ಹಿಮ್ಮಖವಾಗಿ ಚಲಿಸಿದ ಕೆ ಎಸ್ ಆರ್ ಟಿ ಸಿ ಬಸ್ಸು : ಐವರು ದಾರುಣ ಮೃತ್ಯು

Picture of RB NEWS

RB NEWS

Bureau Report

ತಲಪ್ಪಾಡಿ: ಕೇರಳ-ಕರ್ನಾಟಕ ಗಡಿಭಾಗವಾದ ತಲಪ್ಪಾಡಿ ಎಂಬಲ್ಲಿ ಕಾಸರಗೋಡಿನತ್ತ ಸಾಗುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ ಏಕಾಏಕಿಯಾಗಿ ಹಿಮ್ಮಖವಾಗಿ  ಚಲಿಸಿದ ಪರಿಣಾಮವಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದಿದೆ. ಘಟನಾ  ಸ್ಥಳದಲ್ಲಿ ಐವರು ಸಾವನ್ನಪ್ಪಿದ್ದ  ಘಟನೆಯು ಗುರುವಾರ ಮಧ್ಯಾಹ್ನ  ಸಂಭವಿಸಿದೆ.


ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ನಾಲ್ವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ಮೃತರೆಲ್ಲರೂ ಒಂದೇ ಕುಟುಂಬದವರು ಎಂದು ಪೊಲೀಸರು ದೃಢಪಡಿಸಿದ್ದಾರೆ.

ಇದಲ್ಲದೆ, ಒಂದು ಮಗು ಕೂಡ ಪ್ರಾಣ ಕಳೆದುಕೊಂಡಿದೆ.  ಬಸ್ ಆಟೋ ರಿಕ್ಷಾಕ್ಕೂ ಡಿಕ್ಕಿ ಹೊಡೆದಿದೆ. ಕೆಲವರು ಆಶ್ರಯ ತಾಣದ ಬಳಿ ನಿಲ್ಲಿಸಿದ್ದ ಆಟೋರಿಕ್ಷಾದೊಳಗೆ ಕುಳಿತಿದ್ದರು ಎನ್ನಲಾಗಿದೆ.


ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top