ಹೋರಾಟ, ಬಲಿದಾನದ ಪರಿಣಾಮವಾಗಿ ಸ್ವಾತಂತ್ರ್ಯ

Picture of RB NEWS

RB NEWS

Bureau Report

ಕಾರ್ಕಳ: ಸ್ವಾತಂತ್ರ್ಯ ದಿನಾಚರಣೆಯೆಂದರೆ ಕೇವಲ ಒಂದು ದಿನದ ಆಚರಣೆಯಲ್ಲ. ಆ ದಿನದ ಹಿಂದಿನ ಮಹತ್ವ ದೊಡ್ಡದು, ಸಂತೋಷ ಪಡುವ ದಿನ ಹೌದಾದರೂ ಬ್ರಿಟಿಷರಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೆ ಬಲಿದಾನ ಮಾಡಿದ ನಮ್ಮ ಪೂರ್ವ ಪರಂಪರೆಯ ಅರಿವನ್ನು ನಾವು ಹೊಂದಿರಬೇಕು ಮತ್ತು ಈ ಮೂಲಕ ಅವರ ನೆನಪನ್ನು ಮಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅವರಿಗೆಲ್ಲ ಕೃತಜ್ಞತೆ ಸಲ್ಲಿಸುವ ಅವರನ್ನು ಸದಾ ಅಮರರನ್ನಾಗಿಸುವ ಉದ್ದೇಶದಿಂದ ಈ ಆಚರಣೆ ನಮ್ಮ ಯುವ ತಲೆಮಾರಿಗೆ ತಲುಪಬೇಕು.

ಭಾರತ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಸಿಪಾಯಿ ಮಂಗಲಪಾಂಡೆ, ಚಂದ್ರಶೇಖರ ಆಜಾದ್, ಬಾಲಗಂಗಾಧರ ತಿಲಕ, ಭಗತ್ ಸಿಂಗ್, ಸುಭಾಶ್ಚಂದ್ರ ಬೋಸ್, ಮಹಾತ್ಮಾ ಗಾಂಧಿ ಮುಂತಾದವರ ಹೋರಾಟದ ಫಲವನ್ನು ಅನುಭವಿಸುವ ನಾವು ಅವರ ತ್ಯಾಗವನ್ನು ಅರಿತಾಗಲೇ ಸಾರ್ಥಕತೆಯಾಗುವುದು.

ವಿದ್ಯಾರ್ಥಿಗಳು ದೇಶದ ಭವ್ಯ ಪರಂಪರೆಯ ಬಗ್ಗೆ ತಿಳಿದುಕೊಂಡಾಗ ಮಾತ್ರ ಇದರ ಮಹತ್ವ ಗೊತ್ತಾಗುತ್ತದೆ. ನಮಗೆ ನಮ್ಮ ಕುರಿತ ಅಭಿಮಾನದೊಂದಿಗೆ ದೇಶದ ಕುರಿತೂ ಭಕ್ತಿಯ ಅಭಿಮಾನ ಇರಬೇಕು.

ಪಥಸಂಚಲನ ನಡೆಸಿದ ಎಲ್ಲ ವಿದ್ಯಾರ್ಥಿಗಳೂ ಶೃದ್ಧೆಯಿಂದ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವುದು ಅವರ ಬದ್ಧತೆಯನ್ನು ಸೂಚಿಸುತ್ತದೆ. ಈ ಶಿಸ್ತು ಸದಾ ಅನುಕರಣೀಯವಾಗಲಿ ಎಂದು ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಎ ಕೋಟ್ಯಾನ್ ಹೇಳಿದರು. ಅವರು ಕಾಲೇಜಿನಲ್ಲಿ ಎಪ್ಪತ್ತೊಂಭತ್ತನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಪಥಸಂಚಲನವನ್ನು ನೆರವೇರಿಸಿ, ಮಾತನಾಡಿದರು.

ಭುವನೇಂದ್ರ ಕಾಲೇಜಿನ ಎನ್.ಸಿ.ಸಿ.ಎನ್.ಎಸ್.ಎಸ್., ರೇಂಜರ್ಸ್, ರೋವರ್ಸ್, ರೆಡ್ ಕ್ರಾಸ್ ಹಾಗೂ ಕ್ರೀಡಾ ವಿಭಾಗದ ವಿದ್ಯಾರ್ಥಿಗಳೆಲ್ಲರೂ ಪಥಸಂಚಲನದಲ್ಲಿ ಭಾಗಿಯಾದರು.

ಪ್ರಾಧ್ಯಾಪಕ ವರ್ಗ, ಸಿಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top