ಹೊಸ ಬೆಳಕು ಆಶ್ರಮಕ್ಕೆ ಬೆಳಕಾದ ಕಾರ್ಕಳ ರೋಟರಿ ಕ್ಲಬ್
ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ಇದರ ಆಶ್ರಯದಲ್ಲಿ ಹೊಸ ಬೆಳಕು ಆಶ್ರಮಕ್ಕೆ ದಾನಿಗಳ ನೆರವಿನಿಂದ ಒಂದು ಲಕ್ಷ ರೂಪಾಯಿಯ ಧನಸಹಾಯವನ್ನು ನೀಡಲಾಯಿತು.
ಅದೇ ಸಂದರ್ಭ ಡಯಾಪರ್, ಹಣ್ಣು ಹಂಪಲು ತಿಂಡಿ ತಿನಿಸುಗಳು ಮತ್ತು 50 ಕುರ್ಚಿಗಳನ್ನು ನೀಡಲಾಯಿತು.
ಹೊಸ ಬೆಳಕು ಆಶ್ರಮದ ವ್ಯವಸ್ಥಾಪಕಿ ತನುಲಾ ಅವರಿಗೆ ರೋಟರಿ ಜಿಲ್ಲಾ ಮಾಜಿ ಗವರ್ನರ್ ರೋ ಡಾಕ್ಟರ್ ಭರತೇಶ್ ಆದಿರಾಜರವರು ಒಂದು ಲಕ್ಷ ರೂಪಾಯಿ ಧನಸಹಾಯದೊಂದಿಗೆ ಎಲ್ಲಾ ಅಗತ್ಯ ವಸ್ತುಗಳನ್ನು ಹಸ್ತಾಂತರಿಸಲಾಯಿತು.
ರೋಟರಿ ಕ್ಲಬ್ಬಿನ ಅಧ್ಯಕ್ಷ ರೋ.ಇಕ್ಬಾಲ್ ಅಹಮದ್ ಕಾರ್ಯದರ್ಶಿ ಗಣೇಶ್ ಸಾಲ್ಯಾನ್, ಮಾಜಿ ಅಧ್ಯಕ್ಷರುಗಳಾದ ಶೈಲೇಂದ್ರ ರಾವ್, ಮೋಹನ್ ಪಡಿವಾಳ್, ಹರಿಪ್ರಕಾಶ್ ಶೆಟ್ಟಿ , ಹಿತೈಷಿ ಕಾರ್ಕಳ ಇದರ ಅಧ್ಯಕ್ಷ ಗಣಪತಿ ಕಾಮತ್, ಉದ್ಯಮಿಗಳಾದ ಅರುಣ್ ಪುರಾಣಿಕ್, ಚೇತನ್ ನಾಯಕ್ ಹಾಗೂ ಚಂದ್ರಶೇಖರ್ ಮಾಡ, ಮಾಜಿ ಸಹಾಯಕ ಗವರ್ನರ್ ಶೈಲೇಂದ್ರ ರಾವ್, ಹರಿಪ್ರಕಾಶ್ ಶೆಟ್ಟಿ ,ವೃಂದಾ ಶೆಟ್ಟಿ, ಮೋಹನ್ ಪಡಿವಾಳ, ಸುವರ್ಣ ನಾಯಕ್ ,ಮಮತಾ ಶೆಟ್ಟಿ ಮತ್ತು ಬಾಲಕೃಷ್ಣ ದೇವಾಡಿಗ ಉಪಸ್ಥಿತರಿದ್ದರು.

































