ವರದಿ: ಶ್ರೀಕಾಂತ ಕುಚ್ಚೂರು
ಹೆಬ್ರಿ : ಕುಸಿಯುವ ಭೀತಿಯಲ್ಲಿ ಸೇತುವೆ
ಹೆಬ್ರಿ: ಶ್ರೀ ಕಾಡ್ಯಸ್ಥಾನ ಕಾನ್ಬೆಟ್ಟು ಪ್ರಮುಖ ರಸ್ತೆ ಬಯಲು ಮನೆ ಹತ್ತಿರ ಮಳೆ ಹಾನಿಯಿಂದಾಗಿ ರಸ್ತೆಯ ಮಣ್ಣುಗಳು ಜರಿದುಹೋಗಿದೆ. ಪಕ್ಕದಲ್ಲಿ ಇರುವ ಕಿರಿದಾದ ಸೇತುವೆಯ ಅಡಿಪಾಯ ಕಲ್ಲುಗಳು ಶಿಥಿಲಗೊಂಡ ಕಾರಣ ಸೇತುವೆ ಕುಸಿದು ಬೀಳುವ ಭಯವು ನಾಗರಿಕರಿಗೆ ಕಾಡುತ್ತಿದೆ.
ಮಾಹಿತಿ ದೊರೆತ ಬೆನ್ನಲ್ಲೇ ಹೆಬ್ರಿ ತಾಲೂಕು ಕಾರ್ಯನಿರ್ವಣಾಧಿಕಾರಿ ಶಶಿಧರ್ ಕೆ ಜಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ
ಸಂಬಂಧಪಟ್ಟ ಇಂಜಿನಿಯರಿಗೆ ಮಾಹಿತಿ ರವಾಯಿಸಿ ಸೇತುವೆ ಮತ್ತು ರಸ್ತೆಯ ಹಾನಿಗೆ ದುರಸ್ತಿಗೆ ಸೂಚಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸ್ಥಳೀಯರಾದ ಬಾಲಕೃಷ್ಣ ಶೆಟ್ಟಿ ಮೇಲ್ಮನೆ, ಉದಯ್ ಶೆಟ್ಟಿ ಕೆಳಮನೆ, ಉಷಾಶೆಟ್ಟಿ,ಜಯರಾಮ್ ಶೆಟ್ಟಿ, ಸದಾಶಿವ ಶೆಟ್ಟಿ ಮೇಲ್ಮನೆ ಉಪಸ್ಥಿತರಿದ್ದರು.




































