ಹೊಸೂರು ಬಾಗಲೂರು ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ರಥೋತ್ಸವ….
ಬೆಂಗಳೂರು : ತಮಿಳುನಾಡು ಹೊಸೂರು ಬಾಗಲೂರು ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ವಾರ್ಷಿಕ ಜಾತ್ರಮಹೋತ್ಸವದ ಸಲುವಾಗಿ ಜರುಗಿದ್ದ ರಥೋತ್ಸವ.
ಬೆಂಗಳೂರಿನಿಂದ 42 ಕಿ.ಮೀ ದೂರದಲ್ಲಿ ಇರುವಂತಹ ಬಾಗಲೂರು ಕೋಟೆ ಮಾರಿಯಮ್ಮ ದೇವಸ್ಥಾನವು ಸಂಪೂರ್ಣ ಶಿಲಾಮಯವಾಗಿ ಕಳೆದ ಕೆಲ ತಿಂಗಳ ಹಿಂದೆಯಷ್ಟೇ ನಡೆದ ಬಳಿಕ ಜರುಗಿದ್ದ ರಥೋತ್ಸವ ಇದಾಗಿದೆ.


ಬಾಬುರಾವ್ ಪಲ್ಲಕ್ಕಿ ಉತ್ಸವ….
ಹಲವು ವರ್ಷಗಳ ಹಿಂದೆ ಬಾಗಲೂರು ಕೋಟೆ ಶ್ರೀ ಮಾರಿಯಮ್ಮನಿಗೆ ಗುಡಿಯೊಂದನ್ನು ನಿರ್ಮಿಸಿ ಪ್ರತಿದಿನ ಪೂಜಾ ಕೈಂಕರ್ಯದ ಜೊತೆಗೆ 2.5 ಎಕರೆ ಪ್ರದೇಶ ಭೂಮಿಯನ್ನು ದಾನ ನೀಡಿದವರು ಕಾಸರಗೋಡು ಸಿರಿಬಾಗಿಲು ಬಾಬುರಾವ್ ಆಗಿದ್ದಾರೆ.
ಭೂದಾನ ಪತ್ರದ ಒಡಂಬಡಿಕೆಯಲ್ಲಿ ದಾಖಲಾಗಿರುವಂತೆ ವಾರ್ಷಿಕ ಮಹೋತ್ಸವದಲ್ಲಿ ನಡೆಯಲಿರುವ ಪಲ್ಲಕ್ಕಿ ಪೂಜೆಯು ಬಾಬುರಾವ್ ಹೆಸರಿನಲ್ಲಿ ನಡೆಸಬೇಕು ಎಂದು ನಮೂದಿಸಲಾಗಿದೆ.
ಅದೇ ಕಾರಣದಿಂದಾಗಿ ಬಾಬುರಾವ್ ಪಲ್ಲಕ್ಕಿ ಪೂಜೆ ಪ್ರಸ್ತುತ ವರ್ಷದ ವರೆಗೆ ನಡೆಯುತ್ತಾ ಬಂದಿರುವುದು ವಿಶೇಷವಾಗಿದೆ.






































