ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಬಡ್ಡಿ ದರ ಏರಿಕೆ
RB NEWS
Bureau Report
ಕಾರ್ಕಳ ತಾಲೂಕಿನ ಕುಕ್ಕುಂದೂರಿನ ಜೋಡುರಸ್ತೆಯಲ್ಲಿರುವ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲೊoದಾದ ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘವು ರಜತ ಮಹೋತ್ಸವದತ್ತ ದಾಪುಗಾಲು ಇಡುತ್ತಿದೆ.
ಈ ಸಂದರ್ಭದಲ್ಲಿ ವರಮಹಾಲಕ್ಷ್ಮೀ ಹಾಗೂ ಗಣೇಶ ಚತುರ್ಥಿ ಅಂಗವಾಗಿ ಆ.16 ರಿಂದ ಸೆ.16ರವರೆಗೆ ವಿಶೇಷ ಠೇವಣಿ ಯೋಜನೆಯನ್ನು ಹಮ್ಮಿಕೊಂಡಿದೆ.
ಈ ಯೋಜನೆಯನ್ವಯ ಒಂದು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಅವಧಿಯ ಠೇವಣಿಗಳಿಗೆ ಶೇ.೧೦ರಷ್ಟು ಬಡ್ಡಿ ದರವನ್ನು ನೀಡಲಾಗುವುದು.
ಹಿರಿಯ ನಾಗರಿಕರಿಗೆ, ವಿಧವೆಯರಿಗೆ, ಮಾಜಿ ಸೈನಿಕರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಶೇ.10.5 ಅಧಿಕ ಬಡ್ಡಿ ನೀಡಲಾಗುವುದು
ಹೆಚ್ಚಿನ ಮಾಹಿತಿಗೆ ಕೇಂದ್ರ ಕಚೇರಿ ಮೊ. 8277015598 ಹಾಗೂ ಮುಖ್ಯ ಶಾಖೆ ಮೊ.8277015630 ಸಂಪರ್ಕಿಸಬಹುದು ಎಂದು ಸಂಘದ ಅಧ್ಯಕ್ಷ ಸಂತೋಷ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಡಳಿತ ಮಂಡಳಿ
ಆಡಳಿತ ಮಂಡಳಿ ಅಧ್ಯಕ್ಷರಾಗಿ ಸಂತೋಷ್ ರಾವ್, ಉಪಾಧ್ಯಕ್ಷರಾಗಿ ವೃಷಭರಾಜ್ ಕಡಂಬ, ನಿರ್ದೇಶಕರಾಗಿ – ತ್ರಿವಿಕ್ರಮ ಕಿಣಿ, ದಿನೇಶ್ ಕುಮಾರ್ ವೈ, ಸಂದೀಪ್ ನಾಯಕ್, ಸಂಜೀವ ನಾಯಕ್, ಯೋಗೀಶ್ ಸಾಲಿಯಾನ್, ಪಾಂಡುರಂಗ ನಾಯಕ್, ಗಣೇಶ್, ಶ್ರೀಮತಿ ಸುಶ್ಮಿತಾ ರಾವ್, ದೀಪಾ ಎಸ್. ವಾಗ್ಗೆ, ಪುಷ್ಪರಾಜ್, ಅನಿಲ್ ಕುಮಾರ್ ಸೇವೆ ಸಲ್ಲಿಸುತ್ತಿದ್ದಾರೆ.
ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಜಯಶ್ರೀ
ಸಂಘದ ಮುಖ್ಯಕಾರ್ಯನಿರ್ವ ಹಣಾಧಿಕಾರಿಯಾಗಿ ಜಯಶ್ರೀ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘದಲ್ಲಿ 8 ಮಂದಿ ಶಾಖಾ ವ್ಯವಸ್ಥಾಪಕರು, ಹಾಗೂ 12 ಮಂದಿ ಸಿಬ್ಬಂದಿ ಬ್ಯಾಂಕಿನ ಅಭಿವೃದ್ಧಿಯಲ್ಲಿ ಹಾಗೂ ಸದಸ್ಯರಿಗೆ ಉತ್ತಮ ಸೇವೆ ನೀಡುವಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.