ಹೆತ್ತ ತಾಯಿ, ಹೊತ್ತ ಭೂಮಿ, ಗುರು ನೀಡಿದ ವಿದ್ಯೆ ಮರೆಯಬಾರದು
ಮಂಗಳೂರು : ಹೆತ್ತ ತಾಯಿಯನ್ನು ಹೊತ್ತ ಭೂಮಿ ಗುರುಕೊಟ್ಟ ವಿದ್ಯೆಯನ್ನು ಎಂದಿಗೂ ಮರೆಯಬಾರದು. ಹದಿಹರೆಯೂ ಮಾನವನ ಬದುಕಿನ ಮಹತ್ವದ ಘಟ್ಟವಾಗಿದೆ. ಉತ್ತಮ ನಿರ್ಧಾರಗಳನ್ನು ಈ ಸಂದರ್ಭದಲ್ಲಿ ಕೈಗೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ಉರ್ವ ಕೆನರಾ ಹೈಸ್ಕೂಲ್ ಗೌರವಧ್ಯಕ್ಷ ರಂಗನಾಥ್ ಭಟ್ ಹೇಳಿದರು.
ಉರ್ವ ಕೆನರಾ ಸ್ಕೂಲ್ ನ ವಿದ್ಯಾರ್ಥಿಗಳ ಪೋಷಕರವತಿಯಿಂದ ಆಯೋಜಿಸಿದ ಗುರುವಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಆಡಳಿತ ಮಂಡಳಿಯ ಯೋಗೀಶ್ ಕಾಮತ್ ಮಾತನಾಡಿ, ಪ್ರತಿವರ್ಷ ಪ್ರತಿಯೊಂದು ಶಿಕ್ಷಣ ಸಂಸ್ಥೆಯಿಂದ ಒಂದು ತರಗತಿಯ ವಿದ್ಯಾರ್ಥಿಗಳ ಹೊರ ಹೋದರೆ, ಮತ್ತೊಂದು ತರಗತಿಗೆ ಸೇರ್ಪಡೆಗೊಳ್ಳುವುದು ಸಹಜವಾಗಿದೆ. ಹೊರ ಹೋಗುವ ವಿದ್ಯಾರ್ಥಿಗಳ ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ಎದುರಿಸಿ ಉತ್ತಮ ಶ್ರೇಣಿಯೊಂದಿಗೆ ತೇರ್ಗಡೆಯಾಗಿ ಸಮಾಜಕ್ಕೆ ಮಾದರಿಯಾದಾಗ ಮಾತ್ರ ಆತ ಕಲಿತ ಶಿಕ್ಷಣ ಸಂಸ್ಥೆ ಹೆಗ್ಗಳಿಕೆಗೆ ಪಾತ್ರವಾಗುತ್ತದೆ ಎಂದರು.
ಪೋಷಕರ ಪ್ರತಿನಿಧಿಗಳಾದ ಭಾರತಿ ವೇಣುಗೋಪಾಲ್ ಆರ್.ಬಿ., ಜಗದೀಶ್ ಚಂದ್ರ, ವಿಜೇತ ವಿಕ್ರಂ ಪ್ರಭು, ಅಮರ್ ನಾಥ್ ಕೆ ಇವರು ಕಾರ್ಯಕ್ರಮವನ್ನು ಆಯೋಜಿಸಿದ್ದು ಎಲ್ಲಾ ಪೋಷಕರ ಸಹಕಾರ ನೀಡಿದರು.
ಜ್ಯೋತಿ ಮತ್ತು ತಂಡದವರಿಂದ ಪ್ರಾರ್ಥನೆ ನೆರವೇರಿತು.
ಸಾಂಸ್ಕೃತಿಕ ಕಾರ್ಯಕ್ರಮಗಳು ಹಂಸಿಕ ಮತ್ತು ರೀತಿಶ ತಂಡದವರಿಂದ ಜರುಗಿತು. ವೀಣಾ ನಿರೂಪಿಸಿದರು.
ಕೆನರಾ ಶಾಲೆಯ ಮುಖ್ಯೋಪಾಧ್ಯಾಯನಿಯರಾದ ಲಲನಾ ಜೆ. ಶೆಣೈ ಮತ್ತು ಇಂದುಮತಿ, ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ವಿವರ….
ಅತಿಥಿಗಳ ಸ್ವಾಗತ- ವಿದ್ಯಾರ್ಥಿಗಳ ಜಾಗಟೆ ಬಾರಿಸಿ ಶಂಖನಾದದ ಮೂಲಕ ಶಿಕ್ಷಕ ವರ್ಗದವರನ್ನು ಪ್ರೀತಿಯಿಂದ ಬರಮಾಡಿಕೊಂಡರು.
ವಿದ್ಯಾರ್ಥಿಗಳ ತಾಯಂದಿರು ಶಿಕ್ಷಕಿಯರಿಗೆ ಅರಸಿನ, ಕುಂಕುಮ ಹಚ್ಚಿ ಹೂ ಕೊಟ್ಟು ಪ್ರೀತಿಯಿಂದ ಸ್ವಾಗತಿಸಿದರು.
ಅಗಮಿಸಿದ ಅತಿಥಿಗಳಿಗೆ ಫಲ, ಪುಷ್ಪ ,ಶಾಲು ಹಾಗೂ ಪ್ರೀತಿಯ ನೆನಪಿನ ಕಾಣೆಕೆ ನೀಡಿ ಪೋಷಕರೆಲ್ಲರೂ ಸನ್ಮಾನಿಸಿದರು.
ನಿವೃತ್ತಿ ಹೊಂದುತ್ತಿರುವ ನಿವೃತ್ತ ಶಿಕ್ಷಕರಾದ ಎಡ್ರಿನ್ ಅವರನ್ನು ಸಕಲ ಗೌರವದೊಂದಿಗೆ ಬೀಳ್ಕೊಡುಗೆ ನೀಡಿದರು. ಯಶ್ ರಾಜ್ ವಂದನಾರ್ಪಣೆಗೈದರು.
ಇದೇ ಸಂದರ್ಭದಲ್ಲಿ ಸಹಭೋಜನ ಏರ್ಪಡಿಸಲಾಯಿತು





































