ಹೆಬ್ರಿ : ‘ಮತ್ತಾವು’ ಬಹುವರ್ಷ ಸಮಸ್ಸೆಗೆ ಮುಕ್ತಿ : ಸೇತುವೆ ನಿರ್ಮಾಣಕ್ಕೆ ರಾಜ್ಯ ಕಾಂಗ್ರೆಸ್ ಸರಕಾರದಿಂದ ರೂ.2 ಕೋಟಿ



ಕಾರ್ಕಳ : ವಿಧಾನಸಭಾ ಕ್ಷೇತ್ರದ ಹೆಬ್ರಿ ತಾಲೂಕಿನ ಕಬ್ಬಿನಾಲೆ ಮತ್ತಾವು ಸೇತುವೆ ನಿರ್ಮಾಣಕ್ಕೆ ಕೊನೆಗೂ ಮುಕ್ತಿ ದೊರಕಿದೆ. ಕಳೆದ 20 ವರ್ಷಗಳಿಂದ ಕಬ್ಬಿನಾಲೆ ಮತ್ತಾವು ಜನರ ಬಹುಬೇಡಿಕೆಯ ಮತ್ತಾವು ಸೇತುವೆಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಿಂದ ಎರಡು ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ಅನುದಾನ ಬಿಡುಗಡೆಯಾದ ಹಿನ್ನೆಲೆಯಲ್ಲಿ ಉದಯ ಶೆಟ್ಟಿ ಮುನಿಯಾಲು ಅವರು ಸ್ಥಳೀಯರನ್ನು ಭೇಟಿಯಾಗಿ ಅತೀ ಶೀಘ್ರದಲ್ಲೇ ಸೇತುವೆ ಕಾಮಗಾರಿಯನ್ನು ಆರಂಭಿಸಿ ಜನರ ಉಪಯೋಗಕ್ಕೆ ಒದಗಿಸಲಾಗುವುದು ಎಂದರು.
ಕಾಂಗ್ರೆಸ್ ಸರಕಾರವು ಜನತೆಗೆ ನೀಡಿದ ಹಾಗೂ ನೀಡುವ ಭರವಸೆಗಳು ಎಂದಿಗೂ ಹುಸಿಯಾಗಲ್ಲ. ಭರವಸೆಯೂ ಜನತೆಯ ಆಶೋತ್ತರ ಈಡೇರಿಸುತ್ತಾ ಬಂದಿದೆ. ಮುಂದೆಯೂ ಈಡೇರಿಸಲಿದೆ. ಭರವಸೆಯೂ ಜನತೆಯನ್ನು ಹೊಸ ದಿಕ್ಕಿನತ್ತ ಮುಖಮಾಡಿದೆ ಎಂದಿದ್ದಾರೆ.
ಪೆಬ್ರವರಿ ತಿಂಗಳಿನಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೋಳಿಯವರು ಉಡುಪಿ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಮುನಿಯಾಲು ಉದಯ ಶೆಟ್ಟಿ ಮುನಿಯಾಲು ಅವರು ಈ ಬಗ್ಗೆ ಸಚಿವರಲ್ಲಿ ಮನವಿ ಮಾಡಿದಾಗ ಸೂಕ್ತವಾಗಿ ಸ್ಪಂದಿಸಿದ ಸಚಿವರು ಕೂಡಲೇ ಅರಣ್ಯ ಇಲಾಖೆಯವರನ್ನು ಕರೆಯಿಸಿ, ಸಭೆ ನಡೆಸಿ ಅರಣ್ಯ ಇಲಾಖೆಯ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿ ಸರಕಾರದ ಗಮನಕ್ಕೆ ತಂದು ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.

ಸಚಿವರ ಸೂಕ್ತ ಸ್ಪಂದನೆಯ ಪರಿಣಾಮವಾಗಿ ಎರಡು ದಶಕಗಳ ಸಮಸ್ಯೆಗೆ ಮುಕ್ತಿದೊರೆತಾಗಿದೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮತ್ತಾವು ಕಾಲು ಸಂಕಕ್ಕೆ ಸೇತುವೆ ನಿರ್ಮಾಣ ಕಾಮಗಾರಿಗೆ ಹಣ ಮಂಜೂರು ಮಾಡುವ ಮೂಲಕ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವು ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸಿದೆ. ಕಾರ್ಕಳದ ಗ್ರಾಮೀಣ ಭಾಗದ ರಸ್ತೆ ಸೇತುವೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ ಭಟ್, ಮುಖಂಡರಾದ ಚಂದ್ರಶೇಖರ ಬಾಯಾರಿ ಮುಂತಾದವರು ಉಪಸ್ಥಿತರಿದ್ದರು.




































