ಹಿಂದೂ ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ ಮುನಿಯಾಲು
ಅನಾರೋಗ್ಯ ಪೀಡಿತರಿಗೆ ಸಹಾಯಧನ ಹಾಗೂ ವೀಲ್ ಚಯರ್ ವಿತರಣೆ




ಮುದ್ರಾಡಿ: ಮುದ್ರಾಡಿಯ ಮಹಾಗಣಪತಿ ಸೇವಾಸಂಘದ ನೂತನವಾಗಿ ನಿರ್ಮಾಣವಾದ ಸಭಾಭಾವನದಲ್ಲಿ 12 ನೇ ವರ್ಷದ ಸಭಾ ಕಾರ್ಯಕ್ರಮವನ್ನು ಸಂಘದ ಗೌರವಾಧ್ಯಕ್ಷ ಡಾ . ಸುದರ್ಶನ್ ಹೆಬ್ಬಾರ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಮುಖ್ಯ ಅತಿಥಿಗಳಾಗಿ ಶಾಸಕ ವಿ ಸುನೀಲ್ ಕುಮಾರ್
ಪುಣೆ ಪಿಂಪ್ರಿ ನೆಹರು ನಗರ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಜಯಾನಂದ್ ಶೆಟ್ಟಿ ,ಮುನಿಯಾಲು ಸಂಜೀವಿನಿ ಗೋಧಾಮದ ರಾಮಕೃಷ್ಣ ಆಚಾರ್ , ಉದ್ಯಮಿ
ದಿನೇಶ್ ಪೈ , ಕಾಡುಹೊಳೆ ಜಂಗಮೇಶ್ವರ ಮಠದ ರಾಘವೇಂದ್ರ ಭಟ್, ಡಾ. ಎಂ ಎಸ್ ರಾವ್ , ಮುನಿಯಾಲು ಲಯನ್ಸ್ ಕ್ಲಬ್ ನ ಅಧ್ಯಕ್ಷ ಭುಜಂಗ ಶೆಟ್ಟಿ ,
ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿ , ಕೃಷ್ಣಕಾಂತ್ ನಾಯಕ್ ಮುನಿಯಲ್ ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಅಮೀನ್ , ಹಿಂದೂ ಹೆಲ್ಪಲೈನ್ ಜನಸೇವಾ ಟ್ರಸ್ಟ್ ಅಧ್ಯಕ್ಷ
ರಾಜೇಶ್ ಶೆಟ್ಟಿ ಪಾಲ್ಗೊಂಡರು.
ಹತ್ತು ಫಲಾನುಭವಿಗಳಿಗೆ ವೀಲ್ ಚೇರ್ ಮತ್ತು ಅನಾರೋಗ್ಯ ಪೀಡಿತರಿಗೆ ಧನ ಸಹಾಯವನ್ನು ವಿತರಿಸಲಾಯಿತು.
ಸುಹಾಸ್ ಶೆಟ್ಟಿ ಮುಟ್ಲುಪಾಡಿ ನಿರ್ವಹಿಸಿದರು. ರಾಮಚಂದ್ರ ನಾಯಕ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಚೈತನ್ಯ ಕಲಾವಿದರು ಬೈಲೂರು ಈ ತಂಡದಿಂದ ಅಷ್ಟಮಿ ನಾಟಕವನ್ನು ಪ್ರದರ್ಶಿಸಲಾಯಿತು.































