ಹೊಸ ಹೆಜ್ಜೆ ಇಡುವಂತೆ ಪ್ರೇರಣೆ
ಸಂಪಾದಕೀಯ
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುದೀರ್ಘ ಅವಧಿಯ ಅನುಭವ ಹೊಂದಿದ್ದ ನನಗೆ ಅನಿರೀಕ್ಷಿತ ಬೆಳವಣಿಗೆಗಳು ಹೊಸ ಹೆಜ್ಜೆ ಇಡುವಂತೆ ಪ್ರೇರಣೆ ನೀಡಿದವು. ಅದರ ಫಲವಾಗಿ ಆರಂಭವಾದ ಆರ್ ಬಿ ನ್ಯೂಸ್ ಇಂದು ಹೆಮ್ಮೆಯಿಂದ ನಾಲ್ಕನೇ ವರ್ಷದ ಪಾದರ್ಪಣೆಯನ್ನು ಆಚರಿಸುತ್ತಿದೆ. ಇದು ಕೇವಲ ಒಂದು ಮಾಧ್ಯಮದ ವಾರ್ಷಿಕೋತ್ಸವವಲ್ಲ; ನಮ್ಮನ್ನು ನಂಬಿದ ಓದುಗರ ಮತ್ತು ಬೆನ್ನೆಲುಬಾಗಿ ನಿಂತ ಜಾಹೀರಾತುದಾರರ ವಿಶ್ವಾಸದ ಹಬ್ಬವಾಗಿದೆ.































