ಹೋಟೆಲ್‌ನಲ್ಲಿ ಜುಗಾರಿ ದಾಳಿ: 6 ಮಂದಿ ವಶಕ್ಕೆ; ನಾಲ್ವರು ಪರಾರಿ
RB NEWS
Bureau Report
ಹೋಟೆಲ್‌ನಲ್ಲಿ ಜುಗಾರಿ ದಾಳಿ: 6 ಮಂದಿ ವಶಕ್ಕೆ; ನಾಲ್ವರು ಪರಾರಿ
ಕಾರ್ಕಳ: ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಹೋಟೆಲ್ ಸನ್ಮಾನ್ ರೆಸಿಡೆನ್ಸಿಯಲ್ಲಿ ಹಣವನ್ನು ಪಣಕ್ಕಿಟ್ಟು ಇಸ್ಪೀಟು ಜುಗಾರಿ ನಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿ ದಾಳಿ ನಡೆಸಿದರು.
ದಾಳಿಯ ವೇಳೆ ಜುಗಾರಿ ಆಡುತ್ತಿದ್ದ ಸುಜೀತ್, ಅಭಿಮನ್ಯು, ಮಹೇಶ, ಧೀರಜ್, ನರೇಶ್ ಕುಮಾರ್ ಮತ್ತು ಪ್ರಶಾಂತರನ್ನು ವಶಕ್ಕೆ ಪಡೆಯಲಾಗಿದೆ. ಇನ್ನುಳಿದ ನಾಲ್ವರು ಆರೋಪಿಗಳಾದ ಯಶೋಧರ (ಅಣ್ಣು), ನೂರು ಮಹಮ್ಮದ್, ರವಿ ಶೆಟ್ಟಿ ಹಾಗೂ ಸತೀಶ್ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ.
ದಾಳಿಯ ಸಂದರ್ಭದಲ್ಲಿ ರೂ.16,350/- ನಗದು, ಇಸ್ಪೀಟ್ ಎಲೆಗಳು ಹಾಗೂ 7 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊಬೈಲ್‌ಗಳ ಅಂದಾಜು ಮೌಲ್ಯ ರೂ.17,000/- ಆಗಿದ್ದು, ಖುರ್ಚಿ ಹಾಗೂ ಇತರ ಪೀಠೋಪಕರಣಗಳ ಮೌಲ್ಯ ರೂ.10,500/- ಆಗಿರುತ್ತದೆ.
ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 62/2026 ರಂತೆ ಪ್ರಕರಣ ದಾಖಲಾಗಿದ್ದು, ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 79 ಮತ್ತು 80 ಹಾಗೂ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 112(1) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಬಂಧಿತರನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಹಾಗೂ ಜುಗಾರಿ ನಡೆಸಲು ಅವಕಾಶ ಮಾಡಿಕೊಟ್ಟ ಹೋಟೆಲ್ ಮಾಲೀಕರಿಗಾಗಿ ಪೊಲೀಸ್ ಇಲಾಖೆ ಹುಡುಕಾಟ ಮುಂದುವರಿಸಿದೆ.