ಹೆಚ್ಚುತ್ತಿರುವ ದಲಿತ ದೌರ್ಜನ್ಯ, ಕೊಲೆ ಕೃತ್ಯಗಳು : ನ್ಯಾಯೋಚಿತ ಹಕ್ಕಿಗಾಗಿ ಬೀದಿಗಿಳಿದ ದಲಿತರು
ಉಡುಪಿ : ದಲಿತ ಹಕ್ಕುಗಳ ಸಮಿತಿ (DHS) ಉಡುಪಿ ಸಂಚಾಲನ ಸಮಿತಿ ನೇತೃತ್ವದಲ್ಲಿ ರಾಜ್ಯ ಸಮಿತಿ ಕರೆಯ ಮೇರೆಗೆ ಕರ್ನಾಟಕ ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಲಿತರ ಹತ್ಯೆ, ದೇವಾಲಯ ಪ್ರವೇಶ ನಿರಾಕರಣೆ, ದಲಿತ ಮಹಿಳೆಯರ ಅತ್ಯಾಚಾರ, ದಲಿತರಿಗೆ ನೀಡುತ್ತಿರುವ ಕಿರುಕುಳ ಖಂಡಿಸಿ ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಅಪಾರ ಜಿಲ್ಲಾಧಿಕಾರಿ ಮುಖಾಂತರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯವರಿಗೆ ಮನವಿ ನೀಡಲಾಯಿತು.
ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು ಪ್ರತಿಭಟನಾ ಸಭೆ ಉದ್ದೇಶಿಸಿ ಮಾತಾನಾಡಿ, ಮಂಡ್ಯದ ಕೆ.ಆರ್.ಪೇಟೆಯಲ್ಲಿ ದಲಿತ ಜಯಕುಮಾರ್ ಕೊಲೆ ಕೃತ್ಯದಲ್ಲಿ ರೌಡಿ ಶೀಟರ್ ಅನಿಲ್ ಕುಮಾರ್ ನೊಂದಿಗೆ ಇಡೀ ಜಿಲ್ಲಾಡಳಿತವೇ ಶಾಮೀಲಾಗಿತ್ತು. ಕೃಷಿಕಾಯಕ ನಡೆಸುತ್ತಿದ್ದ ಜಯಕುಮಾರ್ ಕೃಷಿಭೂಮಿ ಸಮತಟ್ಟು ಗೊಳಿಸುವ ಸಂದರ್ಭದಲ್ಲಿ ಮೇ 15ರಂದು ರೌಡಿ ಶೀಟರ್ ಅನಿಲ್ ಕುಮಾರ್ ಜಮೀನಿಗೆ ಅಕ್ರಮ ಪ್ರವೇಶಗೈದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆಯೊಡ್ಡಿದ್ದನು.

ಈ ಕುರಿತು ಜಯಕುಮಾರ್ ಹಾಗೂ ಅವರ ಪತ್ನಿ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದರೂ, ಸರಕಾತ್ಮಕವಾಗಿ ಸ್ಪಂದಿಸದೇ ಹೋದಿದರಿಂದ ಮೇ 17ರಂದು ಜಯಕುಮಾರ್ ಅವರನ್ನು ಅವರ ಜಮೀನಿನಲ್ಲಿ ಕೊಂದು ಸುಟ್ಟು ಹಾಕಿರುವ ಕೃತ್ಯದಲ್ಲಿ ರೌಡಿ ಶೀಟರ್ ಅನಿಲ್ ಕುಮಾರ್ ನೇರ ಭಾಗಿಯಾಗಿದ್ದನು. ಇಷ್ಟೆಲ್ಲಾ ಘಟನಾವಳಿ ನಡೆದಿದ್ದರೂ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕಾದ ಪೊಲೀಸ್ ಇಲಾಖೆ ಕೊಲೆಗೀಡಾದ ಜಯಕುಮಾರ್ ಅವರ ಪತ್ನಿಯಲ್ಲಿ ಖಾಲಿ ಕಾಗದಗಳಿಗೆ ಸಹಿ( ಹೆಬ್ಬೆಟ್ಟು) ಜಯಕುಮಾರ್ ಆತ್ಮಹತ್ಯೆಗೈದಿದ್ದಾರೆಂದು ಪ್ರಕರಣ ತಿರುಚುವ ಯತ್ನ ನಡೆಸಲಾಗಿದೆ ಎಂದರು.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಬನವಾಸಿ ಗ್ರಾಮದ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಮತ್ತು ದೇವಸ್ಥಾನ ಪ್ರವೇಶ ನಿರಾಕರಿಸಿದ್ದು ಜನತೆ ನಾಚಿಕೆ ಪಡುವಂತಾಗಿದೆ.ಬಿಡದಿ ಹೋಬಳಿ, ಬದ್ದರಾಪುರ ಗ್ರಾಮದ ಬಡಾ ಕೂಲಿಕಾರ ಕುಟುಂಬದ ದಲಿತ ಬಾಲಕಿ ಯನ್ನು ಆತ್ಯಾಚಾರ ಮಾಡಿ ಕೊಲೆ ಗೈದಿರುತ್ತಾರೆ ಇದನ್ನು ಪೋಲಿಸ್ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಮುಚ್ಚಿ ಹಾಕಲು ಪ್ರಭಾವಿ ವ್ಯಕ್ತಿ ಗಳು ಪ್ರಯತ್ನಿಸಿದರು.ಅದೇ ರೀತಿ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕವಣಗಾಲಿ ದೇವಾಲಯ ದಲಿತರಿಗೆ ಪ್ರವೇಶ ನಿರಾಕರಣೆ, ಮತ್ತು ಕೊಲ್ಲೂರು ಪ್ರದೇಶದಲ್ಲಿ ದಲಿತ ಮಹಿಳೆಯ ಮನೆಯನ್ನು ಇಲ್ಲದ ಯಾರು ಇಲ್ಲದ ಸಮಯದಲ್ಲಿ ಕೆಡವಿ ಜಾಗ ಆಕ್ರಮಣ ಮಾಡಲು ಮುಂದಾಗಿರುವುದು ಸಹಿತ ಈ ಎಲ್ಲಾ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಬಂಧಿಸಿ, ಪ್ತಜಾಪ್ರಭುತ್ವ ರಾಷ್ಟ್ರ ದಲ್ಲಿ ದಲಿತ ಸಮುದಾಯಕ್ಕಾಗಿ ನ್ಯಾಯ ಒದಗಿಸುವಂತೆ ಅವರು ಒತ್ತಾಯಿಸಿದರು.
ಸಹಸಂಚಾಲಕ ರವಿ.ವಿ.ಎಮ್, ಸಮಿತಿ ಪದಾಧಿಕಾರಿಗಳಾದ ರಾಮ ಕಾರ್ಕಡ,ನಾಗರತ್ನ ನಾಡ, ಶಾರದ, ನಾಗರತ್ನ ಆರ್, ರಂಗನಾಥ ಸುವರ್ಣ,ಮನೋಜ್,ಸುಶೀಲ,ಪೂರ್ಣಿಮಾ ಬಳ್ಕೂರು,ಅಣಪ್ಪ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ,ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಡುಪಿ ಜಿಲ್ಲಾ ಹಂಚು ಕಾರ್ಮಿಕ ಸಂಘದ ಕಾರ್ಯದರ್ಶಿ ಎಚ್.ನರಸಿಂಹ,ಸಿಐಟಿಯು ಕುಂದಾಪುರ ತಾಲೂಕು ಸಂಚಾಲಕಾರದ ಚಂದ್ರಶೇಖರ, ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್. ಎಸ್.ಕಾಂಚನ್ ಉಪಸ್ಥಿತರಿದ್ದರು.


























