ಹಿರಿಯಡ್ಕ : ಖಾಸಗಿ ಬಸ್ಸು ಪಿಕಪ್ ಜೀಪು ಡಿಕ್ಕಿ; ಇಬ್ಬರು ಮೃತ್ಯು

ಇಬ್ಬರು ಸಾವು
ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಕಪ್ ಸಹಪ್ರಯಾಣಿಕ ಕುಂದಾಪುರ 75 ಉಳ್ಳೂರು ರಾಘವೇಂದ್ರ ದೇವಾಡಿಗ (41) ಎಂಬವರು ಘಟನಾ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಪಿಕಪ್ ಚಾಲಕ ಕೋಣಿಮನೆ ಅಚ್ಚುತ(55) ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ.
ಕಾರ್ಕಳ : ಉಡುಪಿಯಿಂದ ಹಿರಿಯಡ್ಕ ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸು ಹಾಗೂ ಪಿಕಪ್ ಜೀಪು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಘಟನೆ ಹಿರಿಯಡ್ಕ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಎದುರುಗಡೆ ಸಂಭವಿಸಿದೆ.
ಎ.14 ಸಾಯಂಕಾಲ 4 15 ವೇಳೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಅಜ್ಜರಕಾಡಿನ ಉಡುಪಿ ಜಿಲ್ಲಾ ಸರಕಾರಿಗೆ ದಾಖಲಿಸಲಾಗಿದೆ.
ಅಪಘಾತದ ಕುರಿತು 108ಕ್ಕೆ ಕರೆ ಬಂದಿದ್ದು, ಅದರ ಹಿನ್ನಲ್ಲೆಯಲ್ಲಿ ಘಟನಾ ಸ್ಥಳಕ್ಕೆ 108 ಅಂಬುಲೆನ್ಸ್ ತೆರಳಿತು. ಅಂಬುಲೆನ್ಸ್ ಸಿಬ್ಬಂದಿ ರಾಜೇಶ್ ನಾಯಕ್ ತಮ್ಮ ಕರ್ತವ್ಯ ನಿಷ್ಠೆ ಮೆರೆದು ಗಂಭೀರ ಸ್ಥಿತಿಯಲ್ಲಿದ್ದ ಗಾಯಾಳುಗಳನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.


























