ವರದಿ : ರಕ್ಷಿತ್ ಕುಮಾರ್ ಹೆಬ್ರಿ
ಹೆಬ್ರಿ: ಹೆಬ್ರಿ ತಾಲೂಕು ರೂಪುಗೊಂಡು ಹಲವು ವರ್ಷಗಳು ಸಂದಿದೆ. ಹೆಬ್ರಿ ತಾಲೂಕು ಸಂಪೂರ್ಣ ಆಡಳಿ ವ್ಯವಸ್ಥೆ ಇನ್ನೂ ಜಾರಿಗೊಂಡಿಲ್ಲ. ಕಾರ್ಕಳ ತಾಲೂಕು ಕೇಂದ್ರವಾಗಿಟ್ಟುಕೊಂಡು ಇನ್ನೂ ಆಡಳಿತ ನಡೆಯುತ್ತಿದೆ ಎಂಬುವುದು ಲೋಕಸತ್ಯ.

ಹೀಗಾಗಿ ಹೆಬ್ರಿ ತಾಲೂಕಿನ ಜನತೆ ತಮ್ಮ ಪೂರ್ಣ ಪ್ರಮಾಣದ ಕೆಲಸ ಕಾರ್ಯಗಳಿಗೆ ಕಾರ್ಕಳಕ್ಕೆ ಅಲೆಯಬೇಕಾಗಿದೆ.
ಇದರಲ್ಲಿ ಆರೋಗ್ಯ ಇಲಾಖೆ ಹೊರತಲ್ಲ…

ಹೆಬ್ರಿ ತಾಲೂಕಿನ ಬಹುತೇಕ ಪ್ರದೇಶ ನಕ್ಸಲ್ ಪೀಡಿತವೆಂದು ಗುರುತಿಸಲಾಗಿದೆ. ಜಿಲ್ಲೆಗಳನ್ನು ಬೇರ್ಪಡಿಸುವ ಗಡಿಭಾಗ ಹೆಬ್ರಿಯೂ ಆಗಿದೆ. ಶಿವಮೊಗ್ಗದ ಆಗುಂಬೆಯಿಂದ ಉಡುಪಿ ನಡುವೆ ಕಾಣಸಿಗುವ ಪ್ರದೇಶ ಹೆಬ್ರಿ.
ಹೆಬ್ರಿಯಲ್ಲಿ ಸಮುದಾಯ ಆಸ್ಪತ್ರೆಯೊಂದಿದೆ. ಇಲ್ಲಿ ಅತ್ಯಾಧುನಿಕ ವ್ಯವಸ್ಥೆಗಳಲ್ಲಿ ಒಂದಾದ ಸ್ಕ್ಯಾನಿಂಗ್ ಸೆಂಟರ್ ಕೊರತೆ ಎದ್ದು ಕಾಣುತ್ತಿದೆ. ಆಧುನಿಕ ವೈದ್ಯ ತಪಾಸಣೆಯ ಸಂದರ್ಭದಲ್ಲಿ ಬಹುತೇಕವಾಗಿ ವೈದ್ಯರು ಸ್ಕ್ಯಾನಿಂಗ್ ಮಾಡುವಂತೆ ಸಲಹೆ ಸೂಚನೆ ನೀಡುತ್ತಾರೆ. ಅಂತಹ ಸಪದರ್ಭಗಳಲ್ಲಿ ರೋಗಿಗಳು ಕಾರ್ಕಳ, ಬ್ರಹ್ಮಾವರ, ಉಡುಪಿ, ಮಣಿಪಾಲ….ಇತ್ಯಾದಿಯ ಆಸ್ಪತ್ರೆಗಳಿಗೆ ಹೋಗಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳಬೇಕಾದ ಅನಿವಾರ್ಯ ಎದುರಾಗುತ್ತದೆ.
ಒಂದೆಡೆಯಲ್ಲಿ ಸಮಯ ವ್ಯರ್ಥ ಜೊತೆಗೆ ದುಂದು ವೆಚ್ಚ ಮಾಡಿಕೊಳ್ಳಬೇಕಾದ ಪ್ರಮೇಯ ಎದುರಾಗುತ್ತದೆ.
ಹೆಬ್ರಿ ಗ್ರಾಮವೊಂದಲ್ಲಿ 10ಕ್ಕೂ ಅಧಿಕ ಖಾಸಗಿ ಕ್ಲಿನಿಕ್ಗಳು, ಲ್ಯಾಬ್ಗಳು,ಸಮುದಾಯ ಆರೋಗ್ಯ ಕೇಂದ್ರ, 1 ಖಾಸಗಿ ಆಸ್ಪತ್ರೆಗಳುಕಾರ್ಯನಿರ್ವಹಿಸುತ್ತದೆ.
ಹೆಬ್ರಿ ಗ್ರಾಮದಲ್ಲಿರುವ ಸಬ್ ಸೆಂಟರ್ಗಳು
ತಾಲೂಕು ಕೇಂದ್ರ ಭಾಗವಾಗಿರುವ ಹೆಬ್ರಿ, ಚಾರಾ, ಶಿವಪುರ, ಕುಚ್ಚೂರು, ಬೇಳಂಜೆ, ಸೋಮೇಶ್ವರ, ಸೀತಾನದಿ,ಮುದ್ರಾಡಿ, ಇಲ್ಲಿ ಬೇರೆ ಬೇರೆ ಗ್ರಾಮಗಳಿಂದ ರೋಗಿಗಳು ಚಿಕಿತ್ಸೆಗಳಿಗಾಗಿ ಬಂದರೆ ಅವರಿಗೆ ಬೇರೆ ಊರಿಗೆ ಪ್ರಯಾಣಿಸಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಹೆಬ್ರಿ ಗ್ರಾಮವೊಂದರಲ್ಲಿಯೇ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ವಾಸವಾಗಿರುತ್ತಾರೆ.
ಸ್ಕ್ಯಾನಿಂಗ್ ಸೆಂಟರ್ ತುರ್ತು ಅಗತ್ಯ

ಹೆಬ್ರಿ ತಾಲೂಕು ಕೇಂದ್ರವಾಗಿ ಮಾರ್ಪಟ್ಟಿದೆ. ಹೆಬ್ರಿ ಸಮುದಾಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಗತ್ಯವಾದ ಮೂಲ ಸೌಕರ್ಯ ಇಲ್ಲದೇ ಅಲೆದಾಡಬೇಕಾದ ಪ್ರಸಂಗ ಎದುರಾಗಿದೆ. ವಿಕಾಸದತ್ತ ಸಾಗುತ್ತಿರುವ ಹೆಬ್ರಿ ಸಮುದಾಯ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೆಂಟರ್ ತೆರೆಯುವುದರಿಂದ ಅದೆಷ್ಟೋ ಮಂದಿಯ ಬದುಕಿಗೆ ಬೆಳಕಾಗಲಿದೆ.
–ರಮೇಶ್ ನಾಡ್ಪಾಲು




































