ಹಿರಿಯಂಗಡಿ ರುದ್ರಭೂಮಿಯಲ್ಲಿ ಅಗ್ನಿ ಅವಘಡ: ಅಪಾರ ಸೊತ್ತು ರಕ್ಷಣೆ

Picture of RB NEWS

RB NEWS

Bureau Report

ಹಿರಿಯಂಗಡಿ ರುದ್ರಭೂಮಿಯಲ್ಲಿ ಅಗ್ನಿ ಅವಘಡ: ಅಪಾರ ಸೊತ್ತು ರಕ್ಷಣೆ


ಕಾರ್ಕಳ: ಹಿರಿಯಂಗಡಿ ಹಿಂದು ರುದ್ರಭೂಮಿಯಲ್ಲಿ ಸಂಗ್ರಹಿಸಿದ್ದ ಮರದ ವಿವಿಧ ಆಕಾರದ ಪರಿಕರಗಳಿಗೆ ಭಾನುವಾರ ಮಧ್ಯಾಹ್ನ ಬೆಂಕಿ ತಗುಲಿದ ಪರಿಣಾಮ ಅವುಗಳು ಸುಟ್ಟು ಕರಕಲಾಗಿವೆ.
ಬೆಂಕಿಯ ಜ್ವಾಲೆಗಳು ಪಕ್ಕದಲ್ಲಿ ನಿಲುಗಡೆಗೊಳಿಸಿದ್ದ ಶವಸಂಸ್ಕಾರ ವಾಹನಕ್ಕೂ ಸ್ವಲ್ಪ ಪ್ರಮಾಣದಲ್ಲಿ ತಗುಲಿದರೂ, ಸಮಯೋಚಿತವಾಗಿ ಸ್ಥಳಕ್ಕೆ ಧಾವಿಸಿದ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳ ತ್ವರಿತ ಕಾರ್ಯಾಚರಣೆಯಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆಯೆಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣವೇ ಅಗ್ನಿಶಾಮಕ ದಳದ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್ ಅವರ ನೇತೃತ್ವದಲ್ಲಿ ಸಹಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳಾದ ರೂಪೇಶ್, ಚಾಲಕ ಆಲ್ವಿನ್, ದಿನೇಶ್ ಮತ್ತು ಭೀಮಪ್ಪ ಅವರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಅಪಾರ ಸೊತ್ತುಗಳನ್ನು ರಕ್ಷಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top