರ್ಕಳ : ಉಡುಪಿ ಜಿಲ್ಲಾ ಶಿರ್ವ ವ್ಯಾಪ್ತಿಯಲ್ಲಿ 108 ಅಂಬುಲೆನ್ಸ್ ಆರೋಗ್ಯ ಕವಚ ಚಾಲಕರ ದಿನಾಚರಣೆ ಆಚರಿಸಲಾಯಿತು
ಮೇ 26 ರಂದು ಶಿರ್ವದಲ್ಲಿ ಜಿವಿಕೆ ಇಎಂಆರ್ ಐ ಗ್ರೀನ್ ಹೆಲ್ತ್ ಸರ್ವೀಸಸ್ ವತಿಯಿಂದ ಡಿ.ಎಂ ಗುರುರಾಜ್ ನಾಯಕ್, ಓಇ ಮಹಾಬಲ ಇವರು ಜಂಟಿಯಾಗಿ ಕೇಕ್ ಕತ್ತರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉಡುಪಿ ಜಿಲ್ಲೆ ಕಾರ್ಕಳ, ಶಿರ್ವ, ಕಾಪು ವಿಭಾಗದ 108 ಅಂಬುಲೆನ್ಸ್ ಆರೋಗ್ಯ ಕವಚ ಸಿಬ್ಬಂದಿಗಳು ಕಾರ್ಯಕ್ರಮ ಆಯೋಜಿಸಿದರು.

ಇಎಂಟಿ ರಾಜಶೇಖರ್ ರಂಗಪ್ಪ, ಪೈಲೆಟ್ ಗಳಾದ ಕೊಟ್ರೇಶ್ ಮಾಂತೇಶ್, ಶಾಂತರ ಗೌಡ, ಸಚ್ಚಿದಾನಂದ ಇವರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿತು.



































