


10 ಲಕ್ಷ ರೂ. ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ: ಉಡುಪಿ ಮೂಲದ ಮಹಿಳೆಯ ಬಂಧನ
ಮುಂಬೈ : ಶೇರ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿ ಮಹಿಳೆ ಹಾಗೂ ಆಕೆಯ ಸಹೋದರನಿಗೆ ಸುಮಾರು 10 ಲಕ್ಷ ರೂ. ವಂಚನೆ ಮಾಡಿದ ಆರೋಪದ ಮೇಲೆ ಉಡುಪಿ ಮೂಲದ ಮಹಿಳೆಯನ್ನು ಕಾಂದಿವಲಿ ಪಶ್ಚಿಮ ಪೊಲೀಸರು ಬಂಧಿಸಿದ್ದಾರೆ. ಚೆಕ್ ಬೌನ್ಸ್ ಹಾಗೂ ವಂಚನೆ ಪ್ರಕರಣಗಳಲ್ಲಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.



























